December 22, 2024

Bhavana Tv

Its Your Channel

ಹಾಲಕೆರೆ ಸ್ವಾಮೀಜಿಯವರ ಜಕ್ಕಲಿ ಪುರ ಪ್ರವೇಶ, ವೈಭವದ ಮೆರವಣಿಗೆ

ರೋಣ :- ನರೇಗಲ್ಲ.ಸಮೀಪದ ಜಕ್ಕಲಿ ಗ್ರಾಮದಲ್ಲಿ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ನೂತನ ಪೀಠಾಧಿಪತಿಗಳಾದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರ ಪುರ ಪ್ರವೇಶ ಕಾರ್ಯಕ್ರಮವು ವೈಭವದ ಮೆರವಣಿಗೆಯ ಮೂಲಕ ಬಹು ವಿಜೃಂಭಣೆಯಿAದ ಸೋಮವಾರ ಸಂಜೆ ನಡೆಯಿತು.
ಹಾಲಕೆರೆಯಿಂದ ಮಾರನಬಸರಿ ಮಾರ್ಗವಾಗಿ ನೇರವಾಗಿ ಗ್ರಾಮಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ಊರಿನ ಗುರು ಹಿರಿಯರು ಅವರ ಕೊರಳಿಗೆ ಹೂವಿನ ಮಾಲೆ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು. ಸುಮಂಗಲಿಯರು ಆರತಿ ಬೆಳಗಿಸಿ ಭವ್ಯವಾದ ಸ್ವಾಗತ ಕೋರಿದರು.
ಗುಲಾಬಿ ಹೂವುಗಳಿಂದ ಹಾಗೂ ದೀಪಾಲಂಕೃತಗೊAಡಿದ್ದ ಅಶ್ವಾರೂಢ ಸಾರೋಟ ವಾಹನದಲ್ಲಿ ಏರಿದ ಸ್ವಾಮೀಜಿಯವರು ಸದ್ಭಕ್ತರೆಲ್ಲರನ್ನು ಆಶೀರ್ವದಿಸುತ್ತಾ ವಿರಾಜಮಾನರಾಗಿ ಕುಳಿತರು.

ಅಲ್ಲಿಂದಲೇ ಆರಂಭಗೊAಡ ಮೆರವಣಿಗೆ ರೋಣ ರಸ್ತೆ ಮಾರ್ಗವಾಗಿ ಮೆರವಣಿಗೆ ಮುಂದೆ ಸಾಗುತ್ತಾ ಶ್ರೀ ಬನಶಂಕರಿ ದೇವಸ್ಥಾನದ ಮುಖ್ಯದ್ವಾರದಿಂದ ಡೊಳ್ಳು ಕುಣಿತ, ಸಕಲ ವಾದ್ಯ ವೈಭವದೊಂದಿಗೆ ಮೆರವಣಿಗೆ ಮೂಲಕ ಪ್ರಪ್ರಥಮ ಬಾರಿಗೆ ಸ್ವಾಮೀಜಿಯವರು ಪುರ ಪ್ರವೇಶ ಮಾಡಿದರು.

ಈ ವೇಳೆಯಲ್ಲಿ ಶ್ರೀಗಳವರು ಪುರ ಪ್ರವೇಶ ಮಾಡುತ್ತಿದ್ದಂತೆಯೇ ಭಕ್ತರು ಶ್ರೀ ಅನ್ನದಾನೇಶ್ವರ ಮಹಾರಾಜ ಕೀ ಜೈ… ಶ್ರೀ ಮುಪ್ಪಿನ ಬಸವಲಿಂಗ ಮಹಾರಾಜ ಕೀ ಜೈ, ಎಂಬ ಘೋಷಣೆಗಳನ್ನು ಕೂಗಿದರು, ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಗ್ರಾಮದ ಪ್ರಮುಖ ರಸ್ತೆಯಿಂದ ಹೊರಟ ಮೆರವಣಿಗೆ ರಸ್ತೆಯುದ್ದಕ್ಕೂ ಮಹಿಳೆಯರೆಲ್ಲರೂ ತಮ್ಮ ಮನೆಯಂಗಳ ಸ್ವಚ್ಛಗೊಳಿಸಿ ನೀರು ಚಳೆ ಹೊಡೆದು, ಬಣ್ಣ ಬಣ್ಣದ ಚಿತ್ತಾರದ ರಂಗೋಲಿಯನ್ನು ಬಿಡಿಸಿದ್ದರು ಅದರ ಜೊತೆಗೆ ಸೇವಂತಿಗೆ ಹೂವಿನ ಹಾಸಿಗೆ ಹಾಕಿದ್ದರು.

ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಿಂದ ಶ್ರೀ ಕಲ್ಮೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಅದ್ದೂರಿಯಾಗಿ ಸಂಚರಿಸಿ, ಮರಳಿ ಶ್ರೀಗಳವರ ಶಾಖಾ ಮಠವನ್ನು ತಲುಪಿತು.

ಸುಮಂಗಲಿಯರು ಕಳಸದ ಆರತಿಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮೆರುಗನ್ನು ನೀಡಿದರು.

ಶ್ರೀ ಅನ್ನದಾನೀಶ್ವರ ಪಾಲಕಿ ಓಣಿಯ ಗೆಳೆಯರ ಬಳಗದ ಡ್ರಮ್ ಸಟ್ಟ್ ಮೇಳ, ಡೊಳ್ಳು ಕುಣಿತ ನೋಡುಗರ ಕಣ್ಮನ ಸೆಳೆದವು. ಕೆಲ ಜನರು ಡೊಳ್ಳು ಬಾರಿಸಿ ಗಮನ ಸೆಳೆದರು.

ಶ್ರೀ ಅನ್ನದಾನೇಶ್ವರ ಪಾಲಕಿ ಮಂಟಪ, ಶ್ರೀ ಕಲ್ಮೇಶ್ವರ ದೇವಸ್ಥಾನ, ಶ್ರೀ ವೀರೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ಶ್ರೀಗಳವರನ್ನು ಬರಮಾಡಿಕೊಂಡು ಭಕ್ತಿ ಭಾವದಿಂದ ಪಾದ ಪೂಜೆ ಸಲ್ಲಿಸಿ ಕಾಣಿಕೆಗಳನ್ನು ನೀಡಿದರು. ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ವರದಿ: ವೀರಣ್ಣ ಸಂಗಳದ

error: