November 14, 2024

Bhavana Tv

Its Your Channel

ಪತ್ನಿಯ ಅಕ್ರಮ ಸಂಬOಧದಿOದ ಬೇಸತ್ತು ಶೀಲದ ಬಗ್ಗೆ ಶಂಕಿಸಿ ಕತ್ತು ಹಿಸುಕಿ ಪತ್ನಿಯನ್ನು ಬರ್ಭರವಾಗಿ ಕೊಲೆ ಮಾಡಿ ಪೋಲಿಸರಿಗೆ ಶರಣಾದ ಘಟನೆ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಕೃಷ್ಣರಾಜಪೇಟೆ ತಾಲ್ಲೂಕಿನ ಮೂಡನಹಳ್ಳಿ ಗ್ರಾಮದ ಬಳಿ ಶುಂಠಿ ಬೆಳೆ ಬೇಸಾಯ ಮಾಡಲು ಆಗಮಿಸಿದ್ದ ಮೇಸ್ತ್ರಿ ಸ್ವಾಮಿ ತನ್ನ ಪತ್ನಿಯ ಅಕ್ರಮ ಸಂಬAಧದಿAದ ಬೇಸತ್ತು ಶೀಲದ ಬಗ್ಗೆ ಶಂಕಿಸಿ ಕತ್ತು ಹಿಸುಕಿ ಪತ್ನಿಯನ್ನು ಬರ್ಭರವಾಗಿ ಕೊಲೆ ಮಾಡಿ..ಪೋಲಿಸರಿಗೆ ಶರಣಾಗಿದ್ದಾನೆ.
ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಶುಂಠಿ ಬೆಳೆಯ ಬೇಸಾಯ ಮಾಡಲು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಿಂದ ತನ್ನ ಪತ್ನಿ ಮುನಿಯಮ್ಮಳ ಜೊತೆ ಆಗಮಿಸಿದ್ದ ಮೇಸ್ತ್ರಿ ಸ್ವಾಮಿ ಹರಿಹರಪುರದಲ್ಲಿ ತನ್ನ ಪತ್ನಿ ಹಾಗೂ ಎರಡು ಮಕ್ಕಳೊಂದಿಗೆ ನೆಲೆಸಿದ್ದ.

ಶುಂಠಿ ಬೆಳೆ ಬೇಸಾಯದ ಗುತ್ತಿಗೆಯನ್ನು ಪಡೆದುಕೊಂಡಿದ್ದ ಸ್ವಾಮಿಯು ಇಂದು(ಮAಗಳವಾರ) ಮಧ್ಯಾಹ್ನ ಸುಮಾರು ೩.೩೦ರ ಸಮಯದಲ್ಲಿ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದ ಹೊರವಲಯದ ನಿರ್ಜನ ಪ್ರದೇಶವಾದ ಹೇಮಾವತಿ ಎಡದಂಡೆಯೊಳಗೆ ಕತ್ತು ಹಿಸುಕಿ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಬರ್ಭರವಾಗಿ ಹತ್ಯೆ ಮಾಡಿದ್ದಾನೆ.

ರಂಗಾಪುರ ಗ್ರಾಮದ ವೆಂಕಟೇಶ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬAಧ ಹೊಂದಿರುವ ಬಗ್ಗೆ ಅನುಮಾನಗೊಂಡು ತನ್ನ ಪತ್ನಿಯ ಮೇಲೆ ಆಗಾಗ್ಗೆ ಜಗಳ ಮಾಡುತ್ತಿದ್ದ ಸ್ವಾಮಿ ತನ್ನ ಪತ್ನಿ ಮುನಿಯಮ್ಮಳನ್ನು ಶಾಶ್ವತವಾಗಿ ಮುಗಿಸಲು ನಿರ್ಧರಿಸಿ ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮುನಿಯಮ್ಮಳ ಕೊಲೆಯಿಂದಾಗಿ ಚಂದು(೩) ಮತ್ತು ಸಿಂಚನ(೨) ಎಂಬ ಎರಡು ಮಕ್ಕಳು ಅನಾಥವಾಗಿವೆ.

ಕೃತ್ಯ ನಡೆದ ಸ್ಥಳಕ್ಕೆ ಮಂಡ್ಯ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಗ್ರಾಮಾಂತರ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಡಿ.ಲಕ್ಷ್ಮಣ್ ಭೇಟಿ ನೀಡಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ವರದಿ. ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ .

error: