December 22, 2024

Bhavana Tv

Its Your Channel

ಲೈಂಗಿಕ ಕಿರುಕುಳ ಆರೋಪದಡಿ ಪೋಲೀಸರ ಅತಿಥಿಯಾದ ಶಿಕ್ಷಕ

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿ.ಗಂಗನಹಳ್ಳಿ ಗ್ರಾಮದಲ್ಲಿ ಇಂತಹ ಘಟನೆಯೊಂದು ನಡೆದಿದೆ ಶಾಲಾ ಪ್ರಾರಂಭದ ದಿನವೇ ಶಿಕ್ಷಕನೋರ್ವ ಅಮಾನತು ಆಗಿದ್ದಾನೆ

ಬಿ.ಗಂಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರಶೇಖರ್ ಕಳೆದ ಮಾರ್ಚ್ 31ರಂದು 2ನೇತರಗತಿ ವಿದ್ಯಾರ್ಥಿನಿಯನ್ನು ಶೌಚಾಲಯದ ಒಳಗೆ ಕರೆದುಕೊಂಡು ಹೋಗಿ ಕೈಕಟ್ಟಿ ಲೈಂಗಿಕ ಕಿರುಕುಳ ನೀಡಲಾಗಿದೆ ಎನ್ನಲಾಗುತ್ತಿದೆ, ಸಾಮೂಹಿಕ ರಜೆ ನೀಡಿದ್ದರಿಂದ ಇಂದು ಶಾಲಾ ಪ್ರಾರಂಭವಾಗಿತ್ತು, ಮಕ್ಕಳ ಮೂಲಕ ವಿಷಯ ತಿಳಿದುಕೊಂಡ ಗ್ರಾಮಸ್ಥರೆಲ್ಲರೂ ಕೂಡ ಒಂದೆಡೆ ಜಮಾವಣೆಯಾಗಿದ್ದರು, ಶಿಕ್ಷಕ ಬಂದ ತಕ್ಷಣ ಗ್ರಾಮಸ್ಥರೆಲ್ಲರೂ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿಷಯ ಮುಟ್ಟಿಸಿದರು ಅವರು ಸ್ಥಳಕ್ಕೆ ಆಗಮಿಸಿದ ವೇಳೆ ಗ್ರಾಮಸ್ಥರು ಹಾಗೂ ಪೋಷಕರು ಮುತ್ತಿಗೆ ಹಾಕಿ ಶಿಕ್ಷಕನನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು ಪ್ರತಿಭಟನಾಕಾರ ಒತ್ತಡಕ್ಕೆ ಮಣಿದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಎಸ್ ಕೆ ಚಂದ್ರಶೇಖರ್ ನನ್ನು ಅಮಾನತು ಮಾಡಿ ಆದೇಶವನ್ನು ಹೊರಡಿಸಿದ್ದಾರೆ

ಇನ್ನು ಸ್ಥಳಕ್ಕಾಗಮಿಸಿದ ಕಿಕ್ಕೇರಿ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದ ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ

ವರದಿ: ಶಂಭು ಕಿಕ್ಕೇರಿ

error: