December 22, 2024

Bhavana Tv

Its Your Channel

೨೦೧೯-೨೦ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ

ಕೆ.ಆರ್.ಪೇಟೆ: ತಾಲ್ಲೂಕಿನ ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಚಾರಿಟಬಲ್ ಸೇವಾ ಟ್ರಸ್ಟ್ ವತಿಯಿಂದ ೨೦೧೯-೨೦ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡು ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕಿಗೆ 619ಅಂಕಗಳನ್ನು ಪಡೆದು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಆದಿಚುಂಚನಗಿರಿ ಬಿಜಿಎಸ್ ಪ್ರೌಢಶಾಲೆಯ ಎಸ್.ಆರ್.ಪೂರ್ವಿಕ, ಆರ್.ಸುಮಂತ್, ಎಸ್.ಎಸ್.ಕೆ.ಸಿ ಶಾಲೆಯ ಬಿ.ಕುಮುದ, ಆಶೀರ್ವಾದ ಶಾಲೆಯ ಎಚ್.ಡಿ.ಅಮೂಲ್ಯ, ಎಚ್.ಎನ್.ಮಾನಸ, ಶಿವಾನಿಗಿರೀಶ್, ಸದ್ವಿದ್ಯಾ ಶಾಲೆಯ ಎಂ.ಸೋನುಶ್ರೀ, ಅಗ್ರಹಾರಬಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎ. ಗಿರೀಶ್, ಮಾರ್ಗೋನಹಳ್ಳಿಯ ಮೊರಾರ್ಜಿ ಶಾಲೆಯ ಬಿ.ಎಲ್. ಪೂಜಾ, ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಎಚ್.ವೈ.ಸುಶ್ಮಿತ, ಗವೀಮಠ ಶಾಲೆಯ ಹೆಚ್. ಎಂ.ಹರ್ಷ* ಅವರುಗಳನ್ನು ಶ್ರೀಮಠದ ಅಧ್ಯಕ್ಷರಾದ ಶ್ರೀ ರುದ್ರಮುನಿ ಗುರೂಜಿ ಅವರು ಕನ್ನಡ- ಇಂಗ್ಲೀಷ್ ಶಬ್ದಕೋಶ ನೀಡಿ, ಫಲ ತಾಂಬೂಲ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಪಂಚಭೂತೇಶ್ವರ ಚಾರಿಟಬಲ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ರುದ್ರಮುನಿ ಗುರೂಜಿ ವಹಿಸಿದ್ದರು. ಈ ವೇಳೆ ಮಾತನಾಡಿದ ಶ್ರೀ ರುದ್ರಮುನಿ ಗುರೂಜಿ ಅವರು ಪ್ರತಿಭೆ ಸಾಧಕನ ಸೊತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಇಲ್ಲಿ ಸನ್ಮಾನಿತರಾಗಿರುವ ವಿದ್ಯಾರ್ಥಿಗಳೆಲ್ಲರೂ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಎಲ್ಲಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎಂಬುದು ಗಮನಾರ್ಹ ವಿಚಾರವಾಗಿದೆ. ಬಿ.ಕುಮುದಾ ಎಂಬ ವಿದ್ಯಾರ್ಥಿಯು ವಿಕಲಚೇತನೆಯಾಗಿದ್ದ ತಮ್ಮ ಅಂಗವಿಕಲತೆಯನ್ನು ಮೀರಿ ಉತ್ತಮ ಸಾಧನೆ ಮಾಡಿದ್ದಾಳೆ. ಅಗ್ರಹಾರಬಾಚಹಳ್ಳಿ ಎ.ಗಿರೀಶ್ ಅವರು ನಿತ್ಯ ಪತ್ರಿಕೆಯ ಹಂಚುವ ಕೆಲಸ ಮಾಡಿ ವಿದ್ಯಾಭ್ಯಾಸ ಮಾಡಿ ಶೇ.80ರಷ್ಟು ಫಲಿತಾಂಶ ಪಡೆದು ನೆಮ್ಮೆಲ್ಲರ ಮನ ಗೆದ್ದಿದ್ದಾನೆ. ಹೊಸಹೊಳಲು ದಲಿತ ಕುಟುಂಬದ ಹೆಚ್.ಡಿ.ಅಮೂಲ್ಯ 612ಅಂಕಗಳನ್ನು ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿರುವುದು ಹೆಮ್ಮಯ ವಿಚಾರವಾಗಿದೆ. ಶೀಳನೆರೆ ಗ್ರಾಮದ ಎಸ್.ಆರ್.ಪೂರ್ವಿಕ ಎಂಬ ವಿದ್ಯಾರ್ಥಿಯು ಬರೋಬ್ಬರಿ 619ಅಂಕಗಳನ್ನು ಪಡೆದು ರಾಜ್ಯಕ್ಕೆ 7ನೇ ಸ್ಥಾನ ಪಡೆದಿರುವುದು ತಾಲೂಕಿಗೆ ಕೀರ್ತಿ ತರುವ ವಿಚಾರವಾಗಿದೆೆ ಹೀಗೆ ವಿವಿಧ ರೀತಿಯಲ್ಲಿ ಸಾಧನೆ ಮಾಡಿರುವ ನಮ್ಮ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದು ರುದ್ರಮುನಿ ಗುರೂಜಿ ಅವರು ಹೇಳಿದರು.
ಕಾರ್ಯಕ್ರಮದಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಕೆ.ಪಿ.ಬೋರೇಗೌಡ, ಗಿರೀಶ್, ಎಸ್.ಕೆ.ರವಿಕುಮಾರ್, ಮೈಸೂರು ಕಲಾನಿಕೇತನ ಚಿತ್ರಕಲಾ ಕಾಲೇಜಿನ ಪ್ರಾಂಶುಪಾಲ ಮಹದೇಶ್‌ಶೆಟ್ಟಿ, ಪಾಂಡವಪುರ ಪುರಸಭೆಯ ಸದಸ್ಯ ಅಶೋಕ್, ಶ್ರೀ ಪಂಚಭೂತೇಶ್ವರ ಆಶ್ರಮ ಸೇವಾ ಟ್ರಸ್ಟ್ ಕಾರ್ಯದರ್ಶಿ ಕಾಂತರಾಜು, ಶಿಕ್ಷಕರಾದ ಕೆ.ಎಸ್.ಚಂದ್ರು, ನೇತ್ರಾವತಿ, ಕೆ.ಪಿ.ಮಂಜುನಾಥ್, ಮುಖಂಡರಾದ ಆಲಂಬಾಡಿಕಾವಲು ದಿವಾಕರ್, ಹೊಸಹೊಳಲು ದೇವರಾಜು, ಸಿಂಕಾ.ಸುರೇಶ್, ಎಚ್.ಎಸ್. ರಘು, ಕಾಮನಹಳ್ಳಿ ಮಂಜು, ಮಲ್ಲೇಶ್, ತಾಲ್ಲೂಕು ಪತ್ರಿಕಾ ವರದಿಗಾರರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಕೆ.ಆರ್.ಪೇಟೆ.

error: