ರೋಣ : ದಿನಾಂಕ;16-03-2022 ರಂದು ಮಾನ್ಯ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ , ಮಂಜುನಾಥ ಮಾಲಿಪಾಟೀಲ ಅಬಕಾರಿ ಉಪ ಅಧೀಕ್ಷಕರು ಗದಗ ಉಪ ವಿಭಾಗ, ಗಂಗಾಧರ ಭೀ ಬಡಿಗೇರಿ ಅಬಕಾರಿ ನಿರೀಕ್ಷಕರು ರೋಣ ವಲಯ, ಶೈನಾಜ ಬೇಗಂ ಅಬಕಾರಿ ನಿರೀಕ್ಷಕರು ಅಬಕಾರಿ ಉಪ ಆಯುಕ್ತರ ಕಛೇರಿ ಗದಗ ಜಿಲ್ಲೆ , ಅಬಕಾರಿ ನಿರೀಕ್ಷಕರುಗಳಾದ ನಾರಾಯಣ ಪವಾರ, ಪರಶುರಾಮ ವಡ್ಡರ, ಬಸವರಾಜ ಜಾಮಗೊಂಡ, ಮಹೇಶ ಕುಂಬಾರ, ಸುವರ್ಣಾ ಕೋಟಿ ಹಾಗೂ ಜಿಲ್ಲೆಯ ಎಲ್ಲಾ ಅಬಕಾರಿ ಉಪ ನಿರೀಕ್ಷಕರು ಕಾರ್ಯನಿರ್ವಾಹಕ ಸಿಬ್ಬಂದಿಗಳು ಸೇರಿಕೊಂಡು ರೋಣ ವಲಯ ವ್ಯಾಪ್ತಿಯ ಗಜೇಂದ್ರಗಡ ತಾಂಢಾ, ರಾಜೂರು ತಾಂಡಾ, ಗುಡ್ಡದಬೈರಾಪೂರ ತಾಂಡಾಗಳಲ್ಲಿ ಸಾಮೂಹಿಕ ಅಬಕಾರಿ ದಾಳಿಯನ್ನು ನಡೆಸಲಾಯಿತು.
ಗಜೇಂದ್ರಗಡ ತಾಂಡಾದ ಕೃಷ್ಣಾ ಸೋಮಪ್ಪ ಅಜಮೀರ ಮನೆಯಲ್ಲಿ 02 ಲೀಟರ ಕಳ್ಳಬಟ್ಟಿ ಸರಾಯಿ ಮತ್ತು 15 ಲೀಟರ ಬೆಲ್ಲದ ಕೊಳೆ ವಶಪಡಿಸಿಕೊಂಡು ಶೈನಾಜ ಬೇಗಂ ಅಬಕಾರಿ ನಿರೀಕ್ಷಕರು ಅಬಕಾರಿ ಉಪ ಆಯುಕ್ತರ ಕಛೇರಿ ಗದಗ ಜಿಲ್ಲೆ ರವರು ಪ್ರಕರಣ ದಾಖಲಿಸಿ ಸದರಿ ಆರೋಪಿತನನ್ನು ದಸ್ತಗಿರಿಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಮತ್ತು ದಾಳಿಯ ಕಾಲಕ್ಕೆ ರಾಜೂರು ತಾಂಡಾದ ವಿಶ್ವನಾಥ ಭೀಮಪ್ಪ ಚವ್ಹಾಣ ಮನೆಯಲ್ಲಿ 02 ಲೀಟರ ಕಳ್ಳಭಟ್ಟಿ ಸರಾಯಿಯನ್ನು ವಶಪಡಿಸಿಕೊಂಡು ಶ್ರೀ ಬಿ.ಎಂ.ನಿಡಗುAದಿ ಅಬಕಾರಿ ಉಪ ನಿರೀಕ್ಷಕರು-2 ರೋಣ ವಲಯ ರವರು ಪ್ರಕರಣ ದಾಖಲಿಸಿ ಸದರಿ ಆರೋಪಿತನನ್ನು ದಸ್ತಗಿರಿಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ