May 4, 2024

Bhavana Tv

Its Your Channel

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ

ಕಿಕ್ಕೇರಿ:- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀ ಧರ್ಮಸ್ಥಳ ಗ್ರಾಮೀಣಾವೃದ್ದಿ ಯೋಜನೆಯ ಸಂಘದ ವತಿಯಿಂದ ಆನೆಗೊಳ ಗ್ರಾಮದ ಶ್ರೀ ಆದಿಚುಂಚನಗಿರಿ ಪ್ರೌಡ ಶಾಲೆಯಲ್ಲಿ ಸಸಿಗಳನ್ನು ನೆಟ್ಟು ನೀರೆರೆದು ವಿಧ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಜಾಗೃತಿ ನೀಡಲಾಯಿತು ..

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಆನೆಗೊಳ ಗ್ರಾಮದ ಶ್ರೀ ಆದಿಚುಂಚನಗಿರಿ ಪ್ರೌಡ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕಿಕ್ಕೇರಿ ತಾಲ್ಲೂಕು ಯೋಜನಾಧಿಕಾರಿಗಳಾದ ವೀರೇಶಪ್ಪ ಮತ್ತು ಸಂಘದ ಸದಸ್ಯರರು ಶ್ರೀ ಆದಿಚುಂಚನಗಿರಿ ಪ್ರೌಡ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಮಕ್ಕಳಲ್ಲಿ ಪರಿಸರದ ಬಗ್ಗೆ ಹರಿವು ಮೂಡಿಸಿದರು

ನಂತರ ಮಾತನಾಡಿ ಪ್ರತಿ ಪ್ರಜೆಯು ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಆರೈಕೆ ಮಾಡಿ ಜೋಪಾನ ಮಾಡಬೇಕು. ಮನೆಗೆರಡು ಮರ, ಊರಿಗೊಂದು ವನ ಎಂಬ ಹಿರಿಯರ ನಾಣ್ಣುಡಿಯನ್ನು ನನಸಾಗಿಸುವ ದಿಕ್ಕಿನಲ್ಲಿ ಪ್ರತಿಯೊಬ್ಬರೂ ತಮ್ಮ ಬದ್ಧತೆ ಹಾಗೂ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಮಾನವರಾದ ನಾವು ಪರಿಸರದ ಜೊತೆಯಲ್ಲಿ ಅವಿನಾಭಾವ ಸಂಬAಧವನ್ನು ಹೊಂದಿದ್ದು ಕಾಡಿದ್ದರೆ ನಾಡು, ಕಾಡು ಮತ್ತು ಗಿಡಮರಗಳಿಂದ ನಾಡಿಗೆ ಮಳೆ ಮತ್ತು ಬೆಳೆ ಹಾಗೂ ಗ್ರಾಮಗಳ ಉಳಿವು ಎಂಬ ಸತ್ಯ ಸಂಗತಿಯನ್ನು ಅರಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಗ್ರಾಮೀಣಾಭಿವೃದ್ಧಿ ಅಧಿಕಾರಿ ಕುಮಾರ್, ಮಲ್ಲೇಶ್, ಗ್ರಾಮ ಪಂಚಾಯತಿ ಸದಸ್ಯ ನಂಜೇಶ್, ಮಾಜಿ ಸದಸ್ಯ ಶ್ರೀನಿವಾಸ್, ನಿವೃತ್ತ ಶಿಕ್ಷಕ ರಾಮೇಗೌಡ್ರು, ಶಿಕ್ಷಕರಾದ ಪುರುಷೋತಮ, ಪ್ರಕಾಶ್, ಮುಖಂಡರಾದ ದೇವರಾಜು ಸೇರಿದಂತೆ ಮತ್ತಿತ್ತರರು ಭಾಗವಹಿಸಿದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: