April 17, 2025

Bhavana Tv

Its Your Channel

ಕೆ.ಆರ್.ಪೇಟೆಯ ಮೊಬೈಲ್ ಅಂಗಡಿಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಬೆಲೆಬಾಳುವ ಮೊಬೈಲ್ ಹ್ಯಾಂಡ್ ಸೆಟ್ ಗಳ ಕಳವು..ಪಟ್ಟಣ ಪೋಲಿಸರಿಂದ ಪ್ರಕರಣ ದಾಖಲು ….

ಕೃಷ್ಣರಾಜಪೇಟೆ ಪಟ್ಟಣದ ಮುಖ್ಯ ರಸ್ತೆಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸಂಗೀತಾ ಮೊಬೈಲ್ ಜೋನ್ ಅಂಗಡಿಯ ಬಾಗಿಲು ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಮೊಬೈಲ್ ಹ್ಯಾಂಡ್ ಸೆಟ್ಟುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಸಂಗೀತಾ ಮೊಬೈಲ್ ಶಾಪ್ ವ್ಯವಸ್ಥಾಪಕರು ಪಟ್ಟಣ ಪೋಲಿಸ್ ಠಾಣೆಗೆ ಅಂಗಡಿಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮೊಬೈಲ್ ಅಂಗಡಿಗೆ ಸಿಬ್ಬಂಧಿಗಳೊoದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎರಡು ಲಕ್ಷ ರೂಪಾಯಿ ಬೆಲೆಬಾಳುವ ೧೦ಕ್ಕೂ ಹೆಚ್ಚು ವಿವೋ, ಸ್ಯಾಮ್‌ಸಂಗ್ ಮತ್ತು ವೋಪೊ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚುವುದಾಗಿ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ತಿಳಿಸಿದರು.
ಪಿ.ಎಸ್.ಐ ತೊಳಜ ನಾಯಕ್, ಕ್ರೈವಿಭಾಗದ ಪೋಲಿಸರು ಸ್ಥಳ ಪರಿಶೀಲನೆ ನಡೆಸಿದರು..

ವರದಿ.ಸೈಯ್ಯದ್ ಖಲೀಲ್. ಕೃಷ್ಣರಾಜಪೇಟೆ . ಮಂಡ್ಯ.

error: