December 22, 2024

Bhavana Tv

Its Your Channel

ಕೆ.ಆರ್.ಪೇಟೆಯ ರಾಜಾಸ್ಥಾನ ಸೇವಾ ಸಮಾಜದ ಬಂಧುಗಳು ನೀಡಿದ ಫುಡ್ ಕಿಟ್ ಹಾಗೂ ಸೀರೆಗಳನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ವಿತರಿಸಿದರು.

ತಿಮ್ಮಪ್ಪನಗುಡ್ಡದಲ್ಲಿ ಕಳೆದ ೧೫-೨೦ ವರ್ಷಗಳಿಂದ ತೆಂಗಿನಗರಿ ಹಾಗೂ ಗುದಮೊಟ್ಟೆಯಲ್ಲಿ ಶೆಡ್ ನಿರ್ಮಿಸಿಕೊಂಡು ವಾಸವಾಗಿರುವ ಅಲೆಮಾರಿ ಶಿಳ್ಳೆಕ್ಯಾತ ಜನಾಂಗದವರು, ದೊಂಬಿದಾಸರು ಹಾಗೂ ಹಕ್ಕಿಪಿಕ್ಕಿ ಜನಾಂಗದ ಬಂಧುಗಳು ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಮನೆಯಲ್ಲಿಯೇ ಉಳಿದುಕೊಂಡು ಹಸಿವಿನಿಂದ ಬಳಲುತ್ತಿರುವ ಬಡಜನರಿಗೆ ರಾಜಾಸ್ಥಾನ ಸೇವಾ ಸಮಾಜದ ಬಂಧುಗಳು ಅಕ್ಕಿ, ಬೇಳೆ, ಸಕ್ಕರೆ, ರೀಫೈಂಡ್ ಆಯಿಲ್, ಉಪ್ಪು, ಟೀಪುಡಿ, ರವೆ ಮತ್ತು ಮೈದಾ ಹಿಟ್ಟನ್ನು ಒಳಗೊಂಡಿರುವ ಫುಡ್ ಕಿಟ್ ಅನ್ನು ತಿಮ್ಮಪ್ಪನಗುಡ್ಡದಲ್ಲಿ ನೆಲೆಸಿರುವ ನಿರ್ಗತಿಕರು ಹಾಗೂ ಮಹಿಳೆಯರಿಗೆ ತಹಶೀಲ್ದಾರ್ ಎಂ.ಶಿವಮೂರ್ತಿ ವಿತರಿಸಿದರು.

ಕೊರೋನಾ ಮುಂಜಾಗರೂಕತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೋನಾ ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೈಯ್ಯನ್ನು ಆಗಾಗ್ಗೆ ಸ್ಯಾನಿಟೈಸರ್ ನಿಂದ ತೊಳೆದುಕೊಳ್ಳಬೇಕು ಎಂದು ತಹಶೀಲ್ದಾರ್ ಶಿವಮೂರ್ತಿ ಮನವಿ ಮಾಡಿದರು.

ರಾಜಾಸ್ಥಾನ್ ಸೇವಾ ಸಮಿತಿಯ ಪದಾಧಿಕಾರಿಗಳಾದ ಗೋಪಾಲ್, ಸತೀಶ್, ರಮೇಶ್ ಚೌಧರಿ, ಕೀಮಾರಾಮ್, ಫುಕ್ ರಾಜ್, ನೈನ್ ಸಿಂಗ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಡಾ.ಮನುಕುಮಾರ್, ಉಪತಹಶೀಲ್ದಾರ್ ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: