April 20, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ಐನೋರಹಳ್ಳಿ ಗ್ರಾಮದಲ್ಲಿ ಎಪಿಎಂಸಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್ ಅವರು ಗ್ರಾಮಸ್ಥರಿಗೆ ಉಚಿತವಾಗಿ ಮಾಸ್ಕ್ ಗಳನ್ನು ವಿತರಣೆ ಮಾಡಿದರು.

ಬಳಿಕ ಮಾತನಾಡಿದ ಅವರು ದೇಶಾದ್ಯಂತ ಜನರನ್ನು ಕಂಗೆಡಿಸಿರುವ ಕೊರೊನಾ ಸೋಂಕು ನಿವಾರಣೆಯಾಗಬೇಕಾದರೆ ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಲ್ಲದೆ ಕೆಮ್ಮು, ನೆಗಡಿ, ಜ್ವರ ಇದ್ದವರು ಕಡ್ಡಾಯವಾಗಿ ಅಗತ್ಯ ಚಿಕಿತ್ಸೆ ಪಡೆದು ಮನೆಯಲ್ಲಿ ಹೋಂ ಕ್ವಾರಂಟೈನ್ ಪಾಲಿಸಬೇಕು. ಅನಗತ್ಯವಾಗಿ ಹೊರಗಡೆ ಸುತ್ತಾಡುವುದರಿಂದ ಕೊರೊನಾ ಸೋಂಕು ಅಪರಿಚಿತ ವ್ಯಕ್ತಿಗಳ ಸ್ಪರ್ಷದಿಂದ ಹರಡುವ ಸಾಧ್ಯತೆ ಇರುತ್ತದೆ ಇದು ಅರಿತು ಅನಿವಾರ್ಯವಾಗಿ ಹೊರಗಡೆ ಹೋಗಲೇ ಬೇಕಾದರೆ ಕಡ್ಡಾಯವಾಗಿ ಮಾಸ್ಕುಗಳನ್ನು ಧರಿಸಿ ಹೋಗಬೇಕು. ಎಲ್ಲಾ ಕಡೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಂಡರೆ ಕೊರೋನಾ ಸೋಂಕಿನಿAದ ಪಾರಾಗಬಹುದು ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮದ ಜನತೆಗೆ ಮಾಸ್ಕುಗಳನ್ನು ವಿತರಣೆ ಮಾಡಲಾಗಿದೆ. ಜನತೆ ಲಾಕ್ ಡೌನ್ ಅವಧಿ ಮುಗಿಯುವ ವರೆಗೆ ಅನಗತ್ಯವಾಗಿ ಹೊರ ಹೋಗದೇ ಮನೆಯಲ್ಲಿ ತಂದೆ ತಾಯಿ, ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆಯಬೇಕು ಈ ಮೂಲಕ ಕೊರೋನಾ ಮುಕ್ತ ದೇಶ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಐನೋರಹಳ್ಳಿ ಮಲ್ಲೇಶ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಐ.ಕೆ.ಮಂಜೇಗೌಡ, ಕಾಯಿ ರಾಮೇಗೌಡ, ಸಣ್ಣರವಿ, ಶಾಂತರಾಜು, ಪುಟ್ಟ, ಇಂಜಿನಿಯರ್ ಚಂದ್ರೇಗೌಡ, ಸಂತೋಷ್,ರಾಜಣ್ಣ,ಬೋಜಣ್ಣ ಮತ್ತಿತರರು ಭಾಗವಹಿಸಿದ್ದರು.

error: