May 23, 2024

Bhavana Tv

Its Your Channel

ನಾಗಮಂಗಲ ಪುರಸಭೆ ವತಿಯಿಂದ ಬಡವರ್ಗದ ಕುಟುಂಬದವರಿಗೆ ಉಚಿತ ಹಾಲು ಪೂರೈಕೆ

ನಾಗಮಂಗಲ:ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ಬಡವರಿಗೆ, ನಿರಾಶ್ರಿತರಿಗೆ, ನಿರ್ಗತಿಕರಿಗೆ, ತೊಂದರೆಯಾಗಬಾರದು ಎಂಬ ಉದ್ದೇಶದಿಂದ. ನಾಗಮಂಗಲ ಪುರಸಭೆ ವತಿಯಿಂದ ಏಪ್ರಿಲ್ 14 ವರೆಗೂ ಬೆಳಗಿನ ವೇಳೆಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಬರುವ ಬಡ ಕುಟುಂಬದ ಜನರು ವಾಸವಿರುವ ಪ್ರದೇಶಗಳಲ್ಲಿ ಸುಮಾರು 1350 ಕುಟುಂಬಗಳ ಮನೆಗಳಿದ್ದು. ಲಾಕ್ ಡೌನ್ ಮುಗಿಯುವ ತನಕ ನಂದಿನಿ ಹಾಲಿನ ಪ್ಯಾಕೆಟ್ ಅನ್ನು ಮಂಡ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಬಡಕುಟುಂಬದ ಮನೆಗಳಿಗೆ ವಿತರಿಸಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದರು.

ನಾಗಮಂಗಲ ಪುರಸಭೆಯ ವತಿಯಿಂದ ಪಟ್ಟಣದ ಎ.ಡಿ ಕಾಲೋನಿ, ಎ.ಕೆ ಕಾಲೋನಿ, ಬೆಸ್ತರ ಕಾಲೋನಿ, ಟಿಬಿ ಬಡಾವಣೆಯ ಬುಡುಬುಡಿಕೆ ಕೆರಿ, ಸುಭಾಷ್ ಚಂದ್ರ ನಗರ, ಪಟ್ಟಣದ ಕೊಳದ ಬೀದಿ, ಮೂಲೆ ಹಟ್ಟಿ, ತಾಲೂಕು ಕಚೇರಿ ಹಿಂಭಾಗದ ಮುಸ್ಲಿಂ ಬೀದಿ, ವೀರಭದ್ರಸ್ವಾಮಿ ದೇವಸ್ಥಾನ ಹಿಂಬಾಗ, ಬ್ರಾಹ್ಮಣ ಬೀದಿ, ಸೀಪರ್ ಕಾಲೋನಿಯ ಬಡಕುಟುಂಬದ ಮನೆಗಳಿಗೆ ನಂದಿನಿ ಹಾಲಿನ ಪ್ಯಾಕೆಟನ್ನು ವಿತರಿಸುವ ಕಾರ್ಯಕ್ರಮ ದಲ್ಲಿ. ಪುರಸಭೆಯ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಹಾಗೂ ಸಿಬ್ಬಂದಿಗಳು ಆದ
ಹಿರಿಯ ಆರೋಗ್ಯ ನಿರೀಕ್ಷಕರು ಮೂರ್ತಿ, ಆರೋಗ್ಯ ನಿರೀಕ್ಷಕ ನಿಂಗೇಗೌಡ, ಇಂಜಿನಿಯರ್ ಪ್ರಕಾಶ್, ಆರೋಗ್ಯ ನಿರೀಕ್ಷಕ ದೀಕ್ಷಿತ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ: ದೇ.ರಾ .ಜಗದೀಶ ನಾಗಮಂಗಲ

error: