December 22, 2024

Bhavana Tv

Its Your Channel

ಚಾಲಕ ವೃತ್ತಿ ನಂಬಿದ ಆಟೊ,ಟ್ಯಾಕ್ಶಿ,ಮತ್ತು ಲಾರಿ ಚಾಲಕರ ಕುಟುಂಬಗಳಿಗೆ ದಿನಸಿ ಕಿಟ್‌ಗಳ ವಿತರಿಸಿದ ಅರವಿಂದ್ ಕಾಮತ್.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಖ್ಯಾತ ಉದ್ಯಮಿಗಳು ಹಾಗೂ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಅರವಿಂದಕಾರAತ್‌ಚಾಲಕ ವೃತ್ತಿ ನಿರ್ವಹಿಸಿ ಜೀವನ ನಡೆಸುವ ಅನೇಕ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಸಂಕಷ್ಠದಲ್ಲಿರುವ ೫೦ಕ್ಕು ಅಧಿಕ ಆಟೋ, ಟ್ಯಾಕ್ಸಿ ಮತ್ತು ಲಾರಿ ಚಾಲಕರ ಕುಟುಂಬಗಳಿಗೆ ದಿನಸಿ ವಿತರಣೆ ಮಾಡುವ ಮೂಲಕ ನೆರವಾದರು..ಸಮಾಜದಲ್ಲಿ ಜೀವನ ನಡೆಸುವ ಎಲ್ಲರಿಗೂ ದಾನ ಧರ್ಮ ಮಾಡುವ ಮನಸ್ಸು ಇರುವುದಿಲ್ಲ, ಆದರೆ ಕಳೆದ ೪೫ ದಿನಗಳಿಂದ ಕೆಲಸವಿಲ್ಲದೇ ದುಡಿಮೆಯಿಲ್ಲದೇ ಸಂಕಷ್ಠದಲ್ಲಿರುವ ಕಾರುಗಳ, ಆಟೋಗಳ ಮತ್ತು ಲಾರಿಗಳ ಚಾಲಕರಿಗೆ ಪುಡ್ ಕಿಟ್ ಗಳನ್ನು ಸ್ವಯಂ ಪ್ರೇರಣೆಯಿಂದ ವಿತರಿಸಿ, ಸಂಕಷ್ಠದಲ್ಲಿರುವ ಶ್ರಮಜೀವಿಗಳಿಗೆ ಹೃದಯಶ್ರೀಮಂತಿಕೆಯನ್ನು ಪ್ರದರ್ಶನ ಮಾಡಿದ್ದಾರೆ ಎಂದು ಫಲಾನುಭವಿಗಳು ಶ್ಲಾಘಿಸಿದರು…ತಹಶೀಲ್ದಾರ್ ಎಂ.ಶಿವಮೂರ್ತಿ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಡಿ.ಲಕ್ಷ್ಮಣ್ ಫುಡ್ ಕಿಟ್ ಗಳನ್ನು ವಿತರಿಸಿದರು…
ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ, ಆಸರೆ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ಆಟೋ ಚಾಲಕರ ಸಂಘದ ಅಧ್ಯಕ್ಷ ವಾಸುದೇವ ಮತ್ತಿತರರು ಉಪಸ್ಥಿತರಿದ್ದರು….

error: