April 26, 2024

Bhavana Tv

Its Your Channel

ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಎಸ್ಎಫ್ಐ ನಿಂದ ಕರಾಳ ದಿನಾಚರಣೆ

ಮುಳಬಾಗಿಲು: ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಹಾಗೂ ಜನ ವಿರೋಧಿ ಕೃಷಿ ಕಾನೂನುಗಳು ಮತ್ತು ನಾಲ್ಕು ಕಾರ್ಮಿಕ ವಿರೋಧಿ ಕಾನೂನುಗಳು ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮೇ -26 ರಂದು ದೇಶವ್ಯಾಪಿ ಮನೆ ಮನೆಯಲ್ಲಿ ಕರಾಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ. ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಳೆದ 6 ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ 600 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಜೊತೆಗೆ ದೇಶದಲ್ಲಿ ಮಾರಣಾಂತಿಕ ಕೋವಿಡ್ ಸೋಂಕು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರು ಸಮರ್ಪಕ ಚಿಕಿತ್ಸೆ ಸಿಗಲಾರದೇ ಸಾವೀಗೀಡಾ
ಗುತ್ತಿದ್ದಾರೆ. ಇನ್ನೊಂದೆಡೆ ಸರಕಾರಗಳು ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಬೇಕಾಬಿಟ್ಟಿ ಲಾಕ್ಡೌನ್ ಘೋಷಿಸಿರುವುದರಿಂದಾಗಿ ಅಗತ್ಯ ಆಹಾರದ ಕೊರತೆಯಿಂದಾಗಿ ಹಸಿವಿನಿಂದ ಜನತೆ ಸಾಯುವಂತಾಗಿದೆ, ಅಲ್ಲದೇ ಇದ್ದ ದುಡಿಮೆಯನ್ನು ಕಳೆದುಕೊಂಡು ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿ
ದ್ದಾರೆ.ತೀವ್ರವಾಗಿ ಹೆಚ್ಚುತ್ತಿರುವ ನಿರುದ್ಯೋಗದ ಮಧ್ಯೆಯೇ ಜನತೆ ಇದ್ದ ದುಡಿಮೆಯನ್ನು ಕಳೆದುಕೊಂಡು ಕಂಗಾಲಾ
ಗಿರುವ ಕೆಟ್ಟ ಸ್ಥಿತಿ, ಆಹಾರದ ಕೊರತೆ ಹಾಗೂ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ ಈ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗತ್ಯವಿರುವ ಆಸ್ಪತ್ರೆಗಳು, ಔಷಧಿ, ಅಕ್ಸಿಜನ್, ವೆಂಡಿ ಲೇಟರ್, ಸಿಬ್ಬಂದಿ ನೇಮಕ ಇತ್ಯಾದಿ ಸೌಲಭ್ಯಗಳನ್ನು ಹಾಗೂ ಅಹಾರ ಭದ್ರತೆ ಒದಗಿಸಿ ಜನರ ಪ್ರಾಣಗಳನ್ನು ರಕ್ಷಿಸಬೇಕಾದ ಸರಕಾರ ಹೃದಯಹೀನವಾಗಿ ಕಾರ್ಪೊ
ರೇಟ್ ಪರ ನೀತಿಗಳನ್ನು ನಿರ್ಜ್ಜವಾಗಿ ಅನುಸರಿಸುತ್ತಿರುವುದು ಖಂಡಿಸಿ ಎಸ್ಎಫ್ಐ ಡಿವೈಎಫ್ಐ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ದೇಶವ್ಯಾಪಿ ಪ್ರತಿಭಟನೆಯ ಭಾಗವಾಗಿ ಇಂದು ಕರ್ನಾಟಕ ರಾಜ್ಯವ್ಯಾಪಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿ-ಯುವಜನ-ಮಹಿಳೆಯರು, ರೈತ-ಕಾರ್ಮಿಕರು ಹಾಗೂ‌ ಜನ ಸಾಮನ್ಯರೆಲ್ಲರೂ ಮನೆ ಮನೆ ಎದುರು ‘ ಕರಾಳ ದಿನಾಚರಣೆ ಘೋಷಣೆಯ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿ ಈ ಕೆಳಕಂಡ ಬೇಡಿಕೆಗಳನ್ನು ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈಡೇರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ರಾಷ್ಟ್ರವ್ಯಾಪಿ ತೀವ್ರವಾದ ಹೋರಾಟಕ್ಕೆ ಜನತೆ ಮುಂದಾಗಬೇಕಾಗುತ್ತದೆಂದು ಎಚ್ಚರಿಸಿದರು.

        ಬೇಡಿಕೆಗಳು. 
  1. ಆಮ್ಲಜನಕ, ವೆಂಟಿಲೇಟರ್, ಔಷಧಿ ಮತ್ತು ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಒದಗಿಸಲು ಪಿಎಂ ಕೇರ್ ನ ಬೃಹತ್ ಹಣವನ್ನು ಬಳಸಬೇಕು. ಸೆಂಟ್ರಲ್ ವಿಸ್ಟಾ ಯೋಜನೆ
    ಯನ್ನು ನಿಲ್ಲಿಸಿ, ಅದರ ಹಣವನ್ನೂ ಸಹ ಕೋವಿಡ್ ರೋಗ ನಿಯಂತ್ರಣಕ್ಕೆ ಬಳಸಬೇಕು.
  2. ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು. ಎಲ್ಲಾ ನಾಗರಿಕರಿಗೆ ಉಚಿತ ಮತ್ತು ಸಾರ್ವತ್ರಿಕ ಲಸಿಕೆ ನೀಡಬೇಕು.
  3. ಖಾಸಗಿ ಆರೋಗ್ಯ ವ್ಯವಸ್ಥೆಯನ್ನು ನಿಯಂತ್ರಿಸಲು ತಕ್ಷಣವೇ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದು
    ಕೊಳ್ಳಬೇಕು.
  4. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಬೇಕಾಗುವಷ್ಟು ಹಣವನ್ನು ನಿಗದಿಪಡಿಸಬೇಕು.
  5. ತೆರಿಗೆದಾರರಲ್ಲದ ಕುಟುಂಬ
    ಗಳ ಖಾತೆಗೆ ತಕ್ಷಣ 10 ಸಾವಿರ ರೂಗಳನ್ನು ಹಾಕಬೇಕು.
  6. ಆರು ತಿಂಗಳವರೆಗೆ ಅಗತ್ಯವಿರುವ ಎಲ್ಲರಿಗೂ 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಬೇಕು. ದ್ವಿದಳ ಧಾನ್ಯ, ಎಣ್ಣೆ, ಸಕ್ಕರೆ ಮುಂತಾದ ಇತರ ಅಗತ್ಯ ವಸ್ತುಗಳ ಜೂತೆಯಲ್ಲಿ ಸ್ಯಾನಿಟರಿ ನ್ಯಾಪಕಿನ್ ಸಹ ಪಿಡಿಎಸ್- ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಒದಗಿಸಬೇಕು.
  7. ಮನರೇಗಾ ಯೋಜನೆಯಲ್ಲಿ 200 ದಿನದ ಕೆಲಸ ಹಾಗೂ 600 ಕೂಲಿಯನ್ನು ಹೆಚ್ಚಿಸಬೇಕು. ನಗರ ಉದ್ಯೋಗ ಖಾತರಿ ಯೋಜನೆಯನ್ನು ಪ್ರಾರಂಭಿ
    ಸಬೇಕು.
  8. ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳ ಬಡ್ಡಿ ಸಹಿತ ಸಾಲ ಮನ್ನಾ ಮಾಡಬೇಕು. ಹೊಸ ಸಾಲ ಸೌಲಭ್ಯ ನೀಡಬೇಕು.
    .MFI ಸಂಸ್ಥೆಗಳನ್ನು ನಿಯತ್ರಣ ಮಾಡಬೇಕು.
  9. ಖಾಸಗಿ ವಲಯದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ಒದಗಿಸಬೇಕು.
  10. ಎಲ್ಲಾ ನೋಂದಾಯಿತ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಬೇಕು.
  11. ಪಡಿತರ ವ್ಯವಸ್ಥೆಯಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಉಚಿತವಾಗಿ ನೀಡಿ
  12. ಶೈಕ್ಷಣಿಕ ಕ್ಷೇತ್ರದ – ಸೆಮಿಸ್ಟರ್ ಶುಲ್ಕ ಸೇರಿದಂತೆ ಎಲ್ಲಾ ತರಹದ ಶುಲ್ಕಗಳನ್ನು ಹಿಂತೆಗೆದುಕೊಳ್ಳಬೇಕು.
  13. ಅನ್ ಲೈನ್ ಶಿಕ್ಷಣಕ್ಕೆ ಅಗತ್ಯವಾದ ಪರಿಕರಗಳನ್ನು ಎಲ್ಲಾ ಬಡವರಿಗೆ ಹಾಗೂ ಸಾಮಾಜಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಬೇಕು.

ವರದಿ ; ವಿ ರಾಮಕೃಷ್ಣ ಮುಳಬಾಗಿಲು, ಕೋಲಾರ

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: