March 28, 2024

Bhavana Tv

Its Your Channel

ಆಟೋ ಚಾಲಕರು, ಅರ್ಚಕರಿಗೆ ಆಹಾರ ಕಿಟ್ ವಿತರಣೆ…

೫೪೭ ಆಟೋ ಚಾಲಕರು, ೩೫೦ ಅರ್ಚಕರಿಗೆ ಆಹಾರ ಕಿಟ್ ವಿತರಿಸಿದ ಮಾಜಿ ಸಚಿವ ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು…

ಪಾಂಡವಪುರ: ತಾಲ್ಲೂಕಿನ ಸುಮಾರು ೫೪೭ ಆಟೋ ಚಾಲಕರು ಮತ್ತು ೩೫೦ ಅರ್ಚಕರಿಗೆ ಕಾರ್ಮಿಕ ಇಲಾಖೆ ಮತ್ತು ಜಿಪಂ ಸದಸ್ಯ ಸಿ.ಅಶೋಕ್ ಅವರ ನೆರವಿನೊಂದಿಗೆ ಆಹಾರ ಕಿಟ್ ಮತ್ತು ತರಕಾರಿಗಳನ್ನು ವಿತರಿಸಲಾಯಿತು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಕಳೆದ ೫೨ ದಿನಗಳಿಂದ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಲಾಕ್‌ಡೌನ್ ಘೋಷಿಸಿದ ಪರಿಣಾಮ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಜತೆಗೆ ದೇವಾಲಯ, ಮಸೀದಿ, ಚರ್ಚ್ಗಳಿಗೆ ಬೀಗ ಹಾಕಿರುವ ಕಾರಣ ಅಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸುವವರಿಗೂ ತೊಂದರೆಯಾಗಿದೆ. ಇದರಿಂದ ಅವರುಗಳಿಗೆ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದರು.

ಪಾoಡವಪುರ ಕೊರೊನಾ ಮುಕ್ತ ತಾಲ್ಲೂಕು ಆಗಿತ್ತು, ಇಲ್ಲಿನ ಜನ ನೆಮ್ಮದಿಯಿಂದ ಇದ್ದರು, ಆದರೆ, ಮುಂಬೈನಿoದ ಬಂದ ಇಲ್ಲಿಯ ಮೂಲ ನಿವಾಸಿಗಳಿಂದ ಸೋಂಕು ಹರಡಿದ ಕಾರಣ ಒಂದಷ್ಟು ಸಮಸ್ಯೆ ಉಂಟಾಯಿತು. ಆದರೆ, ಯಾರೂ ಹೆದರಬೇಕಿಲ್ಲ. ಮುಂಬೈನಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ಅಲ್ಲಿನ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕನ್ನಡಿಗರು ವಾಸಿಸುತ್ತಿರುವ ಬಡಾವಣೆಗಳನ್ನು ನೀರಿನ ಸಂಪರ್ಕ ಕಟ್ ಮಾಡಿದ್ದಾರೆ. ಈ ಬಗ್ಗೆ ಅಲ್ಲಿನ ಸರ್ಕಾರದ ಜತೆ ಮಾತನಾಡಿ ಕನ್ನಡಿಗರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು
ಬಳಿಕ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನೆರೆದಿದ್ದ ೫೪೭ ಆಟೋ ಚಾಲಕರಿಗೆ ಜಿ.ಪಂ. ಸದಸ್ಯ ಸಿ.ಅಶೋಕ್ ಉಸ್ತುವಾರಿಯಲ್ಲಿ ಆಹಾರ ಕಿಟ್ ವಿತರಿಸಲಾಯಿತು. ಹಿರಿಯ ಉಪ ವಿಭಾಗಾಧಿಕಾರಿ ವಿ.ಆರ್.ಶೈಲಜಾ, ತಹಸಿಲ್ದಾರ್ ಪ್ರಮೋದ್ ಎಲ್.ಪಾಟೀಲ್, ತಾಪಂ ಇಒ ಆರ್.ಪಿ.ಮಹೇಶ್, ಪಿಎಸ್‌ಐ ಸುಮಾರಾಣಿ ಮುಂತಾದವರು ಇದ್ದರು.

error: