May 4, 2024

Bhavana Tv

Its Your Channel

ಭತ್ತ ನಾಟಿ ಮಾಡುವ ವಾಹನವನ್ನು ಚಾಲನೆ ಮಾಡಿ, ಯಂತ್ರದಲ್ಲಿ ಭತ್ತ ನಾಟಿ ಮಾಡಿ ಚಾಲನೆ ನೀಡಿದ ರಾಜ್ಯದ ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ …

ಕೃಷ್ಣರಾಜಪೇಟೆ ; ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಹೊರವಲಯದಲ್ಲಿ ಪ್ರಗತಿಪರ ರೈತರಾದ ಹೆಚ್.ಟಿ.ರಾಜು ಅವರ ಜಮೀನಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಯಂತ್ರಶ್ರೀ ಯೋಜನೆಯ ಅಡಿಯಲ್ಲಿ ಯಾಂತ್ರೀಕೃತ ಭತ್ತ ನಾಟಿ ಕಾರ್ಯಕ್ರಮವನ್ನು ಭತ್ತ ನಾಟಿ ಮಾಡುವ ವಾಹನವನ್ನು ಚಾಲನೆ ಮಾಡಿ, ಯಂತ್ರದಲ್ಲಿ ಭತ್ತ ನಾಟಿ ಮಾಡಿ ಚಾಲನೆ ನೀಡಿದ ರಾಜ್ಯದ ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ …

ರೈತರ ನೆಮ್ಮದಿಯ ಜೀವನ ಹಾಗೂ ಸ್ವಾವಲಂಬನೆಯ ಬದುಕಿಗಾಗಿ ಪೂಜ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿಗೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ… ರೈತರು ಕೃಷಿಕೂಲಿ ಕಾರ್ಮಿಕರು ಸಮಸ್ಯೆಯಿಂದ ಮುಕ್ತರಾಗಿ ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಯಂತ್ರಶ್ರೀ ಯೋಜನೆಯನ್ನು ಜಾರಿಗೆ ತಂದು ರೈತರು ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳ ಮೂಲಕ ಹೆಚ್ಚಿನ ಇಳುವರಿ ಪಡೆಯಲು, ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ಯಂತ್ರಶ್ರೀ ಯೋಜನೆಯ ಬಡರೈತರ ಆರ್ಥಿಕ ಸ್ವಾವಲಂಬನೆಗೆ ನೆರವಾಗಲಿದೆ. ಆದ್ದರಿಂದ ರೈತರು ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ವೈಜ್ಞಾನಿಕವಾಗಿ ಬೇಸಾಯ ಮಾಡಿ ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಸಚಿವ ನಾರಾಯಣಗೌಡ ಕರೆ ನೀಡಿದರು…

ಅಕ್ಕಿಹೆಬ್ಬಾಳು ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯ ಬಿ.ಎಲ್.ದೇವರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು…

ಕಸಬಾ ಕ್ಷೇತ್ರದ ಜಿಲ್ಲಾ ಪಂಚಾಯತ ಸದಸ್ಯ ರಾಮದಾಸ್, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಚಂದ್ರಶೇಖರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ರಾದ ಪಿ.ಗಂಗಾಧರರೈ, ಜಿಲ್ಲಾ ನಿರ್ದೇಶಕ ವಿನಯಕುಮಾರ್ ಸುವರ್ಣ, ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಎಸ್. ಮಂಜುನಾಥ್, ಕೃಷಿ ಅಧಿಕಾರಿ ಶ್ರೀಧರ್, ತಾಲ್ಲೂಕು ವಿತರಕರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಪುರಸಭೆಯ ಮಾಜಿಉಪಾಧ್ಯಕ್ಷ ಹೆಚ್.ಟಿ.ರಾಜು, ಧರ್ಮಸ್ಥಳ ಸಂಸ್ಥೆಯ ಕೃಷಿಅಧಿಕಾರಿ ನಿಂಗಪ್ಪ ಅಗಸರ್, ಸಚಿವರ ಆಪ್ತಸಹಾಯಕರಾದ ದಯಾನಂದ, ಪ್ರಭು, ಕಿಕ್ಕೇರಿಕುಮಾರ್ ಸೇರಿದಂತೆ ನೂರಾರು ರೈತರು ಯಾಂತ್ರಿಕೃತ ಭತ್ತದ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: