May 8, 2024

Bhavana Tv

Its Your Channel

ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಸಮಾಜ ಸೇವಕ ಫೈಟರ್ ರವಿ

ನಾಗಮಂಗಲ:- ನಾಗಮಂಗಲ ಟೌನ್ ಮಾದರಿ ಹಿರಿಯ ಪ್ರೌಢ ಶಾಲೆಯಲ್ಲಿ ಸಮಾಜ ಸೇವಕರಾದ ಮಲ್ಲಿಕಾರ್ಜುನ್(ಫೈಟರ್ ರವಿ) ರವರು ಸುಮಾರು 3,50,000 ಲಕ್ಷ ವೆಚ್ಚದಲ್ಲಿ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.ಹಾಗೂ ಶಾಲಾ ಮಕ್ಕಳಿಗೆ ಗ್ರಂಥಾಲಯ ನಿರ್ಮಾಣ ಖರ್ಚಿಗಾಗಿ 15,000 ರೂಪಾಯಿಯನ್ನು ಸಹ ನೀಡಿದರು…

ಫೈಟರ್ ರವಿ ಮಾತನಾಡಿ ನಾಗಮಂಗಲ ಕಸಬಾ ಹೋಬಳಿ ಹಾಗೂ ತಾಲ್ಲೂಕುಗಳಲ್ಲಿ ಪ್ರತಿ ಗ್ರಾಮಗಳಿಗೂ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವುದಾಗಿ ಹಾಗೂ ಪ್ರತಿಯೊಂದು ಗ್ರಾಮಗಳಲ್ಲಿ ಆರೋಗ್ಯ ಶಿಬಿರ ನಡೆಸುವುದಾಗಿ ತಿಳಿಸಿದರು.ಹಾಗೂ ನಾಗಮಂಗಲ ತಾಲೂಕು ವಡೆಯನಪುರ ಗ್ರಾಮದಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಊರಿನ ಪ್ರಮುಖ ದ್ವಾರದಲ್ಲಿ ನೀರಿನ ಘಟಕ ಸ್ಥಾಪನೆಗೆ 2,50,000 ರೂಪಾಯಿಯನ್ನು ಗ್ರಾಮಸ್ಥರಿಗೆ ನೀಡಿದರು…

ಇದೆ ಸಂದರ್ಭದಲ್ಲಿ ಮಾದರಿ ಶಾಲೆ ಅಧ್ಯಕ್ಷರು ಕೃಷ್ಣೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಜೆ ಕುಮಾರ್,ಮಲ್ಲಿಕಾರ್ಜುನ ಸಹಾಯಕರದ ಪವನ್, ಅರ್ಜುನ್, ಪುನೀತ್, ಹೇಮಂತ್, ಪ್ರಶಾಂತ್, ರವಿ,ಶಾಲಾ ಮಕ್ಕಳು,ಶಿಕ್ಷಕರು, ಹಾಗೂ ಗ್ರಾಮಸ್ಥರು ಹಾಜರಿದ್ದರು…

ವರದಿ:- ಟಿ ಎಸ್ ಶಶಿಕಾಂತ್

error: