
ಕಿಕ್ಕೇರಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ವಾಣಿಜ್ಯ ಮಳಿಗೆ ಮತ್ತು ಆಡಳಿತ ಕಛೇರಿ ಹಾಗೂ ಸಭಾಂಗಣ ವನ್ನು ಶ್ರವಣಬೆಳಗೊಳದ ಶಾಸಕರಾದ ಸಿ.ಎನ್ ಬಾಲಕೃಷ್ಣ ರವರು, ಕರ್ನಾಟಕ ಮಾರಾಟ ಮಹಾ ಮಂಡಲಿಯ ನಿರ್ದೇಶಕ ಸಿ.ಎನ್ ಪುಟ್ಟಸ್ವಾಮಿ,ಗೌಡ್ರು, ಎಂ.ಡಿ.ಸಿ ಬ್ಯಾಂಕ್ ಉಪಾಧ್ಯಕ್ಷ ಆಶೋಕ್ ಸಂಘದ ಅಧ್ಯಕ್ಷ ಚಿಕ್ಕತರಹಳ್ಳಿ ಮಧು ರವರು ಉದ್ಘಾಟಿಸಿದರು
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀದ ಆನೆಗೊಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಂಘ ಮಳಿಗೆ ಉದ್ಘಾಟನೆ ಹಾಗೂ ವಾರ್ಷಿಕ ಮಾಹಾ ಸಭೆಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ.ಎನ್ ಬಾಲಕೃಷ್ಣ ರವರು ಭಾಗವಹಿಸಿ ಮಾತನಾಡಿ ನಿಷ್ಠೆ, ಪ್ರಾಮಾಣಿಕ, ಹೊಸತನ ವಿಶೇಷ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಮೂಲಕ ಅಭಿವೃದ್ಧಿ ಹೊಂದಬೇಕಾಗಿದೆ. ಸಹಕಾರಿ ಸಂಘಗಳು ಬರಿ ಸಾಲ ಕೊಡುವುದಕ್ಕೆ ಅಷ್ಟೇ ಸೀಮಿತವಾಗಿರಬಾರದು. ರೈತರಿಗೆ ರಸ ಗೊಬ್ಬರ, ಕ್ರಿಮಿನಾಶಕ ಔಷಧಿಗಳು, ಪಹಣಿ ಸೇರಿದಂತೆ ಇನ್ನಿತರ ರೈತರಿಗೆ ಸುಗಮವಾಗಿ ಸಿಗುವಂತ ಸೌಲಭ್ಯಗಳನ್ನು ಸಹಕಾರಿ ಸಂಘಗಳಿAದ ಕೊಡುವ ಮೂಲಕ ಬೆಳೆಸಬೇಕು. ಆ ನಿಟ್ಟಿನಲ್ಲಿ ಸಿಬ್ಬಂದಿ ಮತ್ತು ಸಂಘದ ಸರ್ವ ಸದಸ್ಯರು ಶ್ರಮವಹಿಸಿ ಕೆಲಸ ಮಾಡಬೇಕು ರೈತರ ಆದಾಯಕ್ಕೆ ತಕ್ಕಂತೆ ರೈತರಿಗೆ ಸಾಲ ನೀಡಿ ಸಾಲ ಮರುಪಾವತಿ ಕಾರ್ಯಗಳು ನಿಗದಿತ ಸಮಯದಲ್ಲಿ ನೋಡಿಕೊಳ್ಳಬೇಕು. ರೈತರೊಂದಿಗೆ ಉತ್ತಮ ಸಂಪರ್ಕ ಹೊಂದಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು..
ಕಾರ್ಯಕ್ರಮದಲ್ಲಿ ಎಂ.ಡಿ.ಸಿ.ಸಿ ಬ್ಯಾಕ್ ನಾ ಉಪಾದ್ಯಕ್ಷ ಆಶೋಕ್, ಮಾಜಿ ಶಾಸಕ ಬಿ. ಪ್ರಕಾಶ್, ಟಿ.ಎ.ಪಿ.ಎಸ್ ಅಧ್ಯಕ್ಷ ಬಿ.ಎಲ್ ದೇವರಾಜು, ಮನ್ ಮುಲ್ ನಿರ್ದೇಶಕ ಹೆಚ್ ಟಿ ಮಂಜು, ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ ಕಿರಣ್, ಪುರಸಭೆ ಸದಸ್ಯ ಸಂತೋಷ್, ಸಂಘದ ಅಧ್ಯಕ್ಷರಾದ ಮಧು, ಉಪಾಧ್ಯಕ್ಷರಾದ ನಾಗಮ್ಮ, ನಿರ್ದೇಶಕರಾದ ದಾನಶೇಖರ್, ಮಹಾಲಿಂಗೇಗೌಡ, ಉದಯಶಂಕರ್, ರಮೇಶ್, ಕುಮಾರ್, ಬಾಲಚಂದ್ರು, ನಾಗರಾಜು, ಲತಾಕುಮಾರ್, ರಾಜು, ಮೇಲ್ವಿಚಾರಕ ರಘು, ಕಾರ್ಯದರ್ಶಿ ಸೊಳ್ಳೇಪುರ ಕುಮಾರ್, ಮುಖಂಡರದಾದ ಚಿಕ್ಕತರಹಳ್ಳಿ ಮಂಜುನಾಥ್, ಸೇರಿದಂತೆ ನೂರಾರು ಮುಖಂಡರು ಇದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ