May 5, 2024

Bhavana Tv

Its Your Channel

ವಿಶ್ವ ಗ್ರಾಹಕರ ದಿನ ಮತ್ತು ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಪ್ರಬಂಧ ಸ್ಪರ್ಧೆ

ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ,ಚಂದಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಹಯೋಗದಲ್ಲಿ
ವಿಶ್ವ ಗ್ರಾಹಕರ ದಿನ ಮತ್ತು ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಚಂದಗಾಲು ಪಂಚಾಯಿತಿ ಕ್ಲಸ್ಟರ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳಿಗೆ ಮಂಡ್ಯ ಜಿಲ್ಲೆಯ ಶೈಕ್ಷಣಿಕ ಪ್ರವಾಸ ಮಂದಿರ ಗಳ ಬಗ್ಗೆ ಪ್ರಬಂಧ ಸ್ಪರ್ಧೆ ಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹಾಗೂ ಮಕ್ಕಳ ಸಹಾಯವಾಣಿ ೧೦೯೮ ಮಂಡ್ಯ ವತಿಯಿಂದ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮವು ಶನಿವಾರ ಬೆಳಗ್ಗೆ ೧೦ ಗಂಟೆಗೆ ಚಲ್ಲನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಡೆಯಿತು

ಕಾರ್ಯಕ್ರಮದ ಚಂದಗಾಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಮಾತನಾಡಿ ಬಾಲ್ಯಜೀವನವನ್ನು ಅನುಭವಿಸಬೇಕು ಮತ್ತು ಖುಷಿಯಿಂದರೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದು ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವುದು ಬಾಲ್ಯದಿಂದಲೇ ಅಭ್ಯಾಸ ಮಾಡಿಕೊಂಡು ಬಾಲ್ಯದ ನೆನಪನ್ನು ಸವಿಯಬೇಕೆಂದು ತಿಳಿಸಿದರು ಮತ್ತು ಸಂಸ್ಕಾರವನ್ನು ಬಾಲ್ಯದಿಂದಲೇ ರೂಡಿಸಿಕೊಳ್ಳಬೇಕು ಮತ್ತು ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡಬೇಕೆಂದರು ಮಕ್ಕಳು ಏಕಾಗ್ರತೆಯಿಂದ ಬಾಲ್ಯ ಜೀವನವನ್ನು ಅನುಭವಿಸಿ ಎಂದು ಸಲಹೆ ನೀಡಿದರು

ಉದ್ಘಾಟಸಿ ಮಾತನಾಡಿದ ಪ್ರಸಂತ್ ಬಾಬು ಕಳೆದ ದಿನಗಳಿಂದ ಕೋವಿಡ್ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಿರುವುದರಿಂದ ಶೈಕ್ಷಣಿಕವಾಗಿ ಮಕ್ಕಳ ಗಳಿಗೆ ಯಾವುದೇ ಮನರಂಜನೆ ಇರಲಿಲ್ಲ ಆದ್ದರಿಂದ ಇಂತಹ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಮಂಡ್ಯ ಅಮೃತ ಲಯನ್ಸ್ ಸಂಸ್ಥೆಯು ಹಮ್ಮಿ ಕೊಳ್ಳುತ್ತಿರುವುದು ನಿಜಕ್ಕೂ ಸಹ ಮಕ್ಕಳನ್ನು ಪ್ರೋತ್ಸಾಹಿಸಿದಂತೆ ಎಂದು ಅಭಿಪ್ರಾಯಪಟ್ಟರು ಶಾಲಾ ಮಕ್ಕಳು ಶಾಲೆಗೆ ಕೀರ್ತಿ ತಂದುಕೊಡುವAಥ ಆಗಲಿ ಮುಂದಿನ ದಿನಗಳಲ್ಲಿ ತಾವೆಲ್ಲರೂ ಉನ್ನತಮಟ್ಟಕ್ಕೆ ಹೋಗಲಿ ಎಂದು ಆಶಿಸಿದರು. ಶ್ರೀನಿವಾಸ್ ಚಂದಗಾಲ ಗ್ರಾಮ ಪಂಚಾಯತಿ ಅಧ್ಯಕ್ಷರು ಮಕ್ಕಳಿಗೆ ಶುಭಾಶಯಗಳು ತಿಳಿಸಿ ಮಕ್ಕಳನ್ನು ಪುರಸ್ಕರಿಸಿದರು ಮಕ್ಕಳ ಸಹಾಯವಾಣಿ ರವರು ಮಾತನಾಡಿ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು
ಅಧ್ಯಕ್ಷತೆ ವಹಿಸಿದ ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಅಧ್ಯಕ್ಷರಾದ ಲಯನ್ ಎಂ. ಲೋಕೇಶ್ ಮಾತನಾಡಿ ಸದರಿ ಕಾರ್ಯಕ್ರಮವನ್ನು ಎಲ್ಲರ ಸಹಾಯದೊಂದಿಗೆ ಜಿಲ್ಲೆಯಾದ್ಯಂತ ಅರಿವು ಜಾಗೃತಿ ಮೂಡಿಸಿ ಮತ್ತು ಪ್ರತಿಭಾ ಪುರಸ್ಕಾರ ಮಾಡುತ್ತಿರುವ ಅಂತದ್ದು ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಆಗಲಿ ಅಥವಾ ಯಾವುದೇ ದುರುದ್ದೇಶದಿಂದ ಆಗಲಿ ಮಾಡುತ್ತಿಲ್ಲ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳ ಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಪ್ರತಿಭಾ ಪುರಸ್ಕಾರ ಮಾಡುವಂತಹದ್ದು ಸಂಘ ಸಂಸ್ಥೆಗಳ ಕರ್ತವ್ಯವಾಗಿರುತ್ತದೆ ಮತ್ತು ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಇನ್ನುಳಿದ ಮಕ್ಕಳು ಗಳೆಲ್ಲ ಅವರಂತೆ ಮುಂದು ಬರಲು ಸಾಧ್ಯವಾಗುತ್ತದೆ ಎಂದು ಜಿಲ್ಲೆಯಾದ್ಯಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿ ಮಕ್ಕಳನ್ನು ಪ್ರಶಂಸಿ ಶಾಲೆಗೆ ಗ್ರಾಮಕ್ಕೆ ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದು ಕೊಡಿ ಎಂದು ಸಲಹೆ ನೀಡಿದರು

ಸಹ ಶಿಕ್ಷಕಿ ಶಾಂತಲಾ ಮಾತನಾಡಿದ್ದರು ಸ್ವಾಗತ ಭಾಷಣ ಮುಖ್ಯಶಿಕ್ಷಕಿ ಜಯಲಕ್ಷ್ಮಿ ಮಾಡಿದರು ಕಾರ್ಯಕ್ರಮದಲ್ಲಿ ಸುಮಾ ಎಸ್ ಡಿ ಎಂಸಿ ಅಧ್ಯಕ್ಷರು ರಮೇಶ್ ಬಸರಾಳು ಹೋಬಳಿ ಚಂದಗಾಲು ಗ್ರಾಮ ಪಂಚಾಯಿತಿ ಸದಸ್ಯರುಗಳು ಅಮೃತ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎಸ್ಡಿಎಂಸಿ ಸದಸ್ಯರುಗಳು ಚಂದಗಾಲು ಕ್ಲಸ್ಟರಿನ ವಿವಿಧ ಶಾಲೆಯ ಶಿಕ್ಷಕರು ಮಹಾಲಿಂಗೇಗೌಡ ಪ್ರತೀಶ್ ಆನಂದ್ ಯೋಗ ರಾಜ್ ಸಂಪತ್ ಕುಮಾರ್ ಮತ್ತು ಅಡುಗೆ ಸಿಬ್ಬಂದಿ ರವರು ಸೇರಿದಂತೆ ಮತ್ತಿತರರಿದ್ದರು

ವರದಿ: ಲೋಕೇಶ ಮಳವಳ್ಳಿ

error: