December 22, 2024

Bhavana Tv

Its Your Channel

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ರೋಣ: ಪ್ರವಾಸಿ ಮಂದಿರದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ತಾಲೂಕ ಅಧ್ಯಕ್ಷ ಎಂ. ಎಚ್. ನದಾಫ ನೇತೃತ್ವದಲ್ಲಿ ಬಹ್ಮಕುಮಾರಿ ಶ್ರೀದೇವಿ ನೀರುಹಾಕುವದರ ಮುಖಾಂತರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸಸಿಯು ಯಾವ ರೀತಿ ಬೆಳೆದು ಸರ್ವರಿಗೂ ಒಳ್ಳೆಯ ಫಲದೊಂದಿಗೆ ಉಸಿರಾಡಲು ಆಮ್ಲಜನಿಕ, ಹಾಗೂ ನೆರಳನ್ನು ನೀಡುವುದೋ ಅದೇ ರೀತಿ ನಾವು ನೀವೆಲ್ಲರೂ ಒಳಿತನ್ನು ಬಯಸೋಣ ಎಂದರು. ಯಾವುದೇ ಕಾರ್ಯಕ್ರಮವನ್ನು ನಡೆಸುವ ಮುನ್ನ ಸಸಿ ನೀರುಣಿಸು ಉದ್ದೇಶ ಸಕಲ ಜೀವಿಗಳಿಗೂ ಒಳಿತನ್ನೇ ಬಯಸುವ ಸಸಿಯಂತೆ ನಾವು ಕೂಡಾ ಬದುಕಬೇಕೆಂಬ ಸದುದ್ದೇಶ ಇದರಲ್ಲಿ ಅಡಗಿದೆ. ಆದ್ದರಿಂದ ನಾವು ಸ್ತ್ರೀಯರು ನಮಗೆ ದೇಶದಲ್ಲಿ ವಿಶಿಷ್ಟ ಸ್ಥಾನಮಾನ ವಿದೆ ಎಂದರು.

ಈ ಕಾರ್ಯಕ್ರಮದಲ್ಲಿ ತಾಲೂಕ ಮಹಿಳಾ ಅಧ್ಯಕ್ಷೆ ದೀಪಾ ಚಿತ್ರಗಾರ, ತಾಲೂಕ, ಉಪಾಧ್ಯಕ್ಷೆ ಕವಿತಾ ಕುಲಕರ್ಣಿ ನಗರದ ಅಧ್ಯಕ್ಷ ಮುನ್ನ, ಕೊಪ್ಪಳ, ಉಪಾಧ್ಯಕ್ಷ ಐ ಎಲಿಗಾರ್, ಸರೋಜಾ ಕೊಲ್ಲೂರ್, ಸಲೀಂ ಝಲವರ್, ಲಕ್ಷ್ಮಿ ಕುಲಕರ್ಣಿ, ಈರಮ್ಮ ಪಾಟೀಲ ಉಪಸ್ಥಿತರಿದ್ದರು.
ವರದಿ ವೀರಣ್ಣ ಸಂಗಳದ

error: