July 11, 2024

Bhavana Tv

Its Your Channel

ಡಿ.ಕೆ.ಶಿವಕುಮಾರ ಹುಟ್ಟುಹಬ್ಬದ ಅಂಗವಾಗಿ ಪೌರಕಾರ್ಮಿಕರಿಗೆ ಮತ್ತು ಪತ್ರಕರ್ತರಿಗೆ ಕಿಟ್ ವಿತರಿಸಿದ ಬಿ.ರೇವಣ್ಣ.

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ೬೨ ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಮತ್ತು ೨೦ ಕ್ಕೂ ಹೆಚ್ಚು ಪತ್ರಕರ್ತರಿಗೆ ಕಿಟ್ ವಿತರಿಸುವ ಮೂಲಕ ಸಮಾಜ ಸೇವಕ ಬಿ.ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಮಾಜ ಸೇವಕ ಬಿ.ರೇವಣ್ಣ ಪೌರಕಾರ್ಮಿಕರಿಗೆ ದಿನಬಳಕೆ ವಸ್ತುಗಳ ಕಿಟ್ ವಿತರಿಸಿದರು…

ಸಮಾಜ ಸೇವಕ ಬಿ.ರೇವಣ್ಣ ಮಾತನಾಡಿ ಪೌರಕಾರ್ಮಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನಸೇವೆ ಮಾಡುತ್ತಿದ್ದಾರೆ. ಪೌರಕಾರ್ಮಿಕರಂತೂ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪಟ್ಟಣದ ಶುಚಿತ್ವ ಕಾಪಾಡುತ್ತಿದ್ದಾರೆ. ಇಂತಹವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದರು., ಲಾಕ್‌ಡೌನ್ ಬಳಿಕ ತಾಲ್ಲೂಕಿನಲ್ಲಿ ನೂರಾರು ಅಸಂಘಟಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ಸವಿತಾ ಸಮಾಜದವರು, ಆಟೋ ಚಾಲಕರು, ಛಾಯಾಗ್ರಾಹಕರು, ತೃತೀಯ ಲಿಂಗಿಗಳು ಕಷ್ಟದಲ್ಲಿರುವ ಬಗ್ಗೆ ನನಗೆ ಮನವರಿಕೆ ಆಗಿದೆ.ತಾಲ್ಲೂಕಿನ ೨ಸಾವಿರ ಆಟೋ ಚಾಲಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡುವ ಮೂಲಕ ನಮ್ಮ ನಾಯಕ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು…

ಮoಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಪಾಂಡವಪುರ ತಾಲ್ಲೂಕಿಗೆ ಬಿ. ರೇವಣ್ಣ ಅವರ ಸೇವೆ ಅಸಾಧಾರಣವಾದುದು. ಒಬ್ಬ ಜನಪ್ರತಿನಿಧಿ ಮಾಡಬೇಕಿದ್ದ ಕೆಲಸವನ್ನು ರೇವಣ್ಣ ಯಾವುದೇ ಅಧಿಕಾರವಿಲ್ಲದಿದ್ದರೂ ಮಾಡುತ್ತಿದ್ದಾರೆ. ಇವರನ್ನು ಎಲ್ಲ ರೀತಿಯಲ್ಲೂ ಕ್ಷೇತ್ರದ ಜನತೆ ಬೆಂಬಲಿಸಿ ಬೆಳೆಸಬೇಕು ಎಂದರು…

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ,ಮೈ ಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಬಿ.ರೇವಣ್ಣ ಅಭಿಮಾನಿ ಬಳಗದ ಬಿ.ಟಿ. ಮಂಜುನಾಥ್, ವಿಷಕಂಠ, ಕೊರೊನಾ ಕಾರ್ಯಪಡೆ ಅಧ್ಯಕ್ಷ ಸಿ.ಆರ್.ರಮೇಶ್ ಮುಂತಾದವರು ಇದ್ದರು…

error: