April 29, 2024

Bhavana Tv

Its Your Channel

ಹೆಚ್ ಡಿ ದೇವೇಗೌಡರ ಹುಟ್ಟು ಹಬ್ಬದ ಅಂಗವಾಗಿ ರೈತರಿಗೆ ತೆಂಗಿನ ಗಿಡ ಮತ್ತು ಬಿತ್ತನ ಕಾಯಿಗಳನ್ನು ಉಚಿತವಾಗಿ ವಿತರಣೆ ಮಾಡಿದ ಐನೋರಹಳ್ಳಿ ಮಲ್ಲೇಶ್

ಕಿಕ್ಕೇರಿ: ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೆಂಪುಕೋಟೆಯ ಮೇಲೆ ರಾಷ್ಟಧ್ವಜ ಹಾರಿಸಿದ ಪ್ರಧಾನಿ ಕರುನಾಡಿನ ಸುಪುತ್ರ ಹೆಚ್ ಡಿ ದೇವೇಗೌಡರ ಹುಟ್ಟು ಹಬ್ಬದ ಅಂಗವಾಗಿ ರೈತರಿಗೆ ತೆಂಗಿನ ಗಿಡ ಮತ್ತು ಬಿತ್ತನ ಕಾಯಿಗಳನ್ನು ಉಚಿತವಾಗಿ ವಿತರಣೆ ಮಾಡಿದ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಐನೋರಹಳ್ಳಿ ಗ್ರಾಮದ ಪಗ್ರತಿ ಪರ ರೈತ ಹಾಗೂ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶರ್ ರವರು ಪ್ರತಿ ವರ್ಷದಂತೆ ಈ ವರ್ಷವು ಸಹ ಹೆಚ್ ಡಿ ದೇವೇಗೌಡರ ೯೦ ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸ್ಥಳಿಯ ಯುವ ರೈತರಿಗೆ ೯೦ ತೆಂಗಿನ ಗಿಡಗಳು ಹಾಗೂ ೯೦ ಬಿತ್ತನೆ ಕಾಯಿಗಳನ್ನು ಉಚಿತವಾಗಿ ನೀಡುವ ಮೂಲಕ ಹುಟ್ಟು ಹಬ್ಬಕ್ಕೆ ಶುಭಹಾರೈಸಿದರು.

ನಂತರ ಮಾತನಾಡಿ ದೇಶದ ೧೨ನೇ ಪ್ರಧಾನಿಯಾಗಿ ಒಂದು ಕಪ್ಪುಚುಕ್ಕೆ ಇಲ್ಲದೆ ಭಾರತದ ಅಭಿವೃದ್ಧಿಗೆ ಶ್ರೀಕಾರ ಹಾಕಿ ಕನ್ನಡದ ಹೆಮ್ಮೆಯ ಮಣ್ಣಿನ ಮಗ ನೀರಾವರಿ ಕ್ಷೇತ್ರದಲ್ಲಿ ಅನನ್ಯವಾದುದನ್ನು ಸಾಧಿಸಿದರೂ ಪ್ರಚಾರದ ಗೀಳಿಗೆ ಬೀಳದೆ ರೈತರ ಜೀವನ ಹಸನುಗೊಳಿಸಲು ಶ್ರಮಿಸಿದ ಧೀಮಂತ ನಾಯಕ ತಾನೇ ಉರಿದು ಬೆಳಕು ನೀಡುವ ದೀಪದಂತೆ
ವಿರೋಧಿಗಳ ಟೀಕೆ ಟಿಪ್ಪಣಿಗಳಿಗೆ ಜಗ್ಗದೆ ಅಳುಕದೆ ರೈತರ ಪರವಾಗಿ ನಿಂತ ಮುತ್ಸದ್ಧಿ ರಾಜಕಾರಣಿ
ಪ್ರಧಾನಿ ಹುದ್ದೆಗೇರಿದರೂ ಸಾಮಾನ್ಯ ಗ್ರಾಮೀಣ ರೈತನಂತೆ ಸರಳ ಜೀವನ ಶೈಲಿಯಿಂದ ಇತರ ನಾಯಕರಿಗೂ ಮಾದರಿಯಾದ ಲೋಕೋಪಯೋಗಿ
ಹರದನಹಳ್ಳಿಯಲ್ಲಿ ಹುಟ್ಟಿ ಶಾಸಕ, ಸಚಿವ, ಮುಖ್ಯಮಂತ್ರಿ, ಪ್ರಧಾನಿ ಹುದ್ದೆಗಳನ್ನು ಅಲಂಕರಿಸಿದರೂ ಗರ್ವ ತೋರದೆ ಆಡಳಿತ ನಡೆಸಿದ ಹೆಮ್ಮೆಯ ನಾಯಕ
ಇಳಿವಯಸ್ಸಿನಲ್ಲೂ ತನ್ನ ನೋವು ಲೆಕ್ಕಿಸದೆ ಜೆಡಿಎಸ್ ಪಕ್ಷವನ್ನೇ ನಂಬಿ ಶ್ರಮಿಸುತ್ತಿರುವ ಅಸಂಖ್ಯಾತ ಕಾರ್ಯಕರ್ತರಿಗಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿರುವ ಛಲಗಾರ ಹೆಚ್ ಡಿ ದೇವೇಗೌಡರ ೯೦ ನೇ ವರ್ಷದ ಹುಟ್ಟು ಹಬ್ಬಕ್ಕೆ ಶುಭಕೋರಿದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: