ಗದಗ: ತಾಲ್ಲೂಕು ತಿಮ್ಮಾಪೂರ ಗ್ರಾಮದಲ್ಲಿ ನೆಕ್ಸ್ಟ್ ಎಂಎಲ್ ಜಿಎಸ್ ಪಾಟೀಲ, 2023 ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾ ಬರೆದ ಬಾಳೆ ಹಣ್ಣನ್ನ ರಥದ ಮೇಲೆ ಎಸೆಯುವ ಮೂಲಕ ತಿಮ್ಮಾಪುರ ಗ್ರಾಮದ ಯುವಕರು ಹರಿಕೆ ಕಟ್ಟಿಕೊಂಡಿದ್ದಾರೆ..
ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸದಲ್ಲಿ ಗ್ರಾಮದ ಯುವಕರು ವಿಶಿಷ್ಠವಾಗಿ ಹರಕೆ ಕಟ್ಟಿಕೊಂಡಿದ್ದಾರೆ.. ತಿಮ್ಮಾಪುರ ಗ್ರಾಮದ ಯುವಕ ಸುರೇಶ್ ಆಲೂರು ಮತ್ತು ತಂಡ ರಥದ ಕಲಶಕ್ಕೆ ಹಣ್ಣು ಎಸೆದು ಮನೋಕಾಮನೆ ಸಿದ್ಧಿಯಾಗುವಂತೆ ಹನುಮದೇವರಲ್ಲಿ ಮೊರೆ ಇಟ್ಟಿದ್ದಾರೆ. ರಥದ ಕಲಶಕ್ಕೆ ಈ ರೀತಿ ಹಣ್ಣು ಎಸೆದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಗ್ರಾಮಸ್ಥರದ್ದು.. ಹೀಗಾಗಿ, ಮಾಜಿ ಸಿಎಮ್ ಸಿದ್ದರಾಮಯ್ಯ, ಮಾಜಿ ಶಾಸಕ ಜಿಎಸ್ ಪಾಟೀಲರ ಹೆಸರನ್ನ ಬರೆದ ಗ್ರಾಮದ ಯುವಕರು ರಥಕ್ಕೆ ಅರ್ಪಿಸಿದ್ದಾರೆ..
ರಾಜ್ಯದ ವಿವಿಧ ಜಾತ್ರಾ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅವರ ಹೆಸರಲ್ಲಿ ಬಾಳೆ ಹಣ್ಣು ಎಸೆಯಲಾಗಿದೆ.. ಈ ಬಾರಿಯ ತಿಮ್ಮಾಪುರ ಗ್ರಾಮದಲ್ಲೂ ಸಿದ್ದರಾಮಯ್ಯ ಅವರ ಹೆಸರು ಬರೆದು ರಥದ ಕಳಸಕ್ಕೆ ಎಸೆಯಲಾಗಿದೆ.. ಜೊತೆಗೆ ಗದಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ರೋಣ ಮತ ಕ್ಷೇತ್ರದ ಕಾಂಗ್ರೆಸ್ ನಾಯಕ ಜಿಎಸ್ ಪಾಟೀಲ ಅವರು ಮುಂದಿನ ಎಮ್ ಎಲ್ ಎ ಅಂತ ಬರೆದಿರುವ ಫೋಟೋಗಳು ವೈರಲ್ ಆಗಿವೆ.. ವಿಧಾನಸಭಾ ಚುನಾವಣೆಯಲ್ಲಿ ಕಳೆದಬಾರಿ 4 ಸಾವಿರ ಮತಗಳ ಅಲ್ಪ ಅಂತರದಿAದ ಬಿಜೆಪಿಯ ಕಳಕಪ್ಪ ಬಂಡಿ ಗೆದ್ದಿದ್ದರು.. ಈ ಬಾರಿ ಬಹುಮತದಿಂದ ಜಿ ಎಸ್ ಪಾಟೀಲ ಗೆಲ್ಲಬೇಕು ಅಂತಾ ಗ್ರಾಮದ ಕಾಂಗ್ರೆಸ್ ಸಮರ್ಥಕರು ಪ್ರಾರ್ಥನೆ ಸಲ್ಲಿಸಿದ್ದಾರೆ..
ಐದು ದಿನಗಳ ಕಾಲ ನಡೆಯುವ ಅದ್ಧೂರಿ ಜಾತ್ರೆ:-ಹನುಮ ದೇವರಿಗೆ ಯುಗಾದಿಯಂದು ಪೂಜೆ ಸಲ್ಲಿಸುವ ಮೂಲಕ ಜಾತ್ರೆ ಆರಂಭವಾಗುತ್ತೆ.. ಏಪ್ರಿಲ್ ಮೂರಕ್ಕೆ ಅಂದ್ರೆ ಮರುದಿನ ಗೋಪಾಳ ತುಂಬಿಸುವ ಕಾರ್ಯಕ್ರಮ ನಡೆಯುತ್ತದೆ.. ಕಾರ್ಯಕ್ರಮದ ನಿಮಿತ್ತ ಊರ ಜನರು ಗೋದಿ ಹುಗ್ಗಿ ತಯಾರು ಮಾಡುವ ಮೂಲಕ ಹಂಚಿ ಊಟ ಮಾಡಿ ಸಂಭ್ರಮಿಸುತ್ತಾರೆ.. ಸೋಮವಾರ ಗರುಡ ಕಂಬಕ್ಕೆ ಅಭಿಷೇಕ ಮಾಡುವ ಮೂಲಕ ಹೋಮ ಹವನ ಮಾಡಲಾಗಿದೆ.. ಜೊತೆಗೆ ಹನುಮ ದೇವರು ಹೊಂಡ ತುಳುಕಿಸುವ ಅದ್ದೂರಿ ಆಚರಣೆ ನಡೆಯುತ್ತೆ.. ಹೊಂಡದಲ್ಲಿ ಬಣ್ಣದ ನೀರು ಮಿಶ್ರಣ ಮಾಡಿ ಊರ ಯುವಕರು ಆಟವಾಡ್ತಾರೆ.. ಹೀಗೆ ಮಾಡಿದ್ರೆ ಊರಲ್ಲಿ ಸಮೃದ್ಧಿ ಮನೆ ಮಾಡುತ್ತೆ ಅನ್ನೋದು ಗ್ರಾಮಸ್ಥರ ನಂಬಿಕೆ..
ಕೊರೊನಾ ಕಾಲದ ನಂತರ ಮತ್ತೊಮ್ಮೆ ಅದ್ದೂರಿ ಜಾತ್ರೆ ನಡೆದಿದ್ದು.. ಭಕ್ತರು ತಮ್ಮ ಮನೋಕಾಮನೆಗಳನ್ನ ದೇವರೆದುರು ಮನಸ್ಸು ಬಿಚ್ಚಿ ಬೇಡಿಕೊಂಡಿದ್ದಾರೆ.. ಗ್ರಾಮಸ್ಥರ ಪೂಜೆಗೆ ಫಲ ಸಿಕ್ಕುತ್ತಾ ಅನ್ನೋದನ್ನ ಸಮಯ ನಿರ್ಧಾರ ಮಡಲಿದೆ
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ