April 23, 2024

Bhavana Tv

Its Your Channel

ತೆಂಗು ಬೆಳೆಗಾರರಿಗೆ ನೆರವಾಗುವಂತೆ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ

ಮಂಡ್ಯ: ಕೊರೋನಾ ಲಾಕ್ ಡೌನ್ ಪರಿಣಾಮದ ಹಿನ್ನೆಲೆಯಲ್ಲಿ ತೆಂಗು ಬೆಳೆಗಾರರು ಮಾರುಕಟ್ಟೆಯಿಲ್ಲದೇ ಸಂಕಷ್ಠಕ್ಕೆ ಸಿಲುಕಿದ್ದಾರೆ. ಆದ್ದರಿಂದ ತೆಂಗು ಬೆಳೆಗಾರರ ಜೀವನವು ದುಸ್ತರವಾಗಿದೆ. ರಾಜ್ಯ ಸರ್ಕಾರವು ತೆಂಗು ಉಪ ಉತ್ಪನ್ನಗಳ ಘಟಕಗಳನ್ನು ಆರಂಬಿಸಿ ತೆಂಗು ಬೆಳೆಗಾರರ ಸಂಕಷ್ಠಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಕೃಷ್ಣರಾಜಪೇಟೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ತಹಶೀಲ್ದಾರ್ ಎಂ.ಶಿವಮೂರ್ತಿ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು

ರಾಜ್ಯ ಸರ್ಕಾರವು ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತೆಂಗಿಗೆ ಮಾರುಕಟ್ಟೆಯನ್ನು ಒದಗಿಸಿಕೊಡಲು ಮುಂದಾಗಬೇಕು. ತೆಂಗಿನ ಕಾಯಿಪುಡಿ, ಕೋಕನಟ್ ಮಿಲ್ಕ್, ತೆಂಗಿನ ಎಣ್ಣೆ ಘಟಕ, ಎಳನೀರು ಸಂಸ್ಕರಣಾ ಘಟಕ, ವಿನೇಗರ್ ತಯಾರಿಕಾ ಘಟಕ ಸೇರಿದಂತೆ ಇತರೆ ತೆಂಗು ಉತ್ಪನ್ನಗಳ ಸಂಸ್ಕರಣಾ ಘಟಕಗಳನ್ನು ಆರಂಬಿಸಿ ಮಾರುಕಟ್ಟೆಯಲ್ಲಿ ತೆಂಗಿಗೆ ಬೇಡಿಕೆಯು ಹೆಚ್ಚಾಗುವಂತೆ ಮಾಡಬೇಕು ಎಂದು ರಾಜ್ಯ ರೈತಸಂಘದ ಹಿರಿಯ ಉಪಾಧ್ಯಕ್ಷರಾದ ಮಂದಗೆರೆ ಜಯರಾಂ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು ತಹಶೀಲ್ದಾರ್ ಎಂ.ಶಿವಮೂರ್ತಿ ಅವರ ಮೂಲಕ
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರೈತನಾಯಕ ಮುದುಗೆರೆ ರಾಜೇಗೌಡ, ಬೂಕನಕೆರೆ ನಾಗರಾಜು, ನಗರೂರು ಕುಮಾರ್, ಕರೋಟಿ ತಮ್ಮಯ್ಯ, ಚೌಡೇನಹಳ್ಳಿ ಪುಟ್ಟೇಗೌಡ ಮತ್ತಿತರರು ಉಪಸ್ಥಿತರಿದ್ದರು.

error: