September 14, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ಐಕನಹಳ್ಳಿ ಗ್ರಾಮದ ಬಡ ವೃದ್ಧರಿಗೆ ಆಸರೆ ಆದ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷ ಬಿ ಎಂ ಕಿರಣ್.

ಕೃಷ್ಣರಾಜಪೇಟೆ ; ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಗ್ರಾಮದಲ್ಲಿ ಕೆಲವು ನಿರಾಶ್ರಿತ ವೃದ್ಧರಿಗೆ ಹಾಗೂ ಬೆಂಗಳೂರಿAದ ಬಂದ ಕೆಲವು ಬಡವರಿಗೆ ಶ್ರೀ ಸುಬ್ರಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷರು ಸಮಾಜ ಸೇವಕರು ಆದ ಬಿಎಂ ಕಿರಣ್ ರವರ ವತಿಯಿಂದ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.

ಮನೆಗೆ ಬೇಕಾದ ಎಲ್ಲ ಸಾಮಗ್ರಿಗಳು ಅಕ್ಕಿ ಎಣ್ಣೆ ಉಪ್ಪು ತರಕಾರಿ ಹಾಗೂ ಬೇಳೆ ಸೇರಿದಂತೆ ಇನ್ನಿತರ ಆಹಾರ ಸಾಮಗ್ರಿಗಳನ್ನು ಆನೆಗೊಳದ ನಂಜೇಶ್ ಗೌಡ ಹಾಗೂ ಮಂಜು ಅವರ ನೇತೃತ್ವದಲ್ಲಿ ಸುಮಾರು ಹತ್ತು ಕುಟುಂಬಗಳಿಗೆ ವಿತರಣೆ ಮಾಡಿದರು. ಅಲ್ಲದೆ ಆನೆಗೊಳ ಗ್ರಾಮದಲ್ಲಿ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕರಾದ ಬಿ.ಎಂ ಕಿರಣ್ ರವರ ತಂದೆಯಾದ ಮಂಜುನಾಥ್ ರವರು ಮಕ್ಕಳು ಹಾಗೂ ವೃದ್ದರಿಗೆ ಹಾಲು ಪ್ಯಾಕೇಟ್ ಹಾಗೂ ಮಾಸ್ಕ್ ನೀಡಿ ಕೊರೋನಾ ವೈರಸ್ ತಡೆಗಟ್ಟಲು ಎಲ್ಲಾರೂ ಶ್ರಮಿಸಬೇಕಾಗಿ ತಿಳಿಸಿದರು.

ಈ ಸಂದರ್ಬದಲ್ಲಿ ಸೌಮ್ಯ ಐಕನಹಳ್ಳಿ ಮಾತನಾಡಿ ಸ್ಥಳೀಯ ಆಡಳಿತವ್ಯವಸ್ಥೆಗಳು ಹಾಳಾಗಿವೆ. ನಮ್ಮ ಓಟು ಕೇಳುವ ನಾಯಕರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರಾಜಕೀಯ ನಾಯಕರು ನಮ್ಮ ಕಷ್ಟ ಅರಿತರು ನಮಗೆ ಸ್ಪಂದನೆ ಕೊಡುತ್ತಿಲ್ಲ, ಇವತ್ತಿಗೆ ನಮಗೆ ಶ್ರೀ ಸುಬ್ರಮಣ್ಯ ಸೇವಾ ಟ್ರಸ್ಟ್ ನಮ್ಮ ಮನೆ ದೇವರಂತೆ ನಮಗೆ ಆಹಾರವನ್ನು ವ್ಯವಸ್ಥೆ ಕಲ್ಪಿಸಿ ಕೊಡುವ ಮೂಲಕ ನಮ್ಮ ಹಸಿವನ್ನ ನೀಗಿಸಿದ್ದಾರೆ ಎಂದು ತಿಳಿಸಿದರು

ವರದಿ ಶಂಭು ಕಿಕ್ಕೇರಿ, ಮಂಡ್ಯ

error: