May 10, 2024

Bhavana Tv

Its Your Channel

ಕೃಷಿ ಭೂಮಿ ಉಳಿಸಿಕೊಳ್ಳಲು ೨೧ ನೇ ದಿನಕ್ಕೆ ಕಾಲಿಟ್ಟ ನಾಗಮಂಗಲ ರೈತರ ಅನಿರ್ದಿಷ್ಟ ಹೋರಾಟ.

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕು ಬೆಳ್ಳೂರು ಹೋಬಳಿಯಲ್ಲಿ ೧೨೭೦ ಎಕರೆ ಕೃಷಿ ಜಮೀನನ್ನು ಕೆಐಡಿಬಿಐ ಕಾರ್ಖಾನೆ ಸ್ಥಾಪಿಸುವ ಸಂಬAಧ ಒತ್ತುವರಿ ಪಡಿಸಿ ಕೊಂಡಿರುವುದು ವಿರೋಧಿಸಿ ಹಟ್ನ ಸುತ್ತಮುತ್ತಲ ಗ್ರಾಮಸ್ಥರ ಅನಿರ್ದಿಷ್ಟ ಹೋರಾಟ ೨೧ ನೇ ದಿನಕ್ಕೆ ಕಾಲಿಟ್ಟಿದೆ

ಪ್ರತಿಭಟನೆಯಲ್ಲಿ ನಿರತರಾದ ಗ್ರಾಮಸ್ಥರು ಹಾಗೂ ರೈತ ಮಹಿಳೆಯರು ಇಂದು ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಕೆಐಡಿಬಿಐ ಅಧಿಕಾರಿ ಸಿಇಓ. ಶಿವಶಂಕರ್. ಮತ್ತು ರಾಜಕಾರಣಿಗಳ ಪ್ರಕೃತಿಯನ್ನು ಅಣುಕು ಶವಯಾತ್ರೆ ಮೂಲಕ ಪ್ರದರ್ಶಿಸಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು

ರೈತನ ಭೂಮಿಯನ್ನು ಕಿತ್ತುಕೊಂಡು ಅಭಿವೃದ್ಧಿ ಎಂಬ ನೆಪ ಮಂತ್ರ ಒಡ್ಡಿ ಭೂ ಸ್ವಾಧೀನ ಮಾಡಿ ಕಾರ್ಖಾನೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಆದೇಶ.ಹಾಗೂ ಕೆ.ಐ.ಎ.ಡಿ.ಬಿ. ಅಧಿಕಾರಿಗಳ ಅವೈಜ್ಞಾನಿಕ ಕ್ರಮ ಮತ್ತು ಬೇಜವಾಬ್ದಾರಿ ರಾಜಕಾರಣಿಗಳು. ಅಧಿಕಾರಿಗಳ ವಿರುದ್ಧ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೊಬಳಿ ರೈತರ ಅನಿರ್ದಿಷ್ಟ ಅವಧಿಯ ಧರಣಿ ೨೧ ನೇ ದಿನಕ್ಕೆ ಕಾಲಿಟ್ಟಿದ್ದು ಹಲವು ರೈತರ ಪರ ಸಂಘಟನೆಗಳ ಬೆಂಬಲ ವ್ಯಕ್ತವಾಗುತ್ತಿದೆ.

ನಾಗಮಂಗಲ ತಾಲ್ಲೂಕು ಬೆಳ್ಳೂರು ಹೋಬಳಿಯ ಚನ್ನಾಪುರ.ಬೀಚನಹಳ್ಳಿ. ಹಟ್ನ. ಮತ್ತು ಬಿಳಗುಂದ ಗ್ರಾಮಗಳ ಕೃಷಿ-ಆಧಾರಿತ ಜಮೀನಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಉದ್ದೇಶದಿಂದ .ಸಿಐ೯೬.ಎಸ್ ಪಿ ( ಇ) ೨೦೧೯. ದಿನಾಂಕ ೧೪.೮. ೨೦೨೦ ರಾಜ್ಯಪತ್ರದ ಆದೇಶವನ್ನು ಹಿಂಪಡೆಯಬೇಕು ಕೃಷಿ ಚಟುವಟಿಕೆಗೆ ಬಳಸುವಂತಹ ಜಮೀನನ್ನು ಉಳಿಸಬೇಕೆಂದು ಸುತ್ತಮುತ್ತಲ ಗ್ರಾಮಸ್ಥರು ಅನಿರ್ದಿಷ್ಟ ಹೋರಾಟವನ್ನು ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಟ್ನ ಗೇಟ್ ಬಳಿ ಕುಟುಂಬ ಸಮೇತರಾಗಿ ಹೋರಾಟ ಆರಂಭಿಸಿದ್ದಾರೆ

ರಾಜಕಾರಣಿಗಳು ಕೂಡ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ಥಳಕ್ಕೆ ಭೇಟಿ ನೀಡಿ ಒಂದೊAದು ಹೇಳಿಕೆಗಳನ್ನು ನೀಡಿ ಹೊರಡುತ್ತಿದ್ದಾರೆ ಸ್ಥಳೀಯ ರೈತರು ಕೂಡ ಭೂಸ್ವಾಧೀನ ಪ್ರಕ್ರಿಯೆ ವಿರೋಧಿ ಹೋರಾಟ ಸಮಿತಿಯನ್ನು ರಚಿಸಿಕೊಂಡು ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳು. ಸಚಿವರು. ಮುಖ್ಯಮಂತ್ರಿಗಳಿಗೂ. ಮನವಿ ಸಲ್ಲಿಸಿ ಈ ಪ್ರಕ್ರಿಯೆಯನ್ನು ಕೈಬಿಡಬೇಕು
ಕೃಷಿ-ಆಧಾರಿತ ಜಮೀನಲ್ಲಿ ಕೈಗಾರಿಕಾ ಪ್ರದೇಶಗಳನ್ನು ತೆರೆದರೆ ರೈತರು ಬೀದಿಗೆ ಬೀಳಬೇಕಾಗುತ್ತದೆ ಎಂದು ಅವಿರತ ಹೋರಾಟ ಮಾಡುತ್ತಿದ್ದಾರೆ

error: