May 3, 2024

Bhavana Tv

Its Your Channel

ಪಂಚರತ್ನ ರಥಯಾತ್ರಾ ಕಾರ್ಯಕ್ರಮದ ಹಿನ್ನೆಲೆ ಜೆ.ಡಿ.ಎಸ್ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆ.

ಕೃಷ್ಣರಾಜಪೇಟೆಯಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರಾ ಕಾರ್ಯಕ್ರಮದ ಹಿನ್ನೆಲೆ ಜೆ.ಡಿ.ಎಸ್ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯು ತಾಲ್ಲೂಕು ಜೆ ಡಿ ಎಸ್ ಅಧ್ಯಕ್ಷರಾದ ಜಾನಕಿರಾಮು ರವರ ನೇತೃತ್ವದಲ್ಲಿ ನೆಡೆಯಿತು

ಕೃಷ್ಣರಾಜಪೇಟೆ ಪಟ್ಟಣದಲ್ಲಿ ಡಿಸೆಂಬರ್ 26 ರಂದು ನಡೆಯಲಿರುವ ಪಂಚರತ್ನ ರಥಯಾತ್ರಾ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ಜೆ.ಡಿ.ಎಸ್ ಪಕ್ಷದ ಮುಖಂಡರು ಕಾರ್ಯಕರ್ತರು, ಕುಮಾರಣ್ಣನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಾರ್ಯಕ್ರಮವನ್ನು ಯಶಸ್ವಿಮಾಡಿಕೊಟ್ಟು ಕುಮಾರಣ್ಣನವರಿಗೆ ಶಕ್ತಿ ತುಂಬಬೇಕು ಎಂದು ತಾಲ್ಲೂಕು ಅಧ್ಯಕ್ಷ ಜಾನಕಿರಾಮ ತಿಳಿಸಿದರು.

ನಂತರ ಮನ್ ಮುಲ್ ನಿರ್ದೇಶಕ ಹೆಚ್ ಟಿ ಮಂಜು ಮಾತನಾಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಹೊಂದಿರುವ ನಮ್ಮ ಪಕ್ಷವು, ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕೆಂಬ ಉದ್ದೇಶ ಹೊಂದಿದೆ.ಪAಚರತ್ನ ರಥಯಾತ್ರೆ ನವ ಕರ್ನಾಟಕ ನಿರ್ಮಾಣಕ್ಕಾಗಿ ಮಹಾಯಾತ್ರೆ ಹೆಸರಿನಲ್ಲಿ ಈ ರಥಯಾತ್ರೆ ಕೈಗೊಳ್ಳಲಾಗುತ್ತಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಪರಿಪೂರ್ಣ ಪರಿಹಾರ, ಶಿಕ್ಷಣವೆ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು. ಕೃಷಿ ಚೈತನ್ಯ, ಯುವ ನವಮಾರ್ಗ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಪಂಚರತ್ನ ಯೋಜನೆಗಳಾಗಿವೆ. ರಾಜ್ಯದಲ್ಲೆ ಇತಿಹಾಸದ ಯೋಜನೆಗಳಾದ ಪಂಚರತ್ನ ಕಾರ್ಯಕ್ರಮವನ್ನು ತಾಲೂಕಿನ ಜನತೆ ಯಶಸ್ವಿಗೊಳಿಸಬೇಕು ಎಂದು ಎಂದು ಮನವಿ ಮಾಡಿದರು.

ಬಳಿಕ ಜೆ ಡಿ ಎಸ್ ಪಕ್ಷದ ಯುವ ನಾಯಕ ಬಿ.ಎಂ ಕಿರಣ್ ಮಾತನಾಡಿ ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಗಳನ್ನು ಜನರು ಗಮನಿಸಿದ್ದಾರೆ. ಇತ್ತೀಚೆಗೆ ರಾಜ್ಯದ ಜನತೆ ಪ್ರಾದೇಶಿಕ ಪಕ್ಷದ ಕಡೆ ಒಲವು ತೋರಿದ್ದಾರೆ. ಮುಂದಿನ ದಿನಗಳಲ್ಲಿ ಆರೂವರೆ ಕೋಟಿ ಜನರ ಆಶಿರ್ವಾದ ಜೆಡಿಎಸ್ ಪಕ್ಷದ ಮೇಲಿರುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಬಹಳ ಸದೃಢವಾಗಿದ್ದು, ಜೆಡಿಎಸ್ ಪಕ್ಷ ಶಕ್ತಿಯುತವಾಗಿದೆ. ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಎರಡು ಮೂರು ಅಭ್ಯರ್ಥಿಗಳು ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಹಾಗಾಗಿ ಯಾರು ಸೂಕ್ತ ಅಭ್ಯರ್ಥಿ ಎಂದು ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತಾರೆ ಆದರೆ ಈ ನಮ್ಮ ಪಕ್ಷ ಪ್ರಮುಖ ಕಾರ್ಯಕ್ರಮವಾದ ಪಂಚರತ್ನ ಯಾತ್ರೆ ಮೂಲಕ ರಾಜ್ಯದ್ಯಂತ ಪಕ್ಷ ಸದೃಢವಾಗುತ್ತಿದೆ ಆ ನಿಟ್ಟಿನಲ್ಲಿ ತಾಲೂಕಿನಲ್ಲೂ ಜೆಡಿಎಸ್ ಒಗ್ಗಟ್ಟು ಪ್ರದರ್ಶಿಸಬೇಕು ಈ ಕಾರ್ಯಕ್ರಮದ ಮೂಲಕ ಕುಮಾರಣ್ಣನವರಿಗೆ ಶಕ್ತ ತುಂಬಲು ಎಲ್ಲಾರೂ ಕೈ ಜೋಡಿಸುವಂತೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆ.ಡಿ.ಎಸ್ ಪಕ್ಷದ ಜಿಲ್ಲಾದ್ಯಕ್ಷರಾದ ಡಿ ರಮೇಶ್, ಕರ್ನಾಟಕ ರಾಜ್ಯ ಸಹಕಾರ ಮಂಡಲಿಯ ನಿರ್ದೇಶಕ ಪುಟ್ಟಸ್ವಾಮಿಗೌಡ್ರು, ತಾಲ್ಲೂಕು ಅದ್ಯಕ್ಷ ಜಾನಕಿರಾಮು, ಎಂ.ಡಿ.ಸಿ ಬ್ಯಾಂಕ್ ಉಪಾದ್ಯಕ್ಷ ಆಶೋಕ್, ಮನ್ ಮುಲ್ ನಿರ್ದೇಶಕ ಹೆಚ್ ಟಿ ಮಂಜು, ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ ಬಿ. ಎಲ್ ದೇವರಾಜು, ತಾಲ್ಲೂಕು ಯೂಥ್ ಅದ್ಯಕ್ಷ ಅಶ್ವಿನ್ ಕುಮಾರ್, ಪುರಸಭೆ ಸದಸ್ಯ ಬಸ್ ಸಂತೋಷ್, ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ ಕಿರಣ್, ಮುಖಂಡರಾದ ಹಕ್ಕಿಹೆಬ್ಬಾಳು ರಘು, ಎಂ ಬಿ ಹರೀಶ್, ಐನೋರಹಳ್ಳಿ ಮಲ್ಲೇಶ್, ಬೋಜೇಗೌಡ್ರು, ಸೇರಿದಂತೆ ಮತ್ತಿತ್ತರು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: