May 7, 2024

Bhavana Tv

Its Your Channel

ಮಂಡ್ಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಆಗಿದ್ದ ೧೪೨ ಮುಂಬೈ ಕನ್ನಡಿಗರು ಹೋಮ್ ಕ್ವಾರಂಟೈನ್‌ಗೆ ಶಿಪ್ಟ.

ಮಂಡ್ಯ: ಕೃಷ್ಣರಾಜಪೇಟೆ ಪಟ್ಟಣದ ಗ್ರಾಮಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಆಗಿದ್ದ ೧೪೨ ಮುಂಬೈ ಕನ್ನಡಿಗರನ್ನು ಇಂದು ತಾಲ್ಲೂಕು ಆಡಳಿತದ ವತಿಯಿಂದ ಬಿಡುಗಡೆ ಆದೇಶ ಪತ್ರ ನೀಡಿ ಅವರವರ ಸ್ವಗ್ರಾಮಗಳಿಗೆ ಕಳಿಸಿಕೊಡಲಾಯಿತು.
ಕಳೆದ ೧೮ ದಿನಗಳಿಂದ ಗ್ರಾಮಭಾರತಿ ಶಾಲೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದ ಮುಂಬೈ ಕನ್ನಡಿಗರು ತಮ್ಮ ಆರೋಗ್ಯ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಂಡು ಕೊರೋನಾ ಯುದ್ಧದಲ್ಲಿ ಗೆಲುವು ಸಾಧಿಸಲು ಆಸರೆಯಾದ ತಾಲ್ಲೂಕು ಆಡಳಿತಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆoಕಟೇಶ್, ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಮತ್ತು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಚಪ್ಪಾಳೆಯ ಧನ್ಯವಾದಗಳನ್ನು ಸಮರ್ಪಿಸಿ ತಮ್ಮ ಮನೆಗಳಿಗೆ ತೆರಳಿದರು.

ಸಾಂಸ್ಥಿಕ ಹೋಂ ಕ್ವಾರಂಟೈನ್ ನಲ್ಲಿದ್ದ ಮುಂಬೈ ಕನ್ನಡಿಗರಿಗೆ ಬಿಡುಗಡೆ ಪತ್ರಗಳನ್ನು ವಿತರಿಸಿದ ಕೇಂದ್ರದ ನೋಡಲ್ ಅಧಿಕಾರಿಗಳಾದ ರಾಘವೇಂದ್ರ ಮತ್ತು ಶಿವಕುಮಾರ್ ಅಗತ್ಯ ಆರೋಗ್ಯ ಮುನ್ಸೂಚನೆಗಳನ್ನು ನೀಡಿ ತಮ್ಮ ಮನೆಗಳಿಗೆ ತೆರಳಿದ ನಂತರ ಹೊರಗಡೆ ಓಡಾಡದೇ ಮನೆಯಲ್ಲಿಯೇ ಮತ್ತೆ ೧೪ ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರಬೇಕು. ಪೌಷ್ಟಿಕಾಂಶಗಳಿoದ ಕೂಡಿರುವ ಆಹಾರ ಪದಾರ್ಥಗಳು, ಸೊಪ್ಪು ತರಕಾರಿಗಳು, ಹಾಲು ಮೊಟ್ಟೆ, ಹಣ್ಣು-ಹಂಪಲುಗಳನ್ನು ಚೆನ್ನಾಗಿ ಸೇವಿಸಿ ಯೋಗಧ್ಯಾನವನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ವರದಿ:- ಕೆ.ಆರ್.ನೀಲಕಂಠ ,
ಕೃಷ್ಣರಾಜಪೇಟೆ …

error: