ನಾಗಮಂಗಲ: ರಾಜ್ಯದಾದ್ಯಂತ ಹೆಚ್ಚಳವಾಗುತ್ತಿರುವ ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ನಡುವೆ ತಾಲ್ಲೂಕು ಆಡಳಿತವು ಜನಸಂದಣಿ ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸಂಚಾರಿ ಸೇವೆಗೆಯನ್ನು ಜಾರಿಗೆ ತಂದಿದ್ದು . ಶಾಸಕ ಸುರೇಶ್ ಗೌಡ ಚಾಲನೆ ನೀಡಿದರು.
ತಾಲ್ಲೂಕಿನಲ್ಲಿ ಸಂತೆ ,ಮಾರುಕಟ್ಟೆಗೆ ಎಂದು ವಿವಿಧ ಭಾಗಗಳಿಂದ ನಿತ್ಯ ಸಾವಿರಾರು ಜನರು ಪಟ್ಟಣಕ್ಕೆ ಬರುತ್ತಾರೆ.ಅದರಿಂದ ಅಪಾರವಾದ ಜನಸಮೂಹ ಸೇರುತ್ತದೆ.ಇದರಿಂದಾಗಿ ಕೊರೊನಾ ವೈರಸ್ ಹರಡುವ ಭೀತಿ ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಮತ್ತು ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ವಯಂ ಸೇವಕ ವ್ಯಾಪಾರಿಗಳನ್ನು ಗುರ್ತಿಸಿ ವಾಹನಗಳ ಮೂಲಕ ಎಲ್ಲಾ ಹೋಬಳಿಯ ಗ್ರಾಮಗಳಿಗೂ ದಿನನಿತ್ಯದ ಅಗತ್ಯ ವಸ್ತುಗಳ ತಲುಪಿಸಲು ವಾಹನ ಸೌಲಭ್ಯ ಮಾಡಲಾಗಿದೆ. ಅಲ್ಲದೇ ವ್ಯಾಪಾರಿಗಳಿಗೆ ನಿಗದಿಪಡಿಸಲಾದ ನಿಯಮಗಳನ್ನು ತಿಳಿಸುವ ಜೊತೆಗೆ ಪಾಸ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದಾಗಿ ಗ್ರಾಮಗಳಲ್ಲಿ ಜನರು ತರಕಾರಿ,ಹಣ್ಣು,ಸೊಪ್ಪು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ಪಟ್ಟಣಕ್ಕೆ ಬರುವುದನ್ನು ನಿಯಂತ್ರಿಣ ಮಾಡಲಾಗುತ್ತಿದೆ. ಅಲ್ಲದೇ ಸಂಚಾರಿ ವಾಹನಗಳ ವ್ಯಾಪಾರಿಗಳ ಥರ್ಮಲ್ ಪರೀಕ್ಷೆಯನ್ನು ಮಾಡಲಾಯಿತು.
ಸಂಚಾರಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಸುರೇಶ್ ಗೌಡ ಈ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ತಾಲೂಕು ಟಾಸ್ಕ್ ಫೋರ್ಸ್ ಅಧಿಕಾರಿಗಳ ತಂಡ ಜಾರಿಗೆ ತಂದಿದ್ದು ರಾಜ್ಯಕ್ಕೆ ಮಾದರಿಯಾಗಿದೆ. ಕೊರೊನಾ ವೈರಸ್ ಹರಡುವ ಭೀತಿ ಇರುವ ಇಂತಹ ದಿನಗಳಲ್ಲಿ ಇದೊಂದು ಉತ್ತಮ ಸೇವೆಯಾಗಿದೆ.ಇದನ್ನು ಜನರು ಸದುಪಯೋಗ ಪಡಿಸಿಕೊಂಡು ಮನೆಯಲ್ಲಿಯೇ ಇದ್ದು ಲಾಕ್ ಡೌನ್ ಪಾಲಿಸಿ ಎಂದರು.
ತಹಶಿಲ್ದಾರ್ ಕುಂಞ ಅಹಮದ್ ಮಾತನಾಡಿ ಸಂಚಾರಿ ಸೇವೆಗೆ ಸ್ವಯಂ ಸೇವಕ ವ್ಯಾಪಾರಿಗಳನ್ನು ಗುರ್ತಿಸಿ, ಸ್ವಚ್ಛತೆ ಕಾಪಾಡಿಕೊಂಡು ಕಡಿಮೆ ಬೆಲೆಗೆ ಅಗತ್ಯ ವಸ್ತುಗಳನ್ನು ಪೊರೈಕೆ ಮಾಡುವ ಕಾರ್ಯಕ್ರಮ ಮಾಡಲಾಗಿದೆ .ಜನರು ಸಹ ಸಮೂಹಗಳಲ್ಲಿ ಸೇರದೆ ನಿಮ್ಮ ಮತ್ತು ನಿಮ್ಮ ಕುಟುಂಬಗಳನ್ನು ಸೋಂಕು ತಗುಲದಂತೆ ರಕ್ಷಿಸಿ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಧನಂಜಯ, ಡಿವೈಎಸ್ಪಿ ವಿಶ್ವನಾಥ್, ಎಪಿಎಂಸಿ ಅಧ್ಯಕ್ಷ ಚನ್ನಪ್ಪ ಮತ್ತು ಆರೋಗ್ಯ ಇಲಾಖೆಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ವರದಿ: ದೇ.ರಾ .ಜಗದೀಶ ನಾಗಮಂಗಲ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ