May 4, 2024

Bhavana Tv

Its Your Channel

ಮಂಡ್ಯ ನಗರದಲ್ಲಿ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ವೈಜ್ಞಾನಿಕ ಪರಿಷತ್ತಿನ ಯುವ ಸಮ್ಮೇಳನ – ಹುಲಿಕಲ್ ನಟರಾಜ್

ಮಂಡ್ಯ ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆದ ರಾಜ್ಯ ವೈಜ್ಞಾನಿಕ ಪರಿಷತ್ತಿನ ಪದಾಧಿಕಾರಿಗಳ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ನಿರ್ಧಾರ …

ಜನಸಾಮಾನ್ಯರಲ್ಲಿ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸಿ ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೂಡ ನಂಬಿಕೆಗಳ ವಿರುದ್ಧ ಅರಿವಿನ ಜಾಗೃತಿ ಮೂಡಿಸಲು ಮಂಡ್ಯ ನಗರದಲ್ಲಿ ಮಾರ್ಚ ಎರಡನೇ ವಾರದಲ್ಲಿ ವೈಜ್ಞಾನಿಕ ಯುವ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ವೈಜ್ಞಾನಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ತಿಳಿಸಿದರು .

ಅವರು ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೂಢನಂಬಿಕೆಗಳು, ಸಾಮಾಜಿಕ ಕಟ್ಟುಪಾಡುಗಳು ಹಾಗೂ ಕಂದಾಚಾರಗಳ ಮೂಲಕ ಮುಗ್ಧ ಜನರನ್ನು ಶೋಷಣೆ ಮಾಡಿ ವಂಚಿಸಲಾಗುತ್ತಿದೆ. ಸಮಾಜದಲ್ಲಿ ಮಾಯ, ಮಾಟ, ಭೂತ ಪ್ರೇತ ಎಂಬುದು ಏನೂ ಇಲ್ಲ ನಾವು ವೈಜ್ಞಾನಿಕ ಆಧಾರದ ಮೇಲೆ ಕಣ್ಣಾರೆ ಕಾಣುವ ವರ್ತಮಾನದ ವಿಷಯಗಳು ಮಾತ್ರ ಸತ್ಯವಾಗಿದ್ದು ಉಳಿದೆಲ್ಲವೂ ಮೋಸ, ಸುಳ್ಳಿನಿಂದ ಕೂಡಿರುವ ವಂಚನೆಯ ಜಾಲವಾಗಿವೆ ಎಂಬ ಸತ್ಯ ಸಂದೇಶವನ್ನು ನೀಡಿ ಶ್ರೀಸಾಮಾನ್ಯರಲ್ಲಿ ವೈಜ್ಞಾನಿಕ ಕ್ರಾಂತಿ ಮೂಡಿಸುವ ದಿಕ್ಕಿನಲ್ಲಿ ರಾಜ್ಯ ವೈಜ್ಞಾನಿಕ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ವೈಜ್ಞಾನಿಕ ಮನೋಭಾವನೆ ಹಾಗೂ ಸೃಜನಶೀಲತೆಯ ಗುಣಗಳನ್ನು ಹೊಂದಿರುವ ಮೂಢನಂಬಿಕೆ ಹಾಗೂ ಕಂದಾಚಾರವನ್ನು ವಿರೋಧಿಸುವ ಯುವಜನರು ವೈಜ್ಞಾನಿಕ ಪರಿಷತ್ತಿನ ಆಜೀವ ಸದಸ್ಯರಾಗಬಹುದು ಎಂದು ಹುಲಿಕಲ್ ನಟರಾಜ್ ಹೇಳಿದರು.
ಮಂಡ್ಯ ಜಿಲ್ಲಾ ವೈಜ್ಞಾನಿಕ ಪರಿಷತ್ತಿನ ಅಧ್ಯಕ್ಷರಾದ ಶಿವಲಿಂಗೇಗೌಡ ಸಭೆಯ ನೇತೃತ್ವ ವಹಿಸಿದ್ದರು.
ಮಹಿಳಾ ಹೋರಾಟಗಾರ್ತಿ ಸುನಂದಾಜಯರಾA, ಭಗವಾನ್ ಬುದ್ಧ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯಮದೂರು ಸಿದ್ಧರಾಜು, ರಾಷ್ಟ್ರೀಯ ಯುವಪ್ರಶಸ್ತಿ ಪುರಸ್ಕೃತೆ ಅನುಪಮಾಗೌಡ, ಟಿ.ಡಿ.ನಾಗರಾಜು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ.

error: