ಗದಗ: ಆಕಸ್ಮಿಕ ಬೆಂಕಿ ತಗುಲಿ ಬಣವೆಗಳು ಸುಟ್ಟು ಭಸ್ಮವಾಗಿರುವ ಘಟನೆ ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದಿದೆ. ಹೌದು ಆಕಸ್ಮಿಕ ಬೆಂಕಿಗೆ ೧೪ಕ್ಕೂ ಹೆಚ್ಚು ಬಣವೆಗಳು ಸುಟ್ಟು ಕರಕಲು ಆಗಿವೆ. ಅಂದಾಜು ಐದು ಲಕ್ಷ ರೂಪಾಯಿ ಮೌಲ್ಯದ ಕಡಲೆ ಹೊಟ್ಟು,ಗೋಧಿ ಹೊಟ್ಟು ,ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಬಣವೆಗಳ ಹಾನಿ ಕಂಡು ರೈತರು ಕಂಗಾಲಾಗಿದ್ದಾರೆ. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಬೆಳೆ ಬೆಳೆದು ಅದರಿಂದ ಮೇವು ಹೊಟ್ಟು ತೆಗೆದುಕೊಂಡು ಕೂಡು ಹಾಕಿದರು. ಆದ್ರೆ ರಾತ್ರೋ ರಾತ್ರಿ ಬೆಂಕಿಗೆ ಆಹುತಿಯಾಗಿವೆ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲಿ ಹರಸಾಹಸ ಪಟ್ಟಿದ್ದಾರೆ. ಇನ್ನು ಅಗ್ನಿಗೆ ಅಹುತಿಯಾದ ಬಣವೆ ಕಂಡು ರೈತರು ಗೋಳಾಡುತ್ತಿದ್ದಾರೆ. ಹಾನಿಯಾದ ಬಣವೆಗಳಿಗೆ ಸರ್ಕಾರ ಸೂಕ್ತವಾದ ಪರಿಹಾರ ನೀಡಬೇಕು ಸರ್ಕಾರಕ್ಕೆ ಮನವಿ ಮಾಡಿದ ರೈತರು. ಮಾಂತೇಶ ಜಿಡ್ಡಿಬಾಗಿಲ, ಈರಪ್ಪ ಜಿಡ್ಡಿಬಾಗಿಲು, ರಾಮಣ್ಣ ಮಾಡಲಗೇರಿ, ಶಿರುಕ್ಕೋಜಿ ಈ ಕುರಿತು ರೋಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ