December 21, 2024

Bhavana Tv

Its Your Channel

ರೋಣ ನಗರದ ಅಭಿವೃದ್ಧಿ ಕುಂಠಿತ, ಸದಸ್ಯರಿಂದ ಆಕ್ರೋಶ ಮತ್ತು ಕುಡಿಯುವ ನೀರಿನ ಘಟಕಗಳಿಗೆ ಮೀಟರ್ ಅಳವಡಿಸಲು ಸದಸ್ಯರ ಆಗ್ರಹ

ರೋಣ : ಕುಡಿಯುವ ನೀರಿನ ಘಟಕದಲ್ಲಿ ಮೀಟರ್ ಅಳವಡಿಸುವಂತೆ ಪುರಸಭೆ ಸದಸ್ಯ ಗದಿಗೆಪ್ಪ ಕಿರೇಸೂರ ಆಗ್ರಹಿಸಿದರು. ಅವರು ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿಗಳಿಗೆ ಆಗ್ರಹಿಸಿದರು. ಕುಡಿಯುವ ನೀರಿನ ಘಟಕದಲ್ಲಿ ಮೀಟರ ಅಳವಡಿಸದೆ ಹಣವನ್ನು ಕಟ್ಟಿ ಎಂದು ಹೇಳಿದರೆ ಅವರು ಹೇಗೆ ಕಟ್ಟಬೇಕು. ಮೀಟರ್ ಅಳವಡಿಕೆಯಲ್ಲಿ ಲೋಪವಾಗಿದೆ ಎಕಾಎಕಿ 1.35 ಲಕ್ಷ ರೂ ಬಿಲ್ಲನ್ನು ನೀಡಿದರೆ ಗುತ್ತಿಗೆದಾರರು ಯಾವ ಆಧಾರದ ಮೇಲೆ ಬಿಲ್ಲನ್ನು ಕಟ್ಟಬೇಕು. ಪುರಸಭೆ ವ್ಯಾಪ್ತಿಯಲ್ಲಿ 5 ನೀರಿನ ಘಟಕದಲ್ಲಿ 1 ಘಟಕಕ್ಕೆ ಮಾತ್ರ ಮೀಟರ್ ಅಳವಡಿಕೆ ಇದ್ದು ಉಳಿದೆಲ್ಲವು ಮೀಟರ್ ಇಲ್ಲದೆ ಹಾಗೆ ಇವೆ, ಅಧಿಕಾರಿಗಳು ಗುತ್ತಿಗೆದಾರರು ಹಗಲು ದರೋಡೆ ಮಾಡುತ್ತಿದ್ದಾರೆ, ಗುತ್ತಿಗೆನಿರ್ವಹಣೆ ಅವಧಿ ಮುಗಿದಿದೆ ಕೂಡಲೆ ಅವುಗಳನ್ನು ಟೆಂಡರ ಕರೆಯಿರಿ ಅವುಗಳಿಗೆ ಮೀಟರ್ ಅಳವಡಿಸಿ ಸ್ವಲ್ಪ ಕಾಲವಧಿ ನೀಡಿ ಬಿಲ್ಲನ್ನು ಪಾವತಿಸಿಕೊಳ್ಳಿ, ಪುರಸಭೆ ಮಳಿಗೆಗಳನ್ನು ಟೆಂಡರ್ ಮುಗಿದು 2 ವರ್ಷಗಳಾದರು ಹಂಚಿಕೆಯಾಗಿಲ್ಲ ಅವುಗಳನ್ನು ಕೂಡಲೆ ಹಂಚಿಕೆ ಮಾಡಿ, ಎಚ್.ಎಪ್.ಸಿ ಯೋಜನೆ ಅಡಿಯಲ್ಲಿ ವಾಡ್ ðನಲ್ಲಿ ಬಾಕಿ ಇರುವ ಸಿ.ಸಿ.ರಸ್ತೆ ಹಾಗೂ ಶೌಚಾಲಯಕ್ಕೆ ಸಿ.ಡಿ ಮಾಡಿ ಎಂದು ದೂರಿದರು.
ಸದಸ್ಯ ಭಾವಸಾಬ ಬೇಟಗೇರಿ ಮಾತನಾಡಿ, ರೋಣ ಪಟ್ಟಣದಲ್ಲಿ ದೂಳು ಹೆಚ್ಚಾಗಿರುವುದರಿಂದ ಜನರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ ಆದರಿಂದ ಪಟ್ಟಣವನ್ನು ಕೂಡಲೆ ದೂಳು ಮುಕ್ತವನ್ನಾಗಿ ಮಾಡಿ ಎಂದು ಹೇಳಿದರು. ಸದಸ್ಯ ದುರಗಪ್ಪ ಹಿರೇಮನಿ ಮಾತನಾಡಿ, ಎಸ್.ಐ ಅವರು ವಾರದಲ್ಲಿ 3 ದಿನ ರೋಣ ಹಾಗೂ ನರೇಗಲ್ಲನಲ್ಲಿ ಕಾರ್ಯ ನಿರ್ವಹಿಸಬೇಕು ಆದರೆ ಅವರು ರೋಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಹಾಗೂ ಪೌರ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಕಿಟ್ ನೀಡುತ್ತಿಲ್ಲ ಎಂದು ಆರೋಪಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವಾಹನಗಳನ್ನು ಹಾಗೂ ಅದರ ಡೀಸೆಲ್ ಪರಿಶೀಲಿಸಿ ಖರ್ಚನ್ನು ನೀಡಬೇಕು ಎಂದು ಸದಸ್ಯ ಸಂಗಪ್ಪ ಜಿಡ್ಡಿಬಾಗಿಲ ಹೇಳಿದರು. ಶೌಚಾಲಯ ಹಣವನ್ನು ಶೀಘ್ರದಲ್ಲಿ ತಾಂತ್ರಿಕ ತೊಂದರೆ ಬಗೆಹರಿಸಿ ಅವರ ಖಾತೆಗಳಿಗೆ ಜಮಾ ಮಾಡಿ ಎಂದು ಸದಸ್ಯ ವಿಜಯ ಗಡಗಿ ಹೇಳಿದರು. ಸದಸ್ಯ ಸಂತೋಷ ಕಡಿವಾಲ ಮಾತನಾಡಿ, ವಾರ್ಡಿನಲ್ಲಿರುವ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ, ಜನರು ಕತ್ತಲಲ್ಲಿ ನಡೆದಾಡುವ ಪರಸ್ಥಿತಿ ಬಂದಿದೆ, ಹಾಗೂ ಹೈಮಾಸ್ಕ್ ಹಾಗೂ ಡಿವೈಡರ್ ದೀಪಗಳ ದುರಸ್ಥಿ ಮಾಡುಸುವಂತೆ ಆಗ್ರಹಿಸಿದರು. ಈ ವೇಳೆ ಅನೇಕ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು. ಈ ವೇಳೆ ಪುರಸಭೆ ಅಧ್ಯಕ್ಷೆ ರಂಗವ್ವ ಭಜಂತ್ರಿ, ಉಪಾಧ್ಯಕ್ಷ ಮಿಥುನ.ಜಿ.ಪಾಟೀಲ, ಮುಖ್ಯಾಧಿಕಾರಿ ಮಾಂತೇಶ ಬೀಳಗಿ, ಸರ್ವ ಸದಸ್ಯರು ಹಾಗೂ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಂತರ ವಾರ್ಷಿಕ ಬಜೆಟ್ ಮಂಡನೆಯನ್ನು ಪ್ರಭಾರ ಮುಖ್ಯ ಅಧಿಕಾರಿ ಮಾಂತೇಶ ಬೀಳಗಿ ಮಾಡಿ ಬಜೆಟ್ ಕುರಿತು ಮಾತನಾಡಿದರು
ವರದಿ ; ವೀರಣ್ಣ ಸಂಗಳದ, ರೋಣ

error: