April 26, 2024

Bhavana Tv

Its Your Channel

ಸಾತೇನಹಳ್ಳಿ ಗ್ರಾಮಕ್ಕೆ ಶಾಸಕ ಸುರೇಶ್ ಗೌಡ, ಹಾಗೂ ಎಂಎಲ್ಸಿ ಅಪ್ಪಾಜಿ ಗೌಡ ಭೇಟಿ.

ನಾಗಮಂಗಲ : ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಸಾತೇನಹಳ್ಳಿ ಗ್ರಾಮಕ್ಕೆ ತಾಲ್ಲೂಕು ಆಡಳಿತದೊಂದಿಗೆ ಮಾನ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸುರೇಶ್ ಗೌಡ ರವರು ಮತ್ತು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಪ್ಪಾಜಿಗೌಡ ರವರು ಸಾತೇನಹಳ್ಳಿ ಗ್ರಾಮದಲ್ಲಿ ಕೊರೊನಾ ವೈರಸ್ ಸೋಂಕಿತ ಕಂಡು ಬಂದಿರುವುದರಿAದ ಗ್ರಾಮಕ್ಕೆ ಭೇಟಿ ನೀಡಿ ಊರಿನ ಮುಖಂಡರಿಗೂ ಗ್ರಾಮಸ್ಥರಿಗೆ ಹಾಗೂ ಸೋಂಕಿತ ಪತ್ನಿ ಮತ್ತು ಕುಟುಂಬದವರಿಗೆ ಧೈರ್ಯದಿಂದ ಇರುವಂತೆ ಮನವಿ ಮಾಡಿದರು.

ನಂತರ ಅಲ್ಲಿನ ಗ್ರಾಮಸ್ಥರು, ಆಹಾರ, ಹಸು ಕರುಗಳ ಮೇವು, ಹಾಗೂ ಹಾಲು ಸರಬರಾಜು ಮತ್ತು ವಿದ್ಯುತ್ ತೊಂದರೆಯಾಗಿರುವ ಬಗ್ಗೆ ಅಳಲನ್ನು ತೋಡಿ ಕೊಂಡಿದ್ದನ್ನೂ , ಆಲಿಸಿದ ಮಾನ್ಯ ಶಾಸಕರು,ಸ್ಥಳದಲ್ಲಿಯೇ ಸಂಬAಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸದರಿ ಗ್ರಾಮಸ್ಥರಿಗೆ ಯಾವುದೇ ತರಹದ ತೊಂದರೆಯಾಗದAತೆ ಕ್ರಮವಹಿಸಲು ತಾಲ್ಲೂಕು ಆಡಳಿತಕ್ಕೆ ಸೂಚಿಸಿದರು.

ಗ್ರಾಮಸ್ಥರಿಗೆ ಆಶಾ ಕಾರ್ಯಕರ್ತರ ಮೂಲಕ ಸ್ಯಾನಿಟೈಸರ್, ಹಾಗೂ ಮಾಸ್ಕ್ ಗಳನ್ನ ವಿತರಿಸಿ ದಯಮಾಡಿ ಯಾರು ಸಹ ಮನೆಯಿಂದ ಹೊರಗೆ ಬರಬೇಡಿ , ಸ್ಯಾನಿಟೈಸರ್,ಹಾಗೂ ಮಾಸ್ಕ್ ಗಳನ್ನೂ ಕಡ್ಡಾಯವಾಗಿ ಉಪಯೋಗಿಸಿ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮನವಿ ಮಾಡಿ, ಗ್ರಾಮಸ್ಥರಿಗೆ ದೈರ್ಯ ದಿಂದ ಇರುವಂತೆ ಹೇಳಿದರು.

ವಿಧಾನಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ ಮಾತನಾಡಿ ರಾಜ್ಯದ ಗಡಿಯಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ನಾಗಮಂಗಲ ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಬಂದಿದೆ ಅಂದರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದರು.

ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳಾದ ಉಪವಿಭಾಗಾಧಿಕಾರಿ ಶೈಲಜಾ, ತಾಹಶಿಲ್ದಾರ್ ಕುಂಞ ಅಹಮದ್, ಆರೋಗ್ಯ ಅಧಿಕಾರಿ ಡಾ:ಧನಂಜಯ್, ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿ ಅನಂತರಾಜು, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸಿಪಿಐ ರಾಜೇಂದ್ರ, ಹಾಗೂ ಬಿಂಡಿಗನವಿಲೆ ಪಿಎಸ್‌ಐ ಬಸವರಾಜು, ಹಾಜರಿದ್ದರು.

ವರದಿ: ದೇ.ರಾ .ಜಗದೀಶ ನಾಗಮಂಗಲ

error: