December 22, 2024

Bhavana Tv

Its Your Channel

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಮದ್ಯವರ್ಜನ ಶಿಬಿರ

ಕಿಕ್ಕೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಕಾರ್ಯಕ್ರಮವನ್ನು ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷ ಹಾಗೂ ಜೆ.ಡಿ.ಎಸ್ ಪಕ್ಷದ ಯುವ ನಾಯಕ ಬಿ.ಎಂ ಕಿರಣ್ ರವರು ಉದ್ಘಾಟಿಸಿದರು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಕುರುವಿನಶೆಟ್ಟಿ ಸಮುದಾಯ ಭವನದಲ್ಲಿ 1534 ನೇ ಮದ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ ಕಿರಣ್ ನೇರವೇರಿಸಿದರು

ನಂತರ ಮಾತನಾಡಿ ಮದ್ಯಪಾನದಿಂದ ಮನುಷ್ಯ ಆರೋಗ್ಯ ಮತ್ತು ಸಾಂಸಾರಿಕ ಜೀವನ ಬೀದಿಗೆ ಬರುತ್ತಿದೆ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವ ಮಾರ್ಗದರ್ಶನದಲ್ಲಿ ಇಂತಹಾ ಕಾರ್ಯಕ್ರಮಗಳನ್ನು ಮಾಡಿ ಎಷ್ಟೂ ಕುಟುಂಬಗಳ ಬದುಕು ರೂಪಿಸಿಕೊಂಡಿದ್ದಾರೆ ಶಿಬಿರದಲ್ಲಿ ಭಾಗವಹಿಸಿರುವ ಎಲ್ಲಾರೂ ಮದ್ಯವನ್ನು ತೆಜಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂದು ತಿಳಿಸಿದರು

ಮಂಡ್ಯ ಜಿಲ್ಲೆಯ ಜನಜಾಗೃತ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಮಾತನಾಡಿ ಕುಡಿತ ಮನುಷ್ಯನ ಜೀವನ ಹಾಳು ಮಾಡುತ್ತಿದೆ ಮನುಷ್ಯ ಕುಡಿತದಿಂದ ದೂರ ಉಳಿದು ತಮ್ಮ ಮಕ್ಕಳ ಭವಿಷ್ಯ ಹಾಗೂ ಸಂಸಾರದ ಜವಾಬ್ದಾರಿಯನ್ನು ಹೊತ್ತು ಉತ್ತಮ ಜೀವನ ರೂಪಿಸಿಕೊಳ್ಳವಂತೆ ಸಲಹೆ ನೀಡಿದರು

ಕಾರ್ಯಕ್ರಮದಲ್ಲಿ ಕಿಕ್ಕೇರಿ ಪಂಚಾಯಿತಿ ಅಧ್ಯಕ್ಷರಾದ ಸುನಿತಾ ದಯಾನಂದ್, ಕಮಿಟಿಯ ಅಧ್ಯಕ್ಷರಾದ ನಾರಾಯಣಗೌಡರು, ಶಿಬಿರಾಧಿಕಾರಿ ನಾಗರಾಜು, ಸ್ಟೂಡಿಯೋ ಕುಮಾರ್, ವಕೀಲರಾದ ಮಂದಗೆರೆ ಸರೋಜಮ್ಮ, ಆರೋಗ್ಯ ಸಹಾಯಕಿ ಫಿಲೋಮಿನಾ ಡಿ ಸೋಜ, ಮಧ್ಯವರ್ಜ ಶಿಭಿರದ ವ್ಯವಸ್ಥಾಪನ ಸಮಿತಿಯ ಎಲ್ಲಾ ಸದಸ್ಯರು ಹಾಗೂ ನವಜೀವನ ಸಮಿತಿಯ ಸದಸ್ಯರು ತಾಲೂಕಿನ ಎಲ್ಲಾ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು..

ವರದಿ ಶಂಭು ಕಿಕ್ಕೇರಿ ಕೃಷ್ಣರಾಜಪೇಟೆ

error: