June 15, 2024

Bhavana Tv

Its Your Channel

ಮೈಸೂರು ದಕ್ಷಿಣ ವಲಯ ಪೊಲೀಸ್ ಐಜಿಪಿ ವಿಪುಲ್ ಕುಮಾರ್ ಸಿಂಗ್ ಸಾತೇನಹಳ್ಳಿ ಗ್ರಾಮಕ್ಕೆ ಭೇಟಿ.

ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ದಕ್ಷಿಣ ವಲಯ ಪೊಲೀಸ್ ಐಜಿಪಿ ವಿಪುಲ್ ಕುಮಾರ್ ಸಿಂಗ್ ಭೇಟಿ ನೀಡಿ ತಾಲ್ಲೂಕು ಟಾಸ್ಕ್ ಫೋರ್ಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸೋಂಕಿತನನ ಪತ್ನಿಯಿಂದ ಮಾಹಿತಿ ಪಡೆದ ಪೊಲೀಸ್ ಕಮಿಷನರ್.

ಇದೆ ಸಂದರ್ಭದಲ್ಲಿ ಮುಂಬೈಯಿಂದ ಬಂದಿರುವ ಸೋಂಕಿತ ವ್ಯಕ್ತಿಯ ಮನೆ ಬಳಿಗೆ ತೆರಳಿ ಸೋಂಕಿತನ ಪತ್ನಿಯಿಂದ ಮಾಹಿತಿ ಪಡೆದು, ಆರೋಗ್ಯ ವಿಚಾರಿಸಿದರು. ಅಲ್ಲದೆ ಗ್ರಾಮಸ್ಥರಿಗೆ ಧೈರ್ಯ ತುಂಬುವ ಜೊತೆಗೆ ಅಧಿಕಾರ ಅಧಿಕಾರಿಗಳ ತಂಡದೊಂದಿಗೆ ಗ್ರಾಮದ ಸುತ್ತಲಿನ ಸೀಲ್ ಡೌನ್ ವ್ಯವಸ್ಥೆಯನ್ನು ಪರಿಶೀಲಿಸಿದರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ, ಉಪವಿಭಾಗಾಧಿಕಾರಿ ಶೈಲಜಾ, ತಾಹಶಿಲ್ದಾರ್ ಕುಂಞ ಅಹಮದ್, ಆರೋಗ್ಯ ಅಧಿಕಾರಿ ಡಾ:ಧನಂಜಯ್, ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿ ಅನಂತರಾಜು, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಡಿವೈಎಸ್ಪಿ ವಿಶ್ವನಾಥ್, ಸಿಪಿಐ ರಾಜೇಂದ್ರ, ಹಾಗೂ ಬಿಂಡಿಗನವಿಲೆ ಪಿಎಸ್ಐ ಬಸವರಾಜು, ಹಾಜರಿದ್ದರು.

ವರದಿ: ದೇ.ರಾ .ಜಗದೀಶ ನಾಗಮಂಗಲ

error: