May 18, 2024

Bhavana Tv

Its Your Channel

ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ೭೪ನೇ ಸ್ವಾತಂತ್ರ‍್ಯ ದಿನಚಾರಣೆ.

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಆಡಳಿತದ ವತಿಯಿಂದ 74ನೇ ಸ್ವಾತಂತ್ರ್ಯ ದಿನಚಾರಣೆಯಲ್ಲಿ ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವ ಸಂದೇಶ ನೀಡಿದರು.
ನಮ್ಮ ಸ್ವತಂತ್ರ ಭಾರತದ ಅಭಿವೃದ್ದಿಗೆ ಎಲ್ಲರೂ ತಮ್ಮ ಕೈಲಾದ ಕಾಣಿಕೆ ನೀಡಬೇಕು. ದೇಶದಲ್ಲಿ ಕೋರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ನಲ್ಲಿ ಜನ ಬಂಧಿಯಾಗಿದ್ದ ರೀತಿಯಲ್ಲಿ ನಮ್ಮ ಹಿರಿಯರು ಸ್ವಾತಂತ್ರ‍್ಯ ಪೂರ್ವದಲ್ಲಿ ಬಂಧಿಯಾಗಿದ್ದರು. ಇಂತಹ ಕಷ್ಟವನ್ನು ಎದುರಿಸಿದ್ದಾರೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಅಹಿಂಸಾ ತತ್ವದಿಂದ ೧೯೪೭ರಲ್ಲಿ ಬಂದ ಸ್ವಾತಂತ್ರ‍್ಯ ವನ್ನು ನಾವು ಸದ್ವಳಕೆ ಮಾಡಿಕೊಳ್ಳಬೇಕು. ದೇಶಕ್ಕಾಗಿ ಏನಾದರೊಂದು ಸೇವೆ ಸಲ್ಲಿಸುವ ಗುಣ ಬೆಳೆಸಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿ ಗಳನ್ನು, ಪತ್ರಕರ್ತರನ್ನು, ಆರೋಗ್ಯ ಕಾರ್ಯಕರ್ತರನ್ನು, ಪೌರಕಾರ್ಮಿಕರನ್ನು, ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಚಿಕ್ಕೋನಹಳ್ಳಿ ಶಿವರಾಮೇಗೌಡ ಅವರು ಸ್ವಾತಂತ್ರ‍್ಯ ದಿನಾಚರಣೆಗೆ ಬಂದ ಅತಿಥಿಗಳಿಗೆ ಉಚಿತವಾಗಿ ಸಸಿಗಳನ್ನು ವಿತರಣೆ ಮಾಡಿದರು. ಕೋರೋನಾ ಸಂಕಷ್ಟದಲ್ಲಿ ಕೋರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಸುಮಾರು ೧೫೦ಮಂದಿಯನ್ನು ಸನ್ಮಾನಿಸಿ ಗೌರವಿಸುವ ಮೂಲಕ ತಾಲ್ಲೂಕು ಆಡಳಿತವು ಕೃತಜ್ಞತೆ ಯನ್ನು ಸಲ್ಲಿಸಿದೆ ಮುಂದೆಯೂ ಕೊರೋನಾ ತಡೆಗೆ ಎಲ್ಲರೂ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಸ್ವಾಮಿನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎಲ್.ದೇವರಾಜು, ರಾಮದಾಸ್, ತಾಲ್ಲೂಕು ಪಂಚಾಯಿತಿ ಉಪಾದ್ಯಕ್ಷ ರವಿ, ಸದಸ್ಯರಾದ ವಿಜಯಲಕ್ಷ್ಮಿಮಂಜೇಗೌಡ, ಜಾನಕೀರಾಂ, ಮೋಹನ್, ಮೀನಾಕ್ಷಿಪುಟ್ಟರಾಜು, ವಿನೂತಸುರೇಶ್, ಶ್ರೀ ಪಂಚಭೂತೇಶ್ವರ ಶ್ರೀ ಕ್ಷೇತ್ರದ ಪೀಠಾಧ್ಯಕ್ಷ ರುದ್ರಮುನಿಸ್ವಾಮೀಜಿ, ಮೈಸೂರು ನಿವಾಸಿಗಳ ಸಂಘದ ಅಧ್ಯಕ್ಷ ಡಿ.ಆರ್.ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಪಿ.ಲೋಕೇಶ್, ದಾನಿಗಳಾದ ಯಶಸ್ವಿನಿ ಕಲ್ಯಾಣಮಂಟಪ ಮಾಲೀಕ ಸಿ.ಜೆ.ಶಿವರಾಮೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅರವಿಂದ್ ಕಾರಂತ್, ಸಮಾಜ ಸೇವಕ ಹಾಗೂ ಸವಿತಾ ಸಮಾಜದ ಅಧ್ಯಕ್ಷ ಡಾ.ಕೆ.ಎಂ.ಶಿವಪ್ಪ, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯ, ತಾಲ್ಲೂಕು ಶಿವಜ್ಯೋತಿ ಗಾಣಿಗರ ಸಂಘದ ಅಧ್ಯಕ್ಷ ಸಾರಂಗಿ ನಾಗರಾಜು, ಮಾನವ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕರ್ತೇನಹಳ್ಳಿ ಸುರೇಶ್, ತಾಲ್ಲೂಕು ವಿತರಕರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಆನೆಗೊಳ ಕಿರಣ್, ವೃತ್ತ ನಿರೀಕ್ಷಕ ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ತುಳಸಿನಾಯಕ್, ಸಮಾಜ ಕಲ್ಯಾಣಾಧಿಕಾರಿ ಡಾ.ಮನು, ಬಿಇಓ ಬಸವರಾಜು, ಬಿಸಿಎಂ ಅಧಿಕಾರಿ ವೆಂಕಟೇಶ್, ಚಂದ್ರಕಲಾ ಪ್ರಕಾಶ್, ತಾಲ್ಲೂಕು ಪತ್ರಿಕಾ ವರದಿಗಾರರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಕೆ.ಆರ್.ಪೇಟೆ.

error: