May 4, 2024

Bhavana Tv

Its Your Channel

ಸಾರ್ವಜನಿಕರಿಗೆ ವಿದ್ಯುತ್ ಸೇವೆಗಳ ಅರಿವು ಮೂಡಿಸುವ ಕಾರ್ಯಕ್ರಮ

ಕಿಕ್ಕೇರಿ:– ವಿದ್ಯುತ್ ಮಾನವನ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಒಂದು ದಿನ ವಿದ್ಯುತ್ ಇಲ್ಲದಿದ್ದರೆ ಅದರ ಪರಿಣಾಮ ಊಹಿಸಲೂ ಅಸಾದ್ಯ ಈ ನಿಟ್ಟಿನಲ್ಲಿ ಇಲಾಖೆ ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂದು ಚೆಸ್ಕಾಂ ಉಪವಿಭಾಗ-೨ ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ವಿ.ಕೃಷ್ಣ ತಿಳಿಸಿದರು

ಅವರು ಪಟ್ಟಣದ ಹಳೆ ಕೆಇಬಿ ಕಛೇರಿಯ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಹಕರಿಗೆ/ ಸಾರ್ವಜನಿಕರಿಗೆ ವಿದ್ಯುತ್ ಸೇವೆಗಳ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧಿಕ ಭದ್ರತಾಠೇವಣಿ:- ಗ್ರಾಹಕರು ತಾವು ಒಂದು ವರ್ಷದಲ್ಲಿ ಬಳಸುವ ವಿದ್ಯುತ್ತಿನ ಪ್ರಮಾಣವನ್ನು ೧೨ ತಿಂಗಳಿಗೆ ವಿಭಾಗಿಸಿ ಎರಡು ಕಂತುಗಳ ಹಣವನ್ನು ಭದ್ರತಾ ಠೇವಣಿಯಾಗಿ ಇಡಬೇಕಾಗುತ್ತದೆ. ಯಾವ ಗ್ರಾಹಕರ ಭದ್ರತಾ ಠೇವಣಿ ಕಡಿಮೆ ಇರುತ್ತದೆಯೋ ಅಂತಹ ಗ್ರಾಹಕರು ಬಾಕಿ ಮೊತ್ತವನ್ನು ಭದ್ರತಾ ಠೇವಣಿಯನ್ನಾಗಿ ಇಡಬೇಕು. ಅದಕ್ಕೆ ಬ್ಯಾಂಕ್ ಬಡ್ಡಿ ನೀಡಲಾಗುವುದು.

ಪಿ.ಎಫ್ ದಂಡ:-ಬೃಹತ್ ಕೈಗಾರಿಕೆಗಳ, ಉದ್ದಿಮೆ ಹೊಂದಿರುವ ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ಆಧಾರದ ಮೇಲೆ ೦.೯ ರಿಂದ ೧.೦ ಇದ್ದಾಗ ಅವರುಗಳಿಗೆ ಪೆನಾಲ್ಟಿ ಇರುವುದಿಲ್ಲ ೦.೯ ಕ್ಕಿಂತ ಕಡಿಮೆ ಬಂದರೆ ಪ್ರತೀ ೦.೦೧ ಯುನಿಟ್ ಗೆ ಮೂರು ಪೊದೆಯಂತೆ ದಂಡ ವಿಧಿಸಲಾಗುತ್ತದೆ . ಸಣ್ಣ ಉದ್ದಿಮೆಗಳಿಗೆ ೦.೮೫ ರಿಂದ ೧.೦ ವರೆಗೆ ವಿನಾಯಿತಿ ಇರುತ್ತದೆ. ೦.೮೫ ಗಿಂತ ಕಡಿಮೆ ಬಂದಲ್ಲಿ ಪ್ರತೀ ಯುನಿಟ್ ಗೆ ಎರಡು ಪೈಸೆ ಯಂತೆ ದಂಡ ಹಾಕಲಾಗುತ್ತದೆ. ಆದ್ದರಿಂದ ಅಂತಹ ಗ್ರಾಹಕರು ಕೆಪಾಸಿಟರ್ ಗಳನ್ನು ಅಳವಡಿಸಿಕೊಳ್ಳುವ ಮೂಲಕ ದಂಡದಿAದ ತಪ್ಪಿಸಿಕೊಳ್ಳಬೇಕು
ಸಕಾಲದಲ್ಲಿ ವಿದ್ಯುತ್ ಶುಲ್ಕ ಪಾವತಿಸಿ. ವಿದ್ಯುತ್ ಗ್ರಾಹಕರು ತಾವು ಬಳಸಿದ ವಿದ್ಯುತ್ ಗೆ ಪ್ರತಿಯಾಗಿ ಕಟ್ಟಬೇಕಾಗಿರುವ ಮೊತ್ತವನ್ನು ಹದಿನೈದು ದಿನಗಳೊಳಗಾಗಿ ಕಟ್ಟಬೇಕು ಇಲ್ಲದಿದ್ದರೆ ಮಾಸಿಕ ೧% ರಂತೆ ಬಡ್ಡಿಯ ರೂಪದಲ್ಲಿ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಗ್ರಾಹಕರೂ ಉಳಿದು ಸಂಸ್ಥೆಯನ್ನೂ ಉಳಿಸುವ ಕೆಲಸ ಗ್ರಾಹಕರ ಕೈಯಲ್ಲಿದೆ ಎಂದು ತಿಳಿಸಿದರು.

ಕಾರ್ಯಪಾಲಕ ಇಂಜಿನಿಯರ್ ಪ್ರತಿಭಾ ಮಾತನಾಡಿ ಸಾರ್ವಜನಿಕರಿಗೆ ಅತೀ ಅಗತ್ಯವಾದ ಕುಡಿಯುವ ನೀರಿನ ಪೂರೈಕೆಗೆ, ಹಿಟ್ಟಿನ ಗಿರಣಿಗಳಿಗೆ, ರೈಸ್‌ಮಿಲ್‌ಗಳಿಗೆ ಸೇರಿದಂತೆ ಅಗತ್ಯ ಸೇವೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ, ಚೆಸ್ಕಾಂ ತನ್ನ ಇಲಾಖೆಯ ನೌಕರರಿಗೆ ಸೇವಾನಿರತ ತರಬೇತಿ ನೀಡಿ ಅವರುಗಳು ಹೆಚ್ಚಿನ ದಕ್ಷತೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವಿದ್ಯುತ್ ಜಾಲವನ್ನು ಸಧೃಡಗೊಳಿಸಲಾಗುತ್ತಿದೆ. ತಾಲ್ಲೂಕು ಹಂತದಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲು ಪ್ರತೀ ಮೂರು ತಿಂಗಳಿಗೊಮ್ಮೆ ಅಧೀಕ್ಷಕ ಇಂಜಿನಿಯರ್ ಉಪವಿಭಾಗಗಳಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಸಾರ್ವಜನಿಕರು ಸಲ್ಲಿಸುವ ದೂರುಗಳನ್ನು ಕೂಡಲೇ ಅನುಪಾಲನೆ ಮಾಡಲು ಕ್ರಮವಹಿಸಲಾಗುತ್ತಿದೆ. ವಿದ್ಯುತ್ ಸಮಸ್ಯೆಗೆ ಸಂಬAಧಿಸಿದAತೆ ಗ್ರಾಹಕರು ೧೯೧೨ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಗ್ರಾಹಕರು ದೂರದ ಊರುಗಳಿಂದ ಪಟ್ಟಣಕ್ಕೆ ಬಂದು ವಿದ್ಯುತ್ ಶುಲ್ಕ ಪಾವತಿ ಮಾಡಲು ಕಷ್ಟವಾಗುತ್ತದೆ ಎಂಬುದನ್ನು ಅರಿತು ಆನ್‌ಲೈನ್ ಮೂಲಕ ಹಣ ಪಾವತಿಗೆ ಅವಕಾಶ ಮಾಡಿ ಕೊಡಲಾಗಿದೆ.
ಯಾವುದೇ ಕಡತಗಳು ಕಛೇರಿಗೆ ಬಂದರೆ ಅವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮವಹಿಸಲಾಗಿದೆ. ರೈತರ ವಿದ್ಯುತ್ ಪರಿವರ್ತಕಗಳು ಸುಟ್ಟುಹೋದರೆ ಒಂದರೆಡು ದಿನಗಳಲ್ಲಿ ಬದಲಿ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗೆ ಹಲವಾರು ಗ್ರಾಹಕ ಸ್ನೇಹಿ ಇಲಾಖೆಯನ್ನಾಗಿ ರೂಪಿಸಲು ಮುಂದಾಗಿದ್ದು ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಇಲಾಖೆಯೊಂದಿಗೆ ಸಹಕಾರ ನೀಡಬೇಕಾಗಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಇಂಜಿನಿಯರ್ ಮನುಕುಮಾರ್, ಕಿರಿಯ ಇಂಜಿನಿಯರ್ ರವೀಂದ್ರ ಕುಮಾರ್. ಎeಟಿ ಎ.ಎಸ್.ಭಾಸ್ಕರ್, ಮಾಜಿ ಜಿಪಂ ಅಧ್ಯಕ್ಷ ಆರ್.ಕೆ.ಕುಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ತಾಲ್ಲೂಕು ಅಧ್ಯಕ್ಷ ನಾಗೇಂದ್ರ, ಗುತ್ತಿಗೆದಾರರಾದ ಹೊನ್ನೇಗೌಡ ಸೇರಿದಂತೆ ಹಲವರು ಹಾಜರಿದ್ದರು.
.

ವರದಿ: ಶಂಭು ಕಿಕ್ಕೇರಿ

error: