May 5, 2024

Bhavana Tv

Its Your Channel

ನೂತನವಾಗಿ ನಿರ್ಮಿಸಲಾಗುತ್ತಿರುವ ವಿವಿಧ ಗ್ರಾಮಗಳ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಮಾಜ ಸೇವಕ ಬೂಕನಕೆರೆ ವಿಜಯ್ ರಾಮೇಗೌಡ ಆರ್ಥಿಕ ನೆರವು

ಕಿಕ್ಕೇರಿ: ನೂತನವಾಗಿ ನಿರ್ಮಿಸಲಾಗುತ್ತಿರುವ ವಿವಿಧ ಗ್ರಾಮಗಳ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಮಾಜ ಸೇವಕ,ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ್ ರಾಮೇಗೌಡ ಅವರು ಆರ್ಥಿಕ ನೆರವು ನೀಡಿದರು

ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ಆನಗೊಳ ಗ್ರಾಮದಲ್ಲಿ ಲಕ್ಷ್ಮೀದೇವಿ (ಆನಗೊಳಮ್ಮ) ದೇವಾಲಯ ಹಾಗೂ ಕಡೆಹೆಮ್ಮಿಗೆ ಗ್ರಾಮದ ಬೀರೇಶ್ವರ,ಈಶ್ವರ ಸ್ವಾಮಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ತಲಾ 50,000ರೂಗಳನ್ನು ದೇಣಿಗೆಯಾಗಿ ನೀಡಿದರು.

ಮುಖಂಡ ಮಂಜುನಾಥ್ ಮಾತನಾಡಿ ನಮ್ಮ ಆನಗೊಳ ಗ್ರಾಮದಲ್ಲಿ ನೂತನವಾಗಿ ಲಕ್ಷ್ಮೀದೇವಿ ದೇವಾಲಯವನ್ನು ಗ್ರಾಮಸ್ಥರು ಸೇರಿ ನಿರ್ಮಿಸುತ್ತಿರುವ ಕಾರಣ ಆರ್ಥಿಕ ನೆರವು ನೀಡುವಂತೆ ಮನವಿಗೆ ಸ್ಪಂದಿಸಿದ ಸಮಾಜ ಸೇವಕ ವಿಜಯ್ ರಾಮೇಗೌಡ ಅವರು ನಮ್ಮ ಗ್ರಾಮಕ್ಕೆ ಆಗಮಿಸಿ ಅವರ ಕೈಲಾದ ಸಹಾಯವನ್ನು ಮಾಡಿದ್ದಾರೆ. ಅದ್ದರಿಂದ ಅವರಿಗೆ ಭಗವಂತ ನಮ್ಮ ತಾಲ್ಲೂಕಿಗೆ ಇನ್ನಷ್ಟು ಹೆಚ್ಚಿನ ಸಹಾಯ ಮಾಡಲು ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದರು.

ನಂತರ ಮಾತನಾಡಿದ ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ್ ರಾಮೇಗೌಡ ಮಾತನಾಡಿ ಸಮಾಜ ಸೇವೆ ಮಾಡುವ ಹಂಬಲ ಹಾಗೂ ಅವಕಾಶ ಎಲ್ಲರಿಗೂ ಇರುತ್ತದೆ. ನಮ್ಮೂರಿನ ದೇವಾಲಯಗಳ ಬಗ್ಗೆ ಅಪಾರವಾದ ಗೌರವ,ಭಕ್ತಿ ಇರಬೇಕು.ನಾವುಗಳು ಬೇರೆ ಎಲ್ಲೆ ನೆಲಸಿದ್ದರೂ ನಮ್ಮ ಹಳ್ಳಿಗಳಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಾಗೂ ಪುನರ್ ನಿರ್ಮಾಣಕ್ಕೆ ಪಕ್ಷಾತೀತವಾಗಿ ಪಾಲ್ಗೊಂಡು ನಮ್ಮ ಕೈಲಾದ ಸೇವೆ ಹಾಗೂ ಆರ್ಥಿಕ ನೆರವನ್ನು ನೀಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು. ಏಕೆಂದರೆ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ದೇವಾಲಯಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುವ ಕೇಂದ್ರಗಳಾಗಿವೆ.ನಮ್ಮೆಲ್ಲರ ಕಷ್ಟಗಳು ದೂರವಾಗಿ ಸಂತೋಷ ಕೊಡುತ್ತದೆ ಎಂಬ ಭಾವನೆಯಿಂದ ದೇವಾಲಯಗಳಿಗೆ ಭೇಟಿ ನೀಡುವ ಉದ್ದೇಶವಾಗಿದೆ. ಆದ್ದರಿಂದ ಉಳ್ಳವರು ಪಕ್ಷಾತೀತವಾಗಿ ಯಾವುದೇ ಸಮುದಾಯದ ದೇವಾಲಯಗಳ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಹಾಗೆಯೇ ಮುಂದಿನ ದಿನಗಳಲ್ಲಿ ನನಗೆ ರಾಜಕೀಯವಾಗಿ ಶಕ್ತಿ ನೀಡಿದರೆ ತಾಲ್ಲೂಕಿನ ಅಭಿವೃದ್ಧಿಗೆ ಹಾಗೂ ನಿಮ್ಮ ಗ್ರಾಮಗಳ ಸೇವೆಗೆ ಸದಾ ಸಿದ್ದನಿರುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾ.ಪಂ.ಮಾಜಿ ಸದಸ್ಯ ಮಾಧವಪ್ರಸಾದ್,ಹೆತ್ತಗೋನಹಳ್ಳಿ ನಾರಾಯಣಪ್ಪ, ಶ್ಯಾಮಣ್ಣ,ಗಣೇಶ್,ನಾಗೇಂದ್ರ ಕುಮಾರ್, ಎ.ಆರ್.ಮಂಜುನಾಥ್, ಶಂಭೇಗೌಡ,ಶ್ರೀನಿವಾಸ್ ನಾಗರಾಜು, ದೇವರಾಜು, ಪುನೀತ್, ಚಲುವೇಗೌಡ, ಸರ್ವೇ ಮಂಜುನಾಥ್ ಶಾಂತರಾಜು ನಂಜಪ್ಪ ಆನೆಗೋಳ ಮುಖಂಡರು ಸೇರಿದಂತೆ ಇತರರು ಹಾಜರಿದ್ದರು.

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: