ನಾಗಮಂಗಲ: ದೇಶದಾದ್ಯಂತ ಕೋವಿಡ್-೧೯ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಕಾರ್ಮಿಕರು ಮತ್ತು ಬಡವರಿಗೆ ಆಹಾರದ ಸಮಸ್ಯೆಯಾಗಬಾರದು ಎಂದು ನಾಗಮಂಗಲ ಪಟ್ಟಣದ
ನಿವಾಸಿಗಳಾದ ಎಂ.ವಿ.ವಿ ಹಾಗೂ ಎಂ.ಪಿ.ವೈ ಹುಳಿಯಾರ್ ಕುಟುಂಬದ ವತಿಯಿಂದ ನಾಗಮಂಗಲ ತಾಲೂಕಿನ ಕಡುಬಡವರಿಗೆ ಹಾಗೂ ನಿರಾಶ್ರಿತರಿಗೆ ಸುಮಾರು ೧೦ ಲಕ್ಷ ರೂಪಾಯಿ ಮೌಲ್ಯದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ದಾನಿಗಳಾದ ಪಣಿ ಕಿರಣ್ ಹಾಗೂ ಕುಟುಂಬ ವರ್ಗದವರು ತಿಳಿಸಿದರು. ಆಹಾರದ ಪದಾರ್ಥದ ಕಿಟ್‌ಗಳನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದಾನಿಗಳಾದ ಪ್ರಣಿ ಕಿರಣ್‌ರವರು
ಬಡವರು,ನಿರ್ಗತಿಕರು ಸೇರಿದಂತೆ ಮುಖ್ಯಾವಾಹಿನಿಯಿಂದ ದೂರವಿರುವ ವ್ಯಕ್ತಿಗಳನ್ನು ಗುರ್ತಿಸಿ ಪಟ್ಟಣದ ನಿವಾಸಿಗಳಾದ ಎಂ.ವಿ.ವಿ ಹಾಗೂ ಎಂ.ಪಿ.ವೈ ಹುಳಿಯಾರ್ ಕುಟುಂಬದ ವತಿಯಿಂದ ಸಹಾಯ ಮಾಡಿತ್ತಿದೆವೆ. ಲಾಕ್ ಡೌನ್ ಆಗಿರುವುದರಿಂದ ನಿಜವಾದ ಸಮಸ್ಯೆ ಎದುರಿಸುತ್ತಿರುವವರು ಅಂಗವಿಕಲರು, ಬಡವರು, ನಿರ್ಗತಿಕರು, ನಿರಾಸಿತರು, ವಲಸಿಗರು, ಮತ್ತು ಕಾರ್ಮಿಕರು. ಅಂತಹ ನಿಜವಾದ ಸಮಸ್ಯೆ ಇರುವವರನ್ನು ಗುರ್ತಿಸಿ ದಿನಸಿ ಕಿಟ್ ವಿತರಿಸುವ ಸಮಾಜಮುಖಿ ಕೆಲಸವನ್ನು ಕುಟುಂಬದವರ ಸಹಾಯದಿಂದ ಮಾಡುತ್ತಿದ್ದೇನೆ ಎಂದು ತಿಳಿಸಿದರು.ಪಟ್ಟಣದ ನಿವಾಸಿಗಳಾದ ಎಂ.ವಿ.ವಿ ಶೆಟ್ಟಿ ಮಾಕಮ್ ಮೆಡಿಕಲ್ ಹಾಗೂ ಎಂ.ಪಿ.ವೈ ಶೆಟ್ಟಿ ಹುಳಿಯಾರ್ ಕುಟುಂಬದ ವತಿಯಿಂದ ಅತಿ ಬಡವರ ಪಟ್ಟಿಯನ್ನು ತಯಾರಿಸಿ,ನಂತರ ಪರಿಶೀಲನೆ ನಡೆಸಿ ಅಗತ್ಯ ಇರುವವರಿಗೆ ವಿತರಣೆ ಮಾಡುವ ಕೆಲಸ ಮಾಡುತ್ತಿದೆ. ಸುಮಾರು ೧೫೦೦ ಬಡ ಕುಟುಂಬಗಳಿಗೆ ಲಾಕ್ ಡೌನ್ ಶುರುವಾದ ದಿನದಿಂದಲೂ ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಹಾಗೂ ನಾನು ಮಾಡುತ್ತಿರುವ ಸಮಾಜಮುಖಿ ಕೆಲಸಕ್ಕೆ ನನಗೆ ಬೆನ್ನೆಲುಬಾಗಿ ನಿಂತು ಹಣ ಸಹಾಯ ಮಾಡಿ ನನ್ನ ಜೊತೆ ಕೈಜೋಡಿಸಿದ ನನ್ನ ಬಂಧು ಮಿತ್ರರಿಗೂ ಹಾಗೂ ಸ್ನೇಹಿತರಿಗೂ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದರು.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ