December 22, 2024

Bhavana Tv

Its Your Channel

ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಏರ್ಪಡಿಸಿದ ಮಾಜಿ ಶಾಸಕ ಜಿ ಎಸ್ ಪಾಟೀಲ

ರೋಣ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಇಂದು ಗದಗ ಜಿಲ್ಲಾ ಅಧ್ಯಕ್ಷರು ಮಾಜಿ ಶಾಸಕರು ಜಿ ಎಸ್ ಪಾಟೀಲ ಅವರು ರೋಣ ನಗರದ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಏರ್ಪಡಿಸಲಾಗಿತು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕರು ಜಿ ಎಸ್ ಪಾಟೀಲ್ ಮಾತನಾಡಿ ಈ ಪವಿತ್ರ ರಂಜಾನ್ ಇಸ್ಲಾಂ ಧರ್ಮದ ಪ್ರತಿಯೊಬ್ಬರಿಗೂ ಶ್ರೇಷ್ಠವಾದ ತಿಂಗಳು, ಈ ದೇಹವನ್ನು ತಿಂಗಳ ಪರ್ಯಂತ ಉಪವಾಸ
ಮಾಡಿ ಕಲ್ಮಶಗಳಿಂದ ಶುಚಿಗೊಳಿಸುವ ಈ ಕಾರ್ಯ ತುಂಬಾ ಪವಿತ್ರವಾದದ್ದು. ಹಾಗೆಯೇ ಪ್ರಾರ್ಥನೆ ಮಾಡುವ ಮೂಲಕ ಮನಸ್ಸನ್ನು ಪರಿಶುದ್ಧ ಗೊಳಿಸಿ ಅಲ್ಲಾಹುವಿನ ಕೃಪೆಗೆ ಪಾತ್ರರಾಗುವ ಶುಭಗಳಿಯಾಗಿದೆ, ಈ ತಿಂಗಳಿನಲ್ಲಿ ಸಂಪತ್ತನ್ನು ದಾನವಾಗಿ ನೀಡುವುದು ಮತ್ತು ಅನ್ನದಾನ ಮಾಡುವುದು ಶ್ರೇಷ್ಠವಾದುದು, ಈ ತಿಂಗಳಿನಲ್ಲಿ ಮಾಡುವ ಪ್ರಾರ್ಥನೆ ಉಪವಾಸ ಮತ್ತು ಶುದ್ಧ ಮನಸ್ಸಿನಿಂದ ಮಾಡುವ ದಾನ ಇವುಗಳ ಮೂಲಕ ಅಲ್ಲಾಹುವಿನ ಕೃಪೆಗೆ ಪಾತ್ರರಾಗುತ್ತಾರೆ ಈ ಎಲ್ಲಾ ಆಚರಣೆಗಳಿಂದ ಇಸ್ಲಾಂ ಧರ್ಮದ ಪ್ರತಿಯೊಬ್ಬ ಬಂಧುಗಳು ಶಾಂತಿ ಸಮೃದ್ಧಿ ಮತ್ತು ಸಾಧನೆಯ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಿಥುನ ಜಿ ಪಾಟೀಲ, ಇಸುಪ ಇಟ್ಟಿಗಿ, ಬಾವಾಸಾಬ ಬೆಟಗೇರಿ, ಟಿಪ್ಪುಸಾಹೇಬ ಕೋಲ್ಕಾರ, ಖಲೀಲ ರಾಮದುರ್ಗ, ಶಪೀಕ್ ಮುಗನೂರ, ದಾವಲ ಸಾಬ್, ಬಾಡಿನ ಪರಶುರಾಮ, ಅಳಗವಾಡಿ ಬಸುರಾಜ, ನವಲುಗುಂದ ರಾಜಣ್ಣ, ಸುಂಕದ ಯಲ್ಲಪ್ಪ , ಕಿರೇಸೂರ ಸಂಗು, ನವಲಗುಂದ ಬಾಳಪ್ಪ, ಭಜಂತ್ರಿ ಸಂಜಯ, ದೊಡ್ಡಮನಿ ಮತ್ತು ಮಿಥುನ್ ಪಾಟೀಲ ಅಭಿಮಾನಿ ಬಳಗ ಮತ್ತು ಅಂಜುಮನ್ ಇಸ್ಲಾಂ ಕಮಿಟಿ ಎಲ್ಲ ಸದಸ್ಯರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋ

error: