December 22, 2024

Bhavana Tv

Its Your Channel

ಮಂಡ್ಯದಲ್ಲಿ ಎರಡು ಜನರಿಗೆ ಕರೋನಾ ಸೊಂಕು ದೃಡ ಎಂದು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆOಕಟೇಶ್

ಮಂಡ್ಯ; ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಮರುವನಹಳ್ಳಿ ಮತ್ತು ಹೊನ್ನೇನಹಳ್ಳಿ ನಿವಾಸಿಗಳಿಗೆ ಕೊರೋನಾ ಪಾಸಿಟಿವ್ ಸೋಂಕು ಪತ್ತೆಯಾಗಿದ್ದು ಇರ್ವರು ಮುಂಬೈನಿoದ ತಾಲ್ಲೂಕಿಗೆ ಆಗಮಿಸಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ದೃಡವಾಗಿದ್ದು ಇಬ್ಬರೂ ಸೋಂಕಿತರಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ಪತ್ತೆಗಾಗಿ ಸ್ಥಾಪಿಸಿರುವ ಗಂಟಲುದ್ರವದ ಸ್ವ್ಯಾಬ್ ಟೆಸ್ಟಿಂಗ್ ಕೇಂದ್ರಕ್ಕೆ ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂಬೈನಿAದ ಆಗಮಿಸಿರುವ ಸಾರ್ವಜನಿಕರೊಂದಿಗೆ ಕುಶಲೋಪರಿ ವಿಚಾರಣೆ ನಡೆಸಿದ ಬಳಿಕ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇದ್ದು, ಕೊರೋನಾ ಪತ್ತೆಯ ಪರೀಕ್ಷೆಗೊಳಗಾಗಿ ಆತ್ಮವಿಶ್ವಾಸದಿಂದ ಕೊರೋನಾ ಪರೀಕ್ಷೆಯಲ್ಲಿ ಗೆದ್ದು ಬರುವಂತೆ ಮನವಿ ಮಾಡಿದರು.
ಮುಂಬೈನಿAದ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಮುಂಬೈ ಕನ್ನಡಿಗರು ಕೃಷ್ಣರಾಜಪೇಟೆ ತಾಲ್ಲೂಕಿಗೆ ಆಗಮಿಸುತ್ತಿದ್ದಾರೆ. ಆದ್ದರಿಂದ ಸಧ್ಯ ಇರುವ ವ್ಯವಸ್ಥೆಯಲ್ಲಿಯೇ ನೂರಕ್ಕೂ ಹೆಚ್ಚು ಜನರ ಗಂಟಲು ದ್ರವದ ಸ್ವ್ಯಾಬ್ ಟೆಸ್ಟ್ ಗೆ ಸಿದ್ಧತೆ ಮಾಡಿಕೊಳ್ಳಬೇಕು. ವೈದ್ಯರು ಸಂದಿಗ್ಧದ ಸಮಯದಲ್ಲಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಶೈಲಜಾ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಪ್ಪ, ಗಂಟಲು ದ್ರವದ ಮಾದರಿಯ ಪರೀಕ್ಷಾ ತಜ್ಞವೈದ್ಯರಾದ ಡಾ.ಅನಿಲ್, ಡಾ.ಸುಮಾ, ತಹಶೀಲ್ದಾರ್ ಎಂ.ಶಿವಮೂರ್ತಿ, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ಹಿರಿಯ ಆರೋಗ್ಯಪರಿವೀಕ್ಷಕರಾದ ಶೀಳನೆರೆ ಸತೀಶ್, ಧರ್ಮೇಂದ್ರ, ತಾಲ್ಲೂಕು ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಡಾ.ಶಶಿಧರ್, ಡಾ.ರವಿ ಮತ್ತಿತರರು ಉಪಸ್ಥಿತರಿದ್ದರು.

error: