November 15, 2024

Bhavana Tv

Its Your Channel

ಕೆ. ಆರ್.ಪೇಟೆಯಲ್ಲಿ ಕರೋನಾ ಪಾಸಿಟಿವ್ ಕೇಸ್ ಪತ್ತೆ ಹಿನ್ನಲೆ ಉಸ್ತುವಾರಿ ಸಚೀವರು ಭೇಟಿ.

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಸೀಲ್ ಡೌನ್ ಆಗಿರುವ ಜಾಗಿನಕೆರೆ ಮತ್ತು ಮರುವನಹಳ್ಳಿ ಗ್ರಾಮಗಳಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಭೇಟಿ. ನಂತರ ಶೆಟ್ಟನಾಯಕನಹಳ್ಳಿಯ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹೋಂಕ್ವಾರoಟೈನ್ ಆಗಿರುವ ಮುಂಬೈ ವಾಸಿಗಳ ಆರೋಗ್ಯ ಕುಶಲೋಪರಿ ಸಚೀವರು ವಿಚಾರಿಸಿದರು.
ಜಾಗಿನಕೆರೆ ಗ್ರಾಮಸ್ಥರಿಗೆ ಕೋರಮಂಡಲ್ ಸಕ್ಕರೆ ಕಾರ್ಖಾನೆ ವತಿಯಿಂದ ವಿತರಿಸಿದ ಫುಡ್ ಕಿಟ್ ವಿತರಸಿದರು. ಇದೇ ಸಂದರ್ಭದಲ್ಲಿ ಕಿತ್ತೂರರಾಣಿ ಚನ್ನಮ್ಮ ಕ್ವಾರಂಟೈನ್ ವ್ಯಕ್ತಿಗಳಿಗೆ ಆರೋಗ್ಯ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ನಮತರ ಮಾತನಾಡಿ
ಕೊರೋನಾ ಮಹಾಮಾರಿಯ ಬಗ್ಗೆ ಹೆದರಿಕೆ ಬೇಕಾಗಿಲ್ಲ. ಆತ್ಮವಿಶ್ವಾಸದಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಕೊರೋನಾ ಎದುರಿಸಿ ಗೆಲ್ಲಬೇಕು. ಹೋಂ ಕ್ವಾರಂಟೈನ್ ಆಗಿರುವ ಎಲ್ಲಾ ವ್ಯಕ್ತಿಗಳಿಗೆ, ಮಹಿಳೆಯರು ಮತ್ತು ಮಕ್ಕಳಿಗೆ ಬೇಕಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ಈ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದು ಭರವಸೆ ನೀಡಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ತಹಶೀಲ್ದಾರ್ ಎಂ.ಶಿವಮೂರ್ತಿ ಮತ್ತು ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯ ಪ್ರಾಂಶುಪಾಲೆ ಪವಿತ್ರ ಅವರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸಚೀವರ ಜೊತೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆoಕಟೇಶ್, ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ, ಡಿವೈಎಸ್ ಪಿ ವಿಶ್ವನಾಥ್, ಡಿಹೆಚ್ ಓ ಡಾ.ಮರೀಗೌಡ, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಸಚಿವರ ಆಪ್ತಸಹಾಯಕರಾದ ದಯಾನಂದ, ಕಿಕ್ಕೇರಿ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್, ಸರ್ಕಲ್ ಇನ್ಸ್ ಪೆಕ್ಟರ್ ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಮುಖಂಡರಾದ ಕೈಗೋನಹಳ್ಳಿ ಕುಮಾರ್, ಮರುವನಹಳ್ಳಿ ಸತೀಶ್, ಭಾರತಿಪುರ ಪುಟ್ಟಣ್ಣ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಚಿವರೊಂದಿಗೆ ಉಪಸ್ಥಿತರಿದ್ದರು.

error: