December 22, 2024

Bhavana Tv

Its Your Channel

ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಮತ್ತು ನೇತ್ರದಾನ ಶಿಬಿರ

ರೋಣ ;- ಅಪ್ಪು ಅಭಿಮಾನಿ ಬಳಗ ಮತ್ತು ಅಖಿಲ ಕರ್ನಾಟಕ ಡಾಕ್ಟರ್ ರಾಜ್ ಕುಮಾರ್ ಒಕ್ಕೂಟ ಇವರಿಂದ ಹುಟ್ಟುಹಬ್ಬದ ಪ್ರಯುಕ್ತ ಕೊತಬಾಳ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ನೇತ್ರದಾನ ಶಿಬಿರ ಹಮ್ಮಿಕೊಂಡಿದ್ದರು ಇದರ ಉದ್ಘಾಟಕರಾಗಿ ಮಾ ನೀ ಪಾ ಗಂಗಾಧರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು . ಅಕ್ಟೋಬರ 29ರಂದು ಇಡೀ ಕರುನಾಡಿಗೆ ಬರ ಸಿಡಿಲು ಬಡಿದಿತ್ತು. ಯಾರೂ ಊಹಿಸಿರದಂಥ ಘಟನೆ ನಡೆದು ಹೋಗಿತ್ತು. ದೊಡ್ಡನೆಯ ಕೊನೆಯ ಕುಡಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಯಾರಿಗೂ ಹೇಳದೇ ಕೇಳದೇ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಇಂದು ಅವರು ಇದ್ದಿದ್ದರೆ ಅದರ ಸಂಭ್ರಮವೇ ಬೇರೆಯಾಗಿರುತ್ತಿತ್ತು. ಎಂದು ರುದ್ರಗೌಡ ತಮ್ಮಣ್ಣಗೌಡ ಹೇಳಿದರು

ಅಪ್ಪ ಅವರು ಜೀವಂತವಾಗಿದ್ದರೆ ನಿನ್ನೆ ತಡರಾತ್ರಿ ಯಿಂದಲೇ ಅಪ್ಪು ಮನೆ ಮುಂದೆ ಜನಸಾಗರ ಸೇರುತ್ತಿತ್ತು. ಆದರೆ, ದೈವ ಇಚ್ಛೆಯೇ ಬೇರೆಯಾಗಿತ್ತು. ಇಂದು ಅಪ್ಪು ನಮ್ಮ ಜೊತೆ ದೈಹಿಕವಾಗಿ ಇರದೇ ಹೋದರು, ನಮ್ಮ ಜೊತೆ ಇದ್ದೆ ಇರುತ್ತಾರೆ. ಇಂದು
ಅಪ್ಪು ಇದ್ದಿದ್ದರೆ 47ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಅಪ್ಪು ಇಲ್ಲದೇ ಮೊದಲ ಹುಟ್ಟುಹಬ್ಬವನ್ನು ಆಚರಿಸುತ್ತಾ, ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಅಭಿಮಾನಿಗಳು ಎಂದರು.

ಪವರ್ ಸ್ಟಾರ್ ಪುನೀತ್ ರಾಜ್, ಕುಮಾರ್ ಅವರು ನಮ್ಮಿಂದ ದೂರಾಗಿದ್ದರೂ, ಇಂದು ನಮ್ಮನೆಲ್ಲ ರಂಜಿಸುತ್ತಿದ್ದಾರೆ. ಜೇಮ್ಸ್ ಸಿನಿಮಾದ ಮೂಲಕ ಇಂದು ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿರುವ ಅಪ್ಪ ನೋಡಿ ಎಲ್ಲರೂ ಮತ್ತೆ ಕಣ್ಣೀರಿಡುತ್ತಿದ್ದಾರೆ. ಅಪ್ಪು ಅವರ ಅಭಿನಯ, ಡ್ಯಾನ್ಸ್ ಫೈಟ್ ಎಲ್ಲವೂ ಜೇಮ್ಸ್ ಸಿನಿಮಾದಲ್ಲಿ ಅದ್ಭುತವಾಗಿದೆ. ಅದನೆಲ್ಲ ಕಂಡು ಅಪ್ಪು ಅಭಿಮಾನಿಗಳು ಚಿತ್ರಮಂದಿರದಲ್ಲಿ ಕೊರಗುತ್ತಿದ್ದಾರೆ ಎಂದು ಕಂಬನಿ ಮಿಡಿದರು.

ಇದೇ ಸಂದರ್ಭದಲ್ಲಿ ಸಂತೋಷ ಕಡಿವಾಲ, ಉಮೇಶ ಕೋರಿ, ಅಶೋಕ ಯಲಬುರ್ಗಾ, ರುದ್ರಪ್ಪ ಹೆಬ್ಬಳ್ಳಿ ಪ್ರಭು, ಮಾರನಬಸರಿ ಶರಣಪ್ಪ ಗಾಣಿಗೇರ, ಉಮೇಶ ಪಾಟೀಲ ವೀರಣ್ಣ ಯಾಳಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೊತಬಾಳ ಶಂಕ್ರಪ್ಪ, ಉಮೆಚ್ಚುಗಿ ಮುತ್ತಣ್ಣ, ಮಾಡಲಗೇರಿ ಮುತ್ತು, ರಾಜು ಹಿರೇಮಠ, ಇನ್ನೂ ಅಪ್ಪು ಅಭಿಮಾನಿಗಳು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: