December 22, 2024

Bhavana Tv

Its Your Channel

ಕೆವಿಜಿ ಬ್ಯಾಂಕ್‌ನಲ್ಲಿ ಒಟಿಎಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ

ರೋಣ:ರೈತ ಸಂಘ ಜಿಲ್ಲಾಧ್ಯಕ್ಷ ಮುತ್ತಣಗೌಡ ಚೌಡರೆಡ್ಡಿ ಮಾತನಾಡಿ, ಎಸ್‌ಬಿಐ ಬ್ಯಾಂಕ್ ಸೇರಿದಂತೆ ಬಹುತೇಕ ಬ್ಯಾಂಕ್‌ಗಳಲ್ಲಿ ಕೊಡುವ ಯೋಜನೆಯಡಿ 2020-21ರ ಪ್ರಕಾರ ಆ ಬ್ಯಾಂಕ್‌ಗಳ ಕಲ್ಪಿಸಿದ್ದು, ಅದರಂತೆ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನಲ್ಲಿಯೂ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ. ಈ ಕುರಿತು ಈಗಾಗಲೇ ಕೆವಿಜಿ ಬ್ಯಾಂಕ್ ರೈತ ಗ್ರಾಹಕರು ಸಾಕಷ್ಟು ಬಾರಿ ಶಾಖಾ ವ್ಯವಸ್ಥಾಪಕರಲ್ಲಿ ವಿನಂತಿಸಿದರೂ ಸ್ಪಂದನೆ ನೀಡುತ್ತಿಲ್ಲ. ಪಡೆದ ಸಾಲ, ಸಾಲದ ಬಡ್ಡಿ ಸೇರಿ ಒಂದು ನೈಯಾ, ಪೈಸೆನು ಕಡಿಮೆ ಮಾಡುವುದಿಲ್ಲ. ಪೂರ್ತಿ ಹಣ ತುಂಬುವAತೆ ರೈತರಿಗೆ ಪ್ರಾಯ ವ್ಯವಸ್ಥಾಪಕ ಸಿ ಎಂ, ಭಟ್ ವಿಪರೀತ ಕಿರಕುಳ ನೀಡುತ್ತಿದ್ದಾರೆ. ಅಲ್ಲದೇ ರೈತರ ಒಪ್ಪಿಗೆ ಪಡೆಯದೇ, ರೈತರ ಗಮನಕ್ಕೂ ತರದೇ ಎಸ್‌ಬಿ ಖಾತೆಯಲ್ಲಿದ್ದ ಹಣವನ್ನು ಸಾಲಕ್ಕೆ ಪಾವತಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಕೇಳಿದರೇ, ನೀವು ಮಾಡಿದ ಸಾಲಕ್ಕೆ, ನಿಮ್ಮ ಎಸ್‌ಬಿ ಖಾತೆಯಿಂದ ಹಣ ತೆಗೆದುಕೊಂಡಿದ್ದೇವೆ. ಸಾಲಕ್ಕೆ ಅಡಾವು ಇಟ್ಟಿರುವ ನಿಮ್ಮ ಜಮೀನನ್ನು ಕೂಡಲೇ ಮುಟ್ಟುಗೋಲು ಹಾಕಿ ಲೀಲಾವು ಮಾಡುತ್ತೇವೆ ಎಂದು ರೈತರನ್ನು ಹೆದರಿಸುತ್ತಿದ್ದಾರೆ.

ವರ್ಷಗಳಿಂದ ನಿರಂತರ ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಇದರ ಮಧ್ಯ ವ್ಯವಸ್ಥಾಪಕ ಸಿ.ಎಂ. ಭಟ್ ಅವರು ರೈತರಿಗೆ ಕಿರಕುಳ ನೀಡುತ್ತಿದ್ದಾರೆ. ರೈತರ ಶೋಷಣೆ ಮಾಡುತ್ತಿರುವ ವ್ಯವಸ್ಥಾಪಕರನ್ನು ಈ ಶಾಖೆಯಿಂದ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಮಾಧಾನ ಸಾಲ ವಿತರಣೆಯಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸುವಲ್ಲಿ ವ್ಯವಸ್ಥಾಪಕ ಉದಾಸೀನ ತೋರುವುದರ ಜೊತೆಗೆ ರೈತರೊಂದಿಗೆ, ಗ್ರಾಹಕರೊಂದಿಗೆ ಸಿಟ್ಟಿನಿಂದ ವರ್ತಿಸುತ್ತಾರೆ. ರೈತರನ್ನು ಅತ್ಯಂತ ಕೀಳು ಮಟ್ಟದಿಂದ ಕಾಣುತ್ತಾರೆ ಎಂದು ಪ್ರತಿಭಟನಾ ನಿರತ ಗ್ರಾಹಕರಿಗೆ ಸಾಲ ಪಾವತಿಸಲು ಒಟಿಎಸ್ ವ್ಯವಸ್ಥೆ, ರೈತರು ಆಕ್ರೋಶ ವ್ಯಕ್ತಪಡಿಸಿ, ವ್ಯವಸ್ಥಾಪಕ ಸಿ, ಎಂ.ಭಟ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ರೈತರ ಆಕ್ರೋಶಕ್ಕೆ ಹೆದರಿದ ಬ್ಯಾಂಕ್ ವ್ಯವಸ್ಥಾಪಕ ಭಟ್ ಅವರು ಸ್ಥಳದಲ್ಲಿದ್ದ ಪೊಲೀಸರ ರಕ್ಷಣೆ ಕೋರಿದ್ದು ರೈತರನ್ನು ಮತ್ತಷ್ಟು ಕೆರಳಿಸಿತು. ಇಂತಹ ವ್ಯವಸ್ಥಾಪಕ ನಮಗೆ ಬೇಡ, ಕೂಡಲೇ ಈ ಶಾಖೆಯಿಂದ ಮನವಿ ಸ್ವೀಕರಿಸಿದರು. ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ ರೈತರು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಪಟ್ಟು ಹಿಡಿದರು.

ಈ ವೇಳೆ ಬ್ಯಾಂಕ್ ವ್ಯವಸ್ಥಾಪ ಸಿ.ಎಂ. ಭಟ್ ಮಾತನಾಡಿ, ನಮ್ಮ ಬ್ಯಾಂಕ್ ಮೂಲಕ ಒಟ್ಟು 232 ಕೋಟಿ ಸಾಲ ನೀಡಿದ್ದು, ಇದರಲ್ಲಿ 228 ಕೋಟಿ ಕೃಷಿ ಸಾಲವಿದೆ. ಅನೇಕ ವರ್ಷಗಳಿಂದ ಸಾಲ ತುಂಬದೇ ಇದ್ದಲ್ಲಿ ನಾವೇನು ಮಾಡಬೇಕು? ನಮಗೂ ಮೇಲಿನಿಂದ ಯಾವಗಲ್ಲ, ಒತ್ತಡವಿರುತ್ತದೆ. ಬೇರೆ ಬ್ಯಾಂಕ್‌ನಲ್ಲಿ ಒಟಿಎಸ್ ವ್ಯವಸ್ಥೆ ಇದ್ದಂತೆ ನಮ್ಮಲ್ಲಿ ಈ ವ್ಯವಸ್ಥೆಯಿಲ್ಲ

ಬ್ಯಾಂಕ್ ಮೂಲಕ ಬೆಳೆ ಸಾಲ ವಿತರಣೆಯಲ್ಲಿ ಸರ್ಕಾರದ ವಿವಿಧ ಯೋಜನೆಯಲ್ಲಿ ಸಾಲ ಸೌಲಭ್ಯ ಕಲ್ಪಿಸುವಲ್ಲಿ ವ್ಯವಸ್ಥಾಪಕರು ಉದಾಸೀನ ತೋರುವುದರ ಜತೆಗೆ ರೈತರೊಂದಿಗೆ ಗ್ರಾಹಕರೊಂದಿಗೆ ಸಿಟ್ಟಿನಿಂದ ವರ್ತಿಸುತ್ತಾರೆ.ರೈತರನ್ನು ಅತ್ಯಂತ ಕೀಳು ಮಟ್ಟದಿಂದ ಕಾಣುತ್ತಾರೆ.

ಕಾನೂನು ಮಾಡುವನು ನಾನಲ್ಲ. ಹೆಡ್ ಆಫೀಸ್ ಗೆ ಇದೆ. ಅಲ್ಲಿಯ ನಿರ್ದೇಶಕರು ಕಾರ್ಯ ನಿರ್ವಹಿಸುತ್ತವೆ. ಈ ನಿಮ್ಮ ಮನವಿಯನ್ನು ಈ ಕೂಡಲೇ ಹೆಡ್ ಆಫೀಸ್‌ಗೆ ಕಳಿಸುತ್ತೇನೆ ಎಂದು ಭರವಸೆ ನೀಡಿದರು.

ಆಗ ಉಪ ತಹಸೀಲ್ದಾರ್ ಸಿ.ಬಿ. ಗುಳೇದ, ಮಧ್ಯ ಪ್ರವೇಶಿಸಿ, ಈ ಕುರಿತು ಜಿಲ್ಲಾಧಿಕಾರಿ ಮತ್ತು ಕೆವಿಜಿ ಪ್ರಾದೇಶಿಕ ವ್ಯವಸ್ಥಾಪಕರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು ಇದೇ ಸಂದರ್ಭದಲ್ಲಿ

ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕ ರಕ್ಷಣೆ ಸೇನಾ ಅಧ್ಯಕ್ಷ ಎಂ.ಎಸ್. ಮರಿಗೌಡ್ರ, ರೈತ ಸಂಘ ಜಿಲ್ಲಾ ಮಹಾದೇವಗೌಡ ಗುಜಮಾಗಡಿ, ಹೊಸರು ಇಟ್ಟಣ್ಣವರ, ವೀರೇಶ ಬಾಳನಗೌಡ್ರ, ಶಿವಲಿಂಗಪ್ಪ ಬಳಿಗೇರ, ಮುದಿಯಪ್ಪ ಅಬ್ಬಿಗೇರಿ, ಅಂದಪ್ಪ ಶಿರಸ್ತಾರ, ಹನುಮಂತಪ್ಪ ಹುಲ್ಲೂರ, ಈರಣ್ಯ, ‘ಮುನಬಾವಿ ಸೇರಿದಂತೆ ಅರಗುಣಸಿ, ಮಲ್ಲಾಪೂರ,ಸವಡಿ ಬೆಳವಣಿಕಿ ಹಿರೇಮಣ್ಣೂರ, ಬಾಸಲಾಪೂರ, ಚಿಕ್ಕಮಣ್ಣೂರ, ಸಂದಿಗವಾಡ ಸೇರಿದಂತೆ ವಿವಿಧ ಗ್ರಾಮದ ರೈತರು ಭಾಗವಹಿಸಿದ್ದರು.

ವರದಿ ವೀರಣ್ಣ ಸಂಗಳದ

error: