December 22, 2024

Bhavana Tv

Its Your Channel

ಮಲ್ಲಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

ರೋಣ: ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿ ಎಂ.ಸುAದರೇಶ್ ಬಾಬು ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಮಲ್ಲಾಪುರ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಗ್ರಾಮದ ಗಣ್ಯರು, ಗ್ರಾಮದ ಮಹಿಳೆಯರಿಂದ ಆರತಿ ಮಾಡುವ ಮೂಲಕ ಜಿಲ್ಲಾಧಿಕಾರಿಗಳಿಗೆ ಸ್ವಾಗತಿಸಲಾಯಿತು. ಗ್ರಾಮದ ಆರಾಧ್ಯದೈವ ಶ್ರೀ ಆಜಂನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದು, ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿ ನೆಟ್ಟ ಜಿಲ್ಲಾಧಿಕಾರಿಗಳು ಪ್ರೌಢಶಾಲಾ ಕೈತೋಟ ನಿರ್ಮಾಣಕ್ಕೆ ಚಾಲನೆ ನೀಡಿದರು. ಪಶು ಸಂಗೋಪನಾ ಇಲಾಖೆಯಿಂದ ಜಾನುವಾರು ಆರೋಗ್ಯ ಶಿಬಿರ, ಆರೋಗ್ಯ ಇಲಾಖೆಯಿಂದ ಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ಕೋವಿಡ್ ಲಸಿಕ ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಕೃಷಿ ಇಲಾಖೆ ಯಂತ್ರಗಳ ಪ್ರದರ್ಶನ, ಉದ್ಯೋಗ ಖಾತ್ರಿ ಯೋಜನೆ ಜಾಗೃತಿ ಮಳಿಗೆಗಳಿಗೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಚಾಲನೆ ನೀಡಿ, ಸಾರ್ವಜನಿಕರು ಇವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಪ್ರೌಢಶಾಲೆಯಲ್ಲಿ ಶೌಚಾಲಯ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದರು.

ನಂತರ ಅಭಿವೃದ್ಧಿ ಮಹಿಳಾ ಮಕ್ಕಳ ಇಲಾಖೆಯಿಂದ ರಾಷ್ಟ್ರೀಯ ಪೋಷಣ ಅಭಿಯಾನದ ಆಹಾರ ಶಿಬಿರ ಉದ್ಘಾಟಿಸಿ, ಅಲ್ಲಿಯೇ ಅಂಗನವಾಡಿ ಮಕ್ಕಳ ಹುಟ್ಟುಹಬ್ಬವವನ್ನು ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿ, ಸಿಹಿ ತಿನ್ನಿಸಿದರು. ಹಾಗೂ ಗ್ರಾಮದ 12ಕ್ಕೂ ಅಧಿಕ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಮಾಡಿ, ಉಡಿ ತುಂಬಿದರು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುಶೀಲಾ ಜಿಲ್ಲಾಧಿಕಾರಿಗಳಿಗೆ ಸಾತ್ ನೀಡಿದರು. ಆವರಣದಲ್ಲಿ ಕುಡಿಯುವ ನೀರಿನ ಪರಿಶೀಲಿಸಿ, ಜಾನುವಾರುಗಳಿಗೆ ಏರ್ಪಡಿಸಿದ್ದ ಪಶು ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಪಂಚಾಯತ್ ವತಿಯಿಂದ 3 ಲಕ್ಷ ವೆಚ್ಚದಲ್ಲಿ ಬೂದು ನೀರು ನಿರ್ವಹಣಾ ಘಟಕ ಕಾಮಗಾರಿಗೆ ಚಾಲನೆ, ಸ್ವಚ್ಛ ಭಾರತ್ ಅಡಿಯಲ್ಲಿ

ಗ್ರಾಮ ಪಂಚಾಯಿತಿಯಿAದ ಮನೆಗಳ ಕಸ ವಿಲೇವಾರಿ ಮಾಡಲು ಕಸದ ಬುಟ್ಟಿ ವಿತರಿಸಿ 12 ಲಕ್ಷ ಅನುದಾನದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು. ಅಂಗನವಾಡಿ ಭೇಟಿ ನೀಡಿ ಮಕ್ಕಳ ತೂಕ ಪರೀಕ್ಷೆ, ಪೌಷ್ಟಿಕ ಆಹಾರ ಪೂರೈಕೆ ಬಗ್ಗೆ ಪರಿಶೀಲಿಸಿ, ಉತ್ತಮ ಶಿಕ್ಷಣ ನೀಡುವಂತೆ ಸೂಚಿಸಿದರು.

ತದನಂತರ ರುದ್ರಭೂಮಿ ಉದ್ಯೋಗ ಮಲ್ಲಾಪುರ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಯೋಜನೆಯಡಿ ಅಂದಾಜು 10 ಲಕ್ಷ ದಲ್ಲಿ ಅಭಿವೃದ್ಧಿ ಪಡಿಸಲು ಉಪಾಧ್ಯಕ್ಷ ಚಾಲನೆ ನೀಡಿದರು. ಗ್ರಾಮದ ಕೆರೆ ಕಾಮಗಾರಿ ಉಪವಿಭಾಗಾಧಿಕಾರಿ ವೀಕ್ಷಿಸಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಚೇರಿಯಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ, ಪಡಿತರದ ಸಂಗ್ರಹ, ವಿತರಣೆ ವ್ಯವಸ್ಥೆಯನ್ನು ಅವಲೋಕಿಸಿದರು. ಹಾಗೂ ಪಡಿತರ ವಿತರಣೆಯಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಸಬಾರದು ಎಂದರು. ಸಹಕಾರ ಸಂಘದ ಕಚೇರಿ ವೀಕ್ಷಿಸಿ ಸಾರ್ವಜನಿಕ ಆರ್ಥಿಕ ಅಭಿವೃದ್ಧಿ ಪಡಿಸುವಲ್ಲಿ ಸಹಕಾರ ಸಂಘ ಇನ್ನಷ್ಟು ಕಾರ್ಯೋನ್ಮುಖವಾಗಲಿ ಎಂದರು.

ಘಟಕ ಗ್ರಾಮದ ಎಸ್.ಸಿ.ಎಸ್.ಟಿ ಕಾಲೋನಿಗೆ ಭೇಟಿ ನೀಡಿ ಹಿಂದುಳಿದ ನೀಡಿ ಸಮುದಾಯದ ಜನರ ಸಮಸ್ಯೆಗಳನ್ನು ಆಲಿಸಿ ಮೂಲಭೂತ ಸೌಕರ್ಯಗಳ ಕುರಿತು ಅವಲೋಕಿಸಿದರು. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸಾರ್ವಜನಿಕರಿಗಾಗಿ ಏರ್ಪಡಿಸಿದ್ದ ಸಾಂಕ್ರಾಮಿಕ ರೋಗಗಳ ಜಾಗೃತಿ ಮೂಡಿಸುವ ಕಿರುಚಿತ್ರಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಅವರು ಚಾಲನೆ ನೀಡಿದರು.

ಉಪಸ್ಥಿತಿ ಮಲ್ಲಾಪುರ ಗಾಮ ಪಂಚಾಯಿತಿ ಅಧ್ಯಕ ಗಿರಿಜಮ ಹನುಮಂತಗೌಡ ಹುಲ್ಲೂರ, ರಾಯಪ ಹುಣಸಗಿ, ತಹಶೀಲ್ದಾರ್ ಜೆ.ಬಿ. ಜಕ್ಕನಗೌಡರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಲ್ಲೇಶ್, ಬಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವಲಿಂಗಪ್ಪ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ತಾನ ಎ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ವರ್ಗಗಳ ರವಿಕುಮಾರ, ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತುಂಬರಗಟ್ಟಿ, ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ವಸಂತ ಮಲ್ಲೂರ, ಪಿಡಿಓ ಲೋಹಿತ್ ಎಂ ಸೇರಿದಂತೆ ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವರದಿ ವೀರಣ್ಣ ಸಂಗಳದ

error: