ರೋಣ ಬೂದಿಹಾಳ ಗ್ರಾಮದ ಶ್ರೀ ಕಲ್ಮೇಶ್ವರ ಭಕ್ತ ಮಂಡಳಿಯವರು ಶ್ರೀಶೈಲಕ್ಕೆ ಶುಕ್ರವಾರ ೧೨ ದಿನಗಳ ಪಾದಯಾತ್ರೆ ಕೈಗೊಂಡರು.
ಯುಗಾದಿ ಅಂಗವಾಗಿ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾ ನಿಮಿತ್ತ ಬೂದಿಹಾಳ ಗ್ರಾಮದಿಂದ ಪ್ರತಿ ವರ್ಷ ೫೦ ರಿಂದ ೧೦೦ಕ್ಕೂ ಹೆಚ್ಚು ಸರ್ವ ಜನಾಂಗದವರು ಸೇರಿದಂತೆ ಬೂದಿಹಾಳ, ಕುರಹಟ್ಟಿ, ಅಬ್ಬಿಗೇರಿ, ರೋಣ, ಹಾಳಕೆರೆ, ಇಮ್ರಾಪೂರ ಹಾಗೂ ಸುತ್ತಮುತ್ತಲಿನ ಊರುಗಳಿಂದ ಆಗಮಿಸಿದ್ದ ಭಕ್ತರು ಒಟ್ಟಾಗಿ ಕಲ್ಲಯ್ಯಜ್ಜ ಹಿರೇಮಠ ಇವರ ನೇತೃತ್ವದಲ್ಲಿ ಸತತವಾಗಿ ಇಪ್ಪತ್ತು ವರ್ಷಗಳಿಂದ ಪಾದಯಾತ್ರೆ ಮೂಲಕ ಶ್ರೀಶೈಲಂ ಶಿಖರಕ್ಕೆ ಮಲ್ಲಯ್ಯನ ಶಿವಭಕ್ತರು ಪಾದಯಾತ್ರೆ ಮಾಡುತ್ತಾ ಬಂದಿದ್ದಾರೆ.
ಬೂದಿಹಾಳದಿAದ ಮಾರನಬಸರಿ, ನಿಡಗುಂದಿ, ಗಜೇಂದ್ರಗಡ, ಕುಷ್ಟಗಿ, ಗುಡದೂರು, ಛತ್ರ, ಬೊಗಾಪೂರ, ಮ್ಯಾದಿಕನಾಳ, ಮಸ್ಕಿ, ಬಳಗಾನೂರ, ದಿದ್ಗಿ, ಪೋತ್ನಾಳ ಕ್ರಾಸ್, ಜಾಹೀರಕೊಡ, ಆಂಧ್ರಗಡಿಯ ಮೂಲಕ ಸಾಗಿ ಕರೆಹೊಳ್ಳಿ, ಕರ್ನೂಲ್, ಆತ್ಮಕೂರು, ವೆಂಕಟಾಪುರ ಮಾರ್ಗವಾಗಿ ಮಾರ್ಚ್ ೩೦ ರಂದು ಶ್ರೀಶೈಲ ತಲುಪಲಿದ್ದಾರೆ.
ದಾರಿಯುದ್ದಕ್ಕೂ ಹಲವಾರು ದಾನಿಗಳು ಪಾದಯಾತ್ರಾರ್ಥಿಗಳಿಗೆ ಅಲ್ಪೋಪಹಾರ, ಊಟ, ವಸತಿ ಮತ್ತು ಔಷಧೋಪಚಾರ ವ್ಯವಸ್ಥೆ ಮಾಡುತ್ತಾರೆ ಎಂದು ಕಲ್ಲಯ್ಯಜ್ಜ ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕೂ ಮೊದಲು ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮಗಳು ನಡೆದವು.
ಬಸನಗೌಡ ಪಾಟೀಲ, ರವೀಂದ್ರ ಪಾಟೀಲ, ಪ್ರಕಾಶ್ ಪಾಟೀಲ, ಭೀಮಪ್ಪ ಬೆನಹಾಳ, ಆನಂದ ಪಾಟೀಲ, ನಿಂಗರಡ್ಡೇಪ್ಪ ಕರಮುಡಿ, ಅಂದಪ್ಪ ಹೊಸಗೌಡ್ರ, ಶಿವಯ್ಯ ಶಿವಪೂಜಿ, ಮಲ್ಲಪ್ಪ ಹರ್ಲಾಪೂರ, ದುರ್ಗಪ್ಪ ಮಾದರ ಇನ್ನು ಅನೇಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಗ್ರಾಮದ ಪ್ರಮುಖ ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ಮಲ್ಲಯ್ಯ ಶಿವಸ್ತುತಿ ಮಾಡಿ ಬೂದಿಹಾಳ ಗ್ರಾಮದ ಸಕಲ ಭಕ್ತರು ಬೀಳ್ಕೊಟ್ಟರು.
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ