May 4, 2024

Bhavana Tv

Its Your Channel

ಅರ್ಗೇನಿಕ್ ಬೇಸಾಯ ಪದ್ದತಿ ಅಳವಡಿಕೆ ಯಿಂದ ರೈತರಿಗೆ ಆಗುವ ಪ್ರಯೋಜನಗಳ ಕುರಿತು ಕಾರ್ಯಗಾರ

ಕಿಕ್ಕೇರಿ: ಶುದ್ಧ ಆಹಾರ.ಸುರಕ್ಷಿತ ಮತ್ತು ಸುಸ್ಥಿರ ಕೃಷಿ ಉಪಕ್ರಮ ಇನಾನಾ ತರ್ಕಬದ್ಧ ಕೃಷಿ (ಐ ಆರ್ ಎಫ್) ತಂತ್ರಜ್ಞಾನದ ಅಳವಡಿಕೆಯೊಂದಿಗೆ ರೈತರು ಅಭಿವೃದ್ಧಿ ಕಾಣಬಹುದು ಎಂದು ಐಬಿಎಮ್ ಕಂಪನಿಯ ಭಾರತ ಮತ್ತು ದಕ್ಷಿಣ ಏಷ್ಯಾದ ಮುಖ್ಯಸ್ಥ ಮನೋಜ್ ಬಾಲಚಂದ್ರನ್ ತಿಳಿಸಿದರು

ಕೃಷ್ಣರಾಜಪೇಟೆ ತಾಲೂಕಿನ ರಾಮನಹಳ್ಳಿ ಗ್ರಾಮದ ಬಳಿ ಆರ್ಗೇನಿಕ್ ವ್ಯವಸಾಯ ತಜ್ಞರಾದ ಮಲ್ಲೇಶ್ ರವರ ಜಮೀನಿನಲ್ಲಿ ಆಯೋಸಿದ್ದ ಅರ್ಗೇನಿಕ್ ಬೇಸಾಯ ಪದ್ದತಿ ಅಳವಡಿಕೆಯಿಂದ ರೈತರಿಗೆ ಆಗುವ ಪ್ರಯೋಜನಗಳ ಬಗ್ಗೆ ರೈತರಿಗೆ ತಿಳಿಸಲಾಯಿತು

ಕಾರ್ಯಕ್ರಮದಲ್ಲಿ ಐಬಿಎಂ ಸಂಶೋದನ ಕಂಪನಿಯ ಮುಖ್ಯಾಧಿಕಾರಿ ಮನೋಜ್ ಬಾಲಚಂದ್ರನ್ ರವರ ಮಾತನಾಡಿ ಮಣ್ಣಿನ ವ್ಯವಸ್ಥೆಯ ಶಕ್ತಿಯುತಗೊಳಿಸುವಿಕೆ ಗುರಿಯನ್ನು ಹೊಂದಿದೆ ಬೇಸಾಯ ಭೂಮಿಯ ಮಣ್ಣಿನ ಸಬರೀಕರಣಕ್ಕಾಗಿ ಮಣ್ಣಿನ ಆರೋಗ್ಯದ ಪುನಃಸ್ಥಾಪಕ ಸ್ವಾಗತ ಪರಿಣಾಮಕಾರಿ ಬೆಳವಣಿಗೆಯ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮಣ್ಣಿನಲ್ಲಿ ಸೂಕ್ತ ಜೈವಿಕ ತಡೆಗಳನ್ನು ನಿರ್ಮಿಸುತ್ತದೆ. ರೈತರು ರಾಸಾಯನಿಕ ಗೊಬ್ಬರವನ್ನು ಬಳಕೆ ಯಿಂದ ಕೃಷಿ ಭೂಮಿ ದಿನದಿಂದ ದಿನಕ್ಕೆ ಅದರಲ್ಲಿರುವ ಸೂಕ್ಷ್ಮಾಣು ಜೀವಿಗಳು ನಾಶ ವಾಗುತ್ತಿದ್ದು ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಬೆಳದ ಬೆಳೆಗಳನ್ನು ತಿನ್ನುವುದರಿಂದ ಮನುಷ್ಯನ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ.. ಅದೇ ಆರ್ಗೇನಿಕ್ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳು ಹೆಚ್ಚಿ ಈ ಮಣ್ಣು ಸಹ ಆರೋಗ್ಯಕರ ವಾಗುವುದು ಎಂದರು..

ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆ ಬೇಸಿಗೆ ಭತ್ತದ ಬಿತ್ತನೆ ಜೀಜಗಳನ್ನು ನೀಡಲಾಯಿತು ರಾಸಾಯನಿಕ ಗೊಬ್ವರ ಬಳಸದೆ ಆರ್ಗೇನಿಕ್ ಗೊಬ್ಬರ ಬಳಿಸಿ ವ್ಯವಸಾಯ ಮಡುವಂತೆ ಸಲಹೆ ನೀಡಲಾಯಿತು

ಕಾರ್ಯಕ್ರಮಲ್ಲಿ ಮನೋಜ್ ಬಾಲಚಂದ್ರನ್ ಮುಖ್ಯಸ್ಥ ಭಾರತ ಮತ್ತು ದಕ್ಷಿಣ ಏಷ್ಯಾ ಆದಿಕಾರಿ, ಶ್ರೀಮತಿ ಶೋಭಾ ವಿ. ಮಣಿ ಲೀಡ್, Iಃಒ ಸುಸ್ಥಿರತೆ ವೇಗವರ್ಧಕ, ಶ್ರೀಮತಿ ನಿಶಾ ಅನಿಲ್ Iಃಒ ಸುಸ್ಥಿರತೆ ತಂಡ,ಶ್ರೀ ಉಷಾ ಸುರೇಶ್ Iಃಒ ಸಸ್ಟೈನಬಿಲ್ಲಿ, ಡಾ. ಪಿ. ದಾಸ್ ಬಿಸ್ವಾಸ್ ಸಂಸ್ಥಾಪಕ ನಿರ್ದೇಶಕ, ಪ್ರಗತಿ ಪರ ವೈವಸಾಯ ತಜ್ಞರು ಆದ ಮಲ್ಲೇಶ್, ಲಕ್ಷ್ಮೀಪುರ ಚಂದ್ರು, ತಾರಾನಾಥ್, ದಬ್ಬೇಘಟ್ಟ ಸುರೇಶ್, ಪುಟ್ಟರಾಜು, ಅಣ್ಣಯ್ಯ ಸೇರಿದಂತೆ ನೂರಾರು ರೈತರುಗಳು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: