April 17, 2025

Bhavana Tv

Its Your Channel

ಕಿಕ್ಕೇರಿಯ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಆಯುಧ ಪೂಜಾ ಕಾರ್ಯಕ್ರಮ

ಕಿಕ್ಕೇರಿ: ನವರಾತ್ರಿ ಪ್ರಯುಕ್ತ ದಸರಾ ಮತ್ತು ಆಯುಧ ಪೂಜೆಯ ಸಂಭ್ರಮ ಸಡಗರ ಮನೆ ಮಾಡಿತ್ತು. ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಇಂದು ಆಯುಧ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಿಕ್ಕೇರಿ ಘಟಕದ ಯೋಜನಾಧಿಕಾರಿ ವೀರೇಶಪ್ಪ ರವರ ನೇತೃತ್ವದಲ್ಲಿ ಸಂಘದ ಕಚೇರಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಹಾಗೂ ಚಾಮುಂಡೇಶ್ವರಿ ದೇವಿಯ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಂಘದ ಸದಸ್ಯರಗಳ ವಾಹನಗಳಿಗೆ ಕುಂಬಳಕಾಯಿ ಹೊಡೆದು ಪೂಜಿಸಿ, ಪೂಜೆಗೆ ಆಗಮಿಸಿದವರಿಗೆ ಸಿಹಿ ಹಂಚಿ, ಆಯುಧ ಪೂಜಾ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಘದ ನೂರಾರು ಮಹಿಳೆಯರು ಸಮವಸ್ತ್ರ ತೊಟ್ಟು ಕಾರ್ಯಕ್ರಮಕ್ಕೆ ಮೆರಗು ನೀಡಿದರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: