ಮಂಡ್ಯ: ನಾನು ನನ್ನದು ಎಂಬ ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸಮಾಜಮುಖಿ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜದ ಉನ್ನತಿಗೆ ದುಡಿಯುತ್ತಾ ತನ್ನ ಕೈಲಾದ ಸಹಾಯವನ್ನು ನೊಂದವರು ಹಾಗೂ ಅಸಹಾಯಕರಿಗೆ ಮಾಡುತ್ತಿರುವ ರೈತ ಕೃಷಿಕೂಲಿ ಕಾರ್ಮಿಕ ಮಹಿಳೆ ಶಾರದಮ್ಮ ಅವರು ಕೊರೋನಾ ತಡೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಾನು ಕೂಡಿಟ್ಟಿದ್ದ ೬ಸಾವಿರ ರೂಪಾಯಿ ಹಣವನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕೃಷ್ಣರಾಜಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಹಿರಳಹಳ್ಳಿ ಗ್ರಾಮದ ರೈತ ಮಹಿಳೆಯಾದ ಶ್ರೀಮತಿ ಶಾರದಮ್ಮ ಅವರು ಇಂದು ಪಟ್ಟಣದ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು ತಮ್ಮ ಕಛೇರಿಗೆ ಬರುವವರೆಗೂ ಕಾದು, ತಾನು ಕಷ್ಟಪಟ್ಟು ಕೂಡಿಟ್ಟಿದ್ದ ೬ಸಾವಿರ ರೂಪಾಯಿ ಹಣವನ್ನು ನೀಡಿ ಕೊರೋನಾ ಮಹಾಮಾರಿಯ ಅಟ್ಟಹಾಸದಿಂದ ನೊಂದಿರುವ ಜನರ ಕಲ್ಯಾಣಕ್ಕೆ ಇಲ್ಲವೇ ಸಂಕಷ್ಢದ ನಿವಾರಣೆಗೆ ಬಳಸಿಕೊಳ್ಳಿ, ನಾನು ೭೦ ವರ್ಷವಾದರೂ ಆರೋಗ್ಯವಾಗಿದ್ದೀನಿ, ನನಗೆ ಯಾವುದೇ ಖಾಯಿಲೆಗಳಿಲ್ಲ..ಮಾತ್ರೆ ಔಷಧಿಗಳನ್ನು ಬಳಸುತ್ತಿಲ್ಲ. ನನಗೆ ಹಣದ ಅವಶ್ಯಕತೆಯಿಲ್ಲ ನಾನು ಕೂಡಿಟ್ಟಿರುವ ಹಣವು ನೊಂದ ಜನರ ಕಣ್ಣೀರನ್ನು ಒರೆಸಲು ಬಳಕೆಯಾದರೆ ಸಾಕು ಸ್ವಾಮಿ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಶಾರದಮ್ಮ ಅವರ ಮೇಲಿನ ಗೌರವವು ಇನ್ನು ಹೆಚ್ಚಾಯಿತು..ಹಣವನ್ನು ಸ್ವೀಕರಿಸಿ ಶಾರದಮ್ಮ ಅವರಿಗೆ ಅಭಿನಂದನಾ ಪತ್ರವನ್ನು ನೀಡಿ ನೂರ್ಕಾಲ ಸುಖವಾಗಿ ಬಾಳವ್ವ ಎಂದು ಹರಸಿ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು…
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ