May 5, 2024

Bhavana Tv

Its Your Channel

500ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು

ಕೆ.ಆರ್.ಪೇಟೆ: ಪಟ್ಟಣದ ಪ್ರತಿಷ್ಠಿತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 23ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 39ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎಂಬ ಕೀರ್ತಿಗೆ ಭಾಜನವಾಗಿದ್ದಾರೆ.

ಗ್ರಾಮೀಣ ಪ್ರದೇಶ ಮರಡಹಳ್ಳಿ ಗ್ರಾಮದಿಂದ ಬಸ್ಸಿನಲ್ಲಿ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದ ಅಪ್ಪಟ ಗ್ರಾಮೀಣ ಪ್ರತಿಭೆ ಎಂ.ಸಿ.ಸುಪ್ರಿಯ ಎಂಬ ವಿದ್ಯಾರ್ಥಿನಿ 605 ಅಂಕಗಳನ್ನು ಪಡೆದು ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಭಾಜನವಾಗಿದ್ದಾಳೆ. ಈಕೆಯನ್ನು ಶಾಲಾ ಶಿಕ್ಷಕ ವೃಂದ ಹಾಗೂ ಎಸ್.ಡಿ.ಎಂ.ಸಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಉಳಿದಂತೆ ನಿದರ್ಶನ್, ವಿಶ್ವಾಸ್.ಎನ್.ಗೌಡ, ಎನ್.ದೀಪ್ತಿ, ಸುಪ್ರಿಯಾ, ಅದ್ವೈತ್, ಇಮ್ರಾನ್ ಷರೀಫ್, ಪ್ರಕೃತಿ.ಕೆ.ಆರ್, ಹೇಮಂತಕುಮಾರ್,ಮೊಹಮದ್ ಮುಜಾರತ್, ಡಿ.ಆರ್.ಪ್ರಜ್ವಲ್, ಸ್ಪಂಧನಾ, ಎಸ್.ಬಿ.ಯಶವಂತ್, ಧ್ರುವಕುಮಾರ್, ಪೂರ್ಣಶ್ರೀ, ಪ್ರಣತಿ, ಮೃಧುಲಾ.ಎಂ.ಗೌಡ, ಬಿ.ಟಿ.ಪ್ರೇಮಾ, ಎಂ.ಹೇಮ0ತ್, ಸಾಗರ್, ಮೋಕ್ಷಿತ್, ಕೆ.ಎಂ.ದರ್ಶನ್, ಕೆ.ಎಸ್.ಕೀರ್ತಿ ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ ಹೊಂದುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ಜೊತೆಗೆ ಇನ್ನೂ 15ವಿದ್ಯಾರ್ಥಿಗಳು ಜಿ.ಎನ್.ಸಹನ, ಸೇತನ್, ನಿತ್ಯಪ್ರಸಾದ್, ಸಿಂಚನ, ಅಪರ್ಣ, ಸಿದ್ದಾರ್ಥ, ಜ್ಞಾನೇಶ್‌ಗೌಡ, ಪುನೀತ್‌ನಾಯಕ್, ಸಿಂಚನ, ಶಾಶಾಂಕ್, ನಿತಿನ್, ಚೇತನ್, ಆಶಿತ, ಕಿರಣ್ ರಾಥೋಡ್ ಜಿ.ಆರ್.ಸಿಂಚನ ಅಂಕಗಳನ್ನು ಪಡೆದ ೫೦೦ಕ್ಕಿಂತ ಹೆಚ್ಚು ಅಂಕ ಪಡೆದು ಶೇ.೮೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಕೀರ್ತಿಗೆ ಭಾಜನವಾಗಿದ್ದಾರೆ.
ಇದಲ್ಲದೆ ೭೪ಮಂದಿ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ. ೪೩ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದ್ದಾರೆ, ೩ಮಂದಿ ತೃತೀಯ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ, ಈ ಮೂಲಕ ೨೦೧೯-೨೦ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ.೭೨.೧೪ರಷ್ಟು ಫಲಿತಾಂಶ ತಂದುಕೊಟ್ಟಿದ್ದಾರೆ ಎಂದು ಮುಖ್ಯ ಶಿಕ್ಷಕ ಎಂ.ಟಿ.ದೇವರಾಜು ಅವರು ತಿಳಿಸಿದ್ದಾರೆ.

ಈ ಪ್ರಮಾಣದ ಸಾಧನೆ ಮಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಹೆಚ್.ಆರ್.ವಿಶ್ವನಾಥ್, ಹಿರಿಯ ಶಿಕ್ಷಕರಾದ ಡಿ.ರಮೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಹೆಚ್.ಆರ್.ವಿಶ್ವನಾಥ್ ಸೇರಿದಂತೆ ಎಲ್ಲಾ ಶಿಕ್ಷಕ ವೃಂದದವರು ಹಾಗೂ ಬೋಧಕೇತರ ವೃಂದವರು ಅಭಿನಂದಿಸಿದ್ದಾರೆ.
ವರದಿ: ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಕೆ.ಆರ್.ಪೇಟೆ.

error: