December 19, 2024

Bhavana Tv

Its Your Channel

ಏ. 11 ರಂದು ಜಕ್ಕಲಿಗೆ ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರ ಪುರ ಪ್ರವೇಶ ಕಾರ್ಯಕ್ರಮ

ರೋಣ :– ನರೇಗಲ್ಲ ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾಧೀಶರು ಗಂಜಿಹಾಳ, ಹೊಸಪೇಟೆ, ಬಳ್ಳಾರಿ, ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ನೂತನ ಪೀಠಾಧಿಪತಿಗಳಾದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರು ಸಮೀಪದ ಜಕ್ಕಲಿ ಗ್ರಾಮಕ್ಕೆ ಏ. 11ರ ಸೋಮವಾರ ಸಾಯಂಕಾಲ 4 ಗಂಟೆಗೆ ಶ್ರೀ ಬನಶಂಕರಿ ದೇವಸ್ಥಾನದ ಮುಖ್ಯದ್ವಾರದಿಂದ ಪುಷ್ಪಾಲಂಕಾರದೊAದಿಗೆ ಭವ್ಯವಾದ ಅಶ್ವಾರೂಢ ಸಾರೋಟು ಮೆರವಣಿಗೆಯ ಮೂಲಕ ಪುರ ಪ್ರವೇಶ ಮಾಡುವರು ಎಂದು ಜಕ್ಕಲಿಯ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಸದ್ಭಕ್ತ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಅಂಗವಾಗಿ ಡೊಳ್ಳು ಸಕಲ ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಿಂದ ಶ್ರೀ ಕಲ್ಮೇಶ್ವರ ದೇವಸ್ಥಾನದವರೆಗೆ ಮೆರವಣಿಗೆಯು ಸಂಚರಿಸಿ. ಬಳಿಕ ಶ್ರೀಗಳವರ ಮಠದವರೆಗೆ ಮೆರವಣಿಗೆಯು ಹಿಂತಿರುಗಿ ಸಾಗಿ ತಲುಪಲಿದೆ. ನಂತರ ಸಾಯಂಕಾಲ 5 ಗಂಟೆಗೆ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ, ಪೂಜ್ಯ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಇನ್ನಿತರೆ ಸ್ವಾಮೀಜಿಗಳ ಸಮ್ಮುಖದಲ್ಲಿ ಧರ್ಮ ಸಭೆ ಸಮಾರಂಭ ನಡೆಯಲಿದೆ.
ಗ್ರಾಮದ ಹಾಗೂ ಸುತ್ತಮುತ್ತಲಿನ ಸಕಲ ಸದ್ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಾರ್ಥಿಸಿದ್ದಾರೆ.

ವರದಿ ವೀರಣ್ಣ ಸಂಗಳದ

error: