May 18, 2024

Bhavana Tv

Its Your Channel

ಭಾರೀ ಯಂತ್ರೋಪಕರಣಗಳನ್ನು ಬಳಸಿ ಗಣಿಗಾರಿಕೆ ನಡೆಸಲು ಬೇಬಿಬೆಟ್ಟದ ಶ್ರೀ ಗುರುಸಿದ್ಧೇಶ್ವರ ಶ್ರೀಗಳ ವಿರೋಧ .

ಮಂಡ್ಯ: ಪಾಂಡವಪುರ ತಾಲ್ಲೂಕಿನ ಪುರಾಣ ಪ್ರಸಿದ್ಧ ಬೇಬಿಬೆಟ್ಟದಲ್ಲಿ ಭಾರೀ ಯಂತ್ರಗಳನ್ನು ಬಳಸಿ ಗಣಿಗಾರಿಕೆ ನಡೆಸುವುದನ್ನು ವಿರೋಧಿಸಿರುವ ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಗುರುಸಿದ್ದೇಶ್ವರ ಶ್ರೀಗಳು ಕಾರ್ಮಿಕರ ಹಿತದೃಷ್ಟಿಯಿಂದ ಕೈಯಲ್ಲಿ ಸೈಜು ಹಾಗೂ ಚಪ್ಪಡಿಗಳನ್ನು ತೆಗೆಯಲು ತಮ್ಮ ಸಹಮತವಿದೆ, ಸರ್ಕಾರವು ಕೈಗೊಳ್ಳುವ ಕಾರ್ಮಿಕರ ಪರವಾದ ನಿರ್ಧಾರವನ್ನು ತಾವು ಸ್ವಾಗತಿಸುವುದಾಗಿ ತಿಳಿಸಿದರು.

ರಿಗ್ಗಿಂಗ್, ಬೋರ್ ಬ್ಲಾಸ್ಟ್ ಬಳಸಿಕೊಂಡು ಭಾರೀ ಪ್ರಮಾಣದ ಯಂತ್ರೋಪಕರಣಗಳಿAದ ಗಣಿಗಾರಿಕೆ ನಡೆಸುವುದರಿಂದ ಪ್ರಕೃತಿ ಹಾಗೂ ಪರಿಸರದ ಮೇಲೆ ದೌರ್ಜನ್ಯ ನಡೆಸಿದಂತಾಗುತ್ತದೆ. ಭಾರೀ ಪ್ರಮಾಣದ ಸ್ಫೋಟದಿಂದ ರೈತರ ಜೀವನಾಡಿಯಾದ ಕನ್ನಂಬಾಡಿ ಕಟ್ಟೆಗೆ ಅಪಾಯವಿದೆಯಲ್ಲದೇ ಈ ಭಾಗದ ಭೂಮಿಯೇ ಕಂಪಿಸಿದAತಾಗುತ್ತದೆ. ಆದ್ದರಿಂದ ಕಾರ್ಮಿಕರ ಹಿತದೃಷ್ಟಿಯಿಂದ ಸೈಜುಗಳು ಮತ್ತು ಚಪ್ಪಡಿಗಳನ್ನು ತೆಗೆಯಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಗುರುಸಿದ್ಧೇಶ್ವರ ಶ್ರೀಗಳು ಸ್ಪಷ್ಠಪಡಿಸಿದರು.
ಗಣಿಗಾರಿಕೆಯಿಂದ ಜೀವಸಂಕುಲ ಹಾಗೂ ಪ್ರಕೃತಿಗೆ ಧಕ್ಕೆ :-
ಬೇಬಿಬೆಟ್ಟವು ಹಚ್ಚ ಹಸಿರಿನ ತಾಣವಾಗಿದ್ದು, ವಿವಿಧ ಬಗೆಯ ಅಪರೂಪದ ಅರಳಿ, ಬಸರಿ, ಬೇವು, ಹಿಪ್ಪೆ, ನೇರಳೆ ಸೇರಿದಂತೆ ೪೦ಕ್ಕೂ ಹೆಚ್ಚಿನ ಪ್ರಬೇಧಗಳನ್ನು ಹೊಂದಿರುವ ಜೀವವೈವಿಧ್ಯತೆಯ ತಾಣವಾಗಿದೆ. ಭಾರೀ ಪ್ರಮಾಣದಲ್ಲಿ ಸ್ಫೋಟಕಗಳನ್ನು ಬಳಸಿ ಗಣಿಗಾರಿಕೆ ನಡೆಸುವುದರಿಂದ ಪರಿಸರ ಮಾಲಿನ್ಯವಾಗುವ ಜೊತೆಗೆ ಅಪರೂಪದ ವೃಕ್ಷಗಳು ಹಾಗೂ ಜೀವಸಂಕುಲದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸುವ ಕೆಲಸಕ್ಕೆ ಶ್ರೀಮಠಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು..ಈ ಸಂದರ್ಭದಲ್ಲಿ ವಕೀಲರಾದ ನಾಗೇಶ್, ಸಾಮಾಜಿಕ ಕಾರ್ಯಕರ್ತ ಹೆಚ್.ಬಿ.ಮಂಜುನಾಥ, ಉಧ್ಯಮಿ ಕೆ.ಶ್ರೀನಿವಾಸ್, ಕಸಾಪ ಮಾಜಿಅಧ್ಯಕ್ಷ ಡಾ.ಕೆ.ಆರ್.ನೀಲಕಂಠ ಮತ್ತು ಈ ಭಾಗದ ಭಕ್ತರು ಉಪಸ್ಥಿತರಿದ್ದರು.

ವರದಿ. ಕೆ.ಶ್ರೀನಿವಾಸ್ , ಕೃಷ್ಣರಾಜಪೇಟೆ . ಮಂಡ್ಯ.

error: